Advertisement

ಕೈ ಬಿಟ್ಟ ಸಿ.ಪಿ.ಯೋಗೀಶ್ವರ್‌; ಡಿಕೆಶಿ ವಿರುದ್ಧ ಕಿಡಿ 

12:26 PM Oct 14, 2017 | |

ಚನ್ನಪಟ್ಟಣ: ಮಾಜಿ ಸಚಿವ, ಶಾಸಕ ಸಿ.ಪಿ.ಯೋಗೀಶ್ವರ್‌ ಅವರು ಕಾಂಗ್ರೆಸ್‌ ಪಕ್ಷಕ್ಕೆ ಶನಿವಾರ ಗುಡ್‌ಬೈ ಹೇಳಿದ್ದಾರೆ. 

Advertisement

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಯೋಗೀಶ್ವರ್‌ ನಾನು ಕಾಂಗ್ರೆಸ್‌ ನಾಯಕರ ನಡವಳಿಕೆಯಿಂದ ಬೇಸತ್ತು ಪಕ್ಷವನ್ನು ತೊರೆಯುತ್ತಿರುವುದಾಗಿ ತಿಳಿಸಿ, ಕೆಪಿಸಿಸಿ ಅಧ್ಯಕ್ಷ  ಡಾ.ಜಿ.ಪರಮೇಶ್ವರ್‌ ಅವರಿಗೆ ರಾಜೀನಾಮೆ ಪತ್ರ ನೀಡಿದ್ದೇನೆ ಎಂದರು. 

‘ಕಳೆದ ನಾಲ್ಕು ವರ್ಷಗಳಿಂದ ನಾನು ಕಾಂಗ್ರೆಸ್‌ನಲ್ಲಿದ್ದೆ, ಆದರೆ ನಾಯಕರು ನನ್ನನ್ನು ಸರಿಯಾಗಿ ನಡೆಸಿಕೊಂಡಿಲ್ಲ. ನನಗೆ ಕಾಂಗ್ರೆಸ್‌ ಟಿಕೇಟ್‌ ಕೈ ತಪ್ಪಲು ಸಚಿವ ಡಿ.ಕೆ.ಶಿವಕುಮಾರ್‌ ಅವರೇ ಕಾರಣ’ ಎಂದು ಕಿಡಿ ಕಾರಿದರು.

‘ಡಿಕೆಶಿ ನನ್ನ ಮುಂದೆಯೆ ಟಿಕೇಟ್‌ ಹರಿದು ಹಾಕಿದರು. ಏ ಯಾಕಯ್ಯ ನಿನಗೆ ಟಿಕೇಟ್‌ ಎಂದು. ಅವರು ನನ್ನನ್ನು ರಾಜಕೀಯವಾಗಿ ಬೆಳೆಸಿದರು’ ಎಂದು ವ್ಯಂಗ್ಯವಾಡಿದವರು. ಇದೇ ವೇಳೆ ‘ಡಿಕೆಶಿ ಅವರಿಗೆ ಹಣ ಬಲವಿದೆ, ನನಗೆ ಜನಬಲವಿದೆ’ ಎಂದರು. 

ರಾಜಕೀಯ ಜೀವನದ ಮುಂದಿನ ತೀರ್ಮಾನವನ್ನು ಅಕ್ಟೋಬರ್‌ 22 ಕ್ಕೆ ಪ್ರಕಟಿಸುವುದಾಗಿ ತಿಳಿಸಿದ್ದಾರೆ. 

Advertisement

2008 ರಲ್ಲಿ ಆಪರೇಷನ್‌ ಕಮಲಕ್ಕೆ ಗುರಿಯಾಗಿ  ಕಾಂಗ್ರೆಸ್‌ ತೊರೆದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ  ಸಚಿವರಾಗಿದ್ದರು, ಉಪಚುನವಾಣೆಯಲ್ಲಿ ಬಿಜೆಪಿಯಿಂದ ಪುನರಾಯ್ಕೆಯಾಗಿದ್ದರು. 

2013 ರ ಚುನಾವಣೆಯಲ್ಲಿ  ಚನ್ನಪಟ್ಟಣ ಕ್ಷೇತ್ರದಿಂದ ಸಮಾಜವಾದಿ ಪಕ್ಷದಿಂದ ಜಯಗಳಿಸಿದ್ದ ಯೋಗೀಶ್ವರ್‌ ಆಡಳಿತೂರೂಢ ಕಾಂಗ್ರೆಸ್‌ಗೆ ಪುನರ್‌ ಸೇರ್ಪಡೆಯಾಗಿ ಪ್ರಾಥಮಿಕ ಸದಸ್ಯತ್ವ ಪಡೆದಿದ್ದರು. 

ಇದೀಗ ಜೆಡಿಎಸ್‌ ಸೇರ್ಪಡೆ ಕುರಿತಾಗಿ ಮಾತುಕತೆಗಳು ನಡೆದಿರುವ ಬಗ್ಗೆ ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next