Advertisement
ಒಂದು ಕಾಲದಲ್ಲಿ ಬಯ್ಯುತ್ತಿದ್ದ ಜೆಡಿಎಸ್ ಮೇಲೆ ಈಗ ಒಮ್ಮೆಲೆ ಪ್ರೀತಿ ಯಾಕೆ ಬಂತು?ಜೆಡಿಎಸ್ ಮೇಲೆ ಪ್ರೀತಿ ಬಂದಿದೆ ಅಥವಾ ಕಾಂಗ್ರೆಸ್ ಬಗ್ಗೆ ಒಲವಿಲ್ಲ ಅಂತ ಏನಿಲ್ಲಾ . ದೇಶದಲ್ಲಿ ವಾತಾವರಣ ಏನಿದೆ ಅಂತ ನೋಡಿದ್ದೀರಿ. ದೇವೇ ಗೌಡರು- ನಾವು ಅನೇಕ ದಿನಗಳಿಂದ ಮಾತನಾಡುತ್ತಿ ದ್ದೆವು. ಮೊನ್ನೆ ಕುಮಾರಸ್ವಾಮಿ ಮನೆಗೆ ಬಂದು ನೀವು ಪಕ್ಷಕ್ಕೆ ಬನ್ನಿ, ನೀವೇ ರಾಜ್ಯಾಧ್ಯಕ್ಷರಾಗಿ ನಮ್ಮನ್ನು ಲೀಡ್ ಮಾಡಿ ಅಂತ ಹೇಳಿದ್ದಾರೆ. ನಾನು ಏಕಾಏಕಿ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ. ನನ್ನ ಸಮುದಾಯದ ಅಭಿಪ್ರಾಯ ಪಡೆದು ತೀರ್ಮಾನ ತಿಳಿಸುತ್ತೇನೆ ಅಂತ ಹೇಳಿದ್ದೇನೆ. ಡಿ. 15ರಿಂದ ರಾಜ್ಯ ಪ್ರವಾಸ ಮಾಡಿ ಅಭಿಪ್ರಾಯ ಪಡೆದು ತೀರ್ಮಾನ ಮಾಡುತ್ತೇನೆ.
ಸಿದ್ದರಾಮಯ್ಯನವರ ಮೇಲೆ ನನಗೆ ಯಾವುದೇ ಮುನಿಸಿಲ್ಲ. ಅವರ ಪಾಡಿಗೆ ಅವರು ಕೆಲಸ ಮಾಡುತ್ತಿ ದ್ದಾರೆ. ನನ್ನ ಪಾಡಿಗೆ ನಾನು ಕೆಲಸ ಮಾಡುತ್ತಿದ್ದೇನೆ. ನನಗೂ ಒಂದು ದೊಡ್ಡ ಸಮುದಾಯ ಇದೆ. ಸಮು ದಾಯದ ಆಗುಹೋಗುಗಳ ಬಗ್ಗೆ ನೋಡಬೇಕಲ್ಲ. ಆ ಜವಾಬ್ದಾರಿ ನನ್ನ ಮೇಲಿದೆ. ಕಾಂಗ್ರೆಸ್‌ನಲ್ಲಿ ಅಧ್ಯಕ್ಷರನ್ನು ಯಾರನ್ನು ಮಾಡಬೇಕೆಂಬ ಚರ್ಚೆ ನಡೆಯಿತು. ಒಕ್ಕಲಿಗರಾ, ಲಿಂಗಾಯತರಾ, ದಲಿತರಾ ಅಂತ ಚರ್ಚೆಯಾಯಿತು. ಸಾಬರನ್ನು ಮಾಡಬೇಕು ಎನ್ನುವ ಬಗ್ಗೆ ಲೆಕ್ಕಕ್ಕೇ ಇಟ್ಟುಕೊಂಡಿಲ್ಲ. ಅಂದ್ರೆ ಕಾಂಗ್ರೆಸ್ ಮುಸ್ಲಿಮರನ್ನು ಗಣನೆಗೆ ತೆಗೆದುಕೊಂಡಿಲ್ಲ ಅಂತಾನಾ ?
ಕಾಂಗ್ರೆಸ್ ಒಂದೇ ಅಂತಲ್ಲ. ಎಲ್ಲಾ ಪಾರ್ಟಿಗಳ ಹಣೆ ಬರಹ ಅದೇ ಆಗಿದೆ. ನಾವು ನಮ್ಮ ಶಕ್ತಿ ಏನು ಅಂತ ತೋರಿಸಬೇಕಲ್ಲಾ. ಮಗು ಅಳದಿದ್ದರೆ ತಾಯಿ ಹಾಲು ಕುಡಿಸುವುದಿಲ್ಲ. ಇವತ್ತು ಸಮಾಜದಲ್ಲಿ ಜನರು ಎಚ್ಚೆತ್ತುಕೊಂಡಿದ್ದಾರೆ. ಈಗ ಓವೈಸಿ ಬಂದಿ ದ್ದಾರೆ. ನಾವು ಗ್ಯಾಪ್ ಬಿಟ್ಟರೆ ಅವರು ಬಂದು ಲೀಡ್ ಮಾಡುತ್ತಾರೆ. ರಾಜ್ಯದಲ್ಲಿ ಇದುವರೆಗೂ ಹಿಂದೂ ಮುಸ್ಲಿಂ ಅಂತ ಯಾವುದೇ ಗಲಾಟೆ ಇಲ್ಲ. ಮುಂದಿನ ದಿನಗಳಲ್ಲಿ ಅದು ಆಗಬಾರದು.
