Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಎಸ್ ವೈ ವಿರುದ್ದ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸತ್ಯವನ್ನು ನಂಬದೇ ಇರುವವರಿಗೆ ಸತ್ಯವೆಲ್ಲಾ ಸುಳ್ಳಾಗಿ ಕಾಣುತ್ತದೆ. ಸತ್ಯವನ್ನು ನಂಬುವ ಸ್ವಭಾವ ಕಾಂಗ್ರೆಸ್ ನವರಿಗೆ ಇಲ್ಲ, ಸುಳ್ಳು ಹೇಳುವುದರಲ್ಲಿ ಅವರಿಗಿಂತ ನಿಸ್ಸೀಮರು ಯಾರು ಇಲ್ಲ ಎಂದರು.
Related Articles
Advertisement
ನಟ ರಜನಿಕಾಂತ್ ರಾಜಕೀಯಕ್ಕೆ ಪ್ರವೇಶ ಮಾಡುತ್ತಾರೆ ಎನ್ನುವುದು ಹತ್ತು ವರ್ಷದಿಂದ ಕೇಳಿಬರುತ್ತಿರುವ ಮಾತು. ಅವರು ನಿರ್ಣಯ ಮಾಡದೇ ನಾವು ಪ್ರತಿಕ್ರಿಯೆ ನೀಡೋದು ಸೂಕ್ತವಲ್ಲ, ರಾಜಕೀಯಕ್ಕೆ ಬರುವ ಬಗ್ಗೆ ರಜನಿಕಾಂತ್ ನಿರ್ಣಯ ಮಾಡಲಿ. ನಿರ್ಣಯ ಮಾಡಿದಮೇಲೆ ಸನ್ನಿವೇಶ, ಸಂದರ್ಭ ನೋಡಿ ಮುಂದಿನ ತೀರ್ಮಾನ ಅವರು ಕೈಗೊಳ್ಳಲಿ, ನಾವು ಪ್ರತಿಕ್ರಿಯೆ ಕೊಡುತ್ತೇವೆ. ನಾನು ವೈಯಕ್ತಿಕವಾಗಿ ಅವರ ಜೊತೆ ಮಾತಾನಾಡಿಲ್ಲ ಎಂದು ತಿಳಿಸಿದರು.
ನಿಗಮ ಮಂಡಳಿ ಅಧ್ಯಕ್ಷರ ವಿಚಾರವಾಗಿ ಡಿ.4ರಂದು ಕೋರ್ ಕಮಿಟಿ ಸಭೆ ಇದೆ. ಕೆಲವು ಸಂಗತಿಗಳನ್ನು ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಬೇಕಾಗಿದೆ. ವ್ಯಕ್ತಿಗಳನ್ನು ತೃಪ್ತಿಪಡಿಸೋಕೆ ಆಗುವುದಿಲ್ಲ. ಆಯ್ಕೆಯ ಮಾನದಂಡ ಹಾಗೂ ಆಯ್ಕೆಯ ಪ್ರಕಿಯೆ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ ಎಂದರು.