Related Articles
ನಾನು ಇಷ್ಟು ದಿನಾ ಮಾಡಿ ತೋರಿಸಿಲ್ವಾ? ನಾನಿ ರು ವಾಗ ಜನತಾ ದಳದಲ್ಲಿ 16 ಎಂಪಿ ಸೀಟು ಗೆದ್ದಿರ ಲಿಲ್ಲವಾ? 28 ಜಿಲ್ಲಾ ಪಂಚಾಯತಿಗಳಲ್ಲಿ ಗೆದ್ದಿರಲಿ ಲ್ಲವಾ? ಮುಸ್ಲಿಮರು ಶೇ.80ರಷ್ಟು ಓಟ್ ಬಂದಿದ್ಕೆ ತಾನೇ ಅವಾಗ ಜನತಾದಳ 16 ಎಂಪಿ ಸೀಟು ಗೆದ್ದಿದ್ದು.
Advertisement
ಸಿದ್ದರಾಮಯ್ಯನವರ ಟೇಸ್ಟ್ ಬದಲಾಗಿದೆ ಅಂದ್ರೆ ಏನರ್ಥ ?ಅವರು ಹಿಂದಿನಂಗೆ ಇಲ್ಲ ಅಂತ ನನ್ನ ಭಾವನೆ. ರಾಜಕೀಯವಾಗಿ ಅವರ ಚಿಂತನೆ ನನ್ನ ಚಿಂತನೆ ವ್ಯತ್ಯಾಸವಾಗುತ್ತಿದೆ. ನಿಮಗೆ ಕಾಂಗ್ರೆಸ್ ಮೇಲೆ ಸಿಟ್ಟಾ? ಸಿದ್ದರಾಮಯ್ಯನವರ ಮೇಲೆ ಸಿಟ್ಟಾ?
ವ್ಯವಸ್ಥೆ ಮೇಲೆ ಸಿಟ್ಟು. ಎನ್‌ಆರ್‌ಸಿ ಆಯ್ತು. ಅವಾಗ ಯಾವ ಯಾವ ರಾಜಕೀಯ ಪಕ್ಷಗಳು ಅಲ್ಪ ಸಂಖ್ಯಾತರ ಜೊತೆ ಎಷ್ಟು ನಿಂತವು? ಅದೇನು ಕೇವಲ ಅಲ್ಪಸಂಖ್ಯಾತರಿಗೆ ಮಾತ್ರ ಇತ್ತಾ. ಅಲ್ಪಸಂಖ್ಯಾತರು, ದಲಿತರು ಎಲ್ಲರಿಗೂ ಅನ್ವಯ ಆಗುತ್ತಿತ್ತು. ಆ ಬಗ್ಗೆ ಯಾರು ಎಷ್ಟು ಮುಂದೆ ನಿಂತರು? ಕಾಂಗ್ರೆಸ್‌ನಿಂದ ಯಾವುದೇ ಪೋಸ್ಟರ್ ಬಂದರೂ, ಅದರಲ್ಲಿ ಎಲ್ಲಿಯಾ ದರೂ ಮುಸ್ಲಿಂ ನಾಯಕರ ಫೋಟೋ ಇದಿಯಾ? ಜಮೀರ್ ಅವರದು ಇರುತ್ತಲ್ಲಾ ?
ಅದಕ್ಕೆ ನಾನು ಏನೂ ಹೇಳಲ್ಲಾ .. ಜಮೀರ್‌ಗೆ ಪ್ರಾತಿನಿಧ್ಯ ಸಿಗುತ್ತಿದೆ ಅಂತ ಬೇಸರವೇ ನಿಮಗೆ ?
ಅವರಿಗೆ ಇವರಿಗೆ ಅಂತ ಪ್ರಶ್ನೆ ಅಲ್ಲಾ. ನಿರ್ಧಾರ ತೆಗೆದು ಕೊಳ್ಳುವ ಸ್ಥಾನದಲ್ಲಿ ಯಾವ ಮುಸ್ಲಿಮರಿದ್ದಾರೆ? ಸಲೀಂ ಅಹಮದ್ ಅವರು ಮುಸ್ಲಿಮರಲ್ವಾ ?
ಸಲೀಂ ಅಹಮದ್ ಸೀನಿಯರ್ರಾ? ಅವರು ಡಿಸಿ ಷನ್ ಮಾಡ್ತಾರಾ? ಸಿದ್ದರಾಮಯ್ಯನ ಬಿಟ್ಟು ಎಚ್. ಎಂ. ರೇವಣ್ಣನಿಗೆ ಅಧಿಕಾರ ಕೊಟ್ಟರೆ ಹೇಗಿ ರುತ್ತೆ? ನಾನು ಹೇಳ್ಳೋದು ಸಮುದಾಯ ಯಾರನ್ನು ಗುರುತಿ ಸುತ್ತದೆಯೋ ಅವರಿಗೆ ಜವಾಬ್ದಾರಿ ಕೊಡಬೇಕು. ಜಾಫರ್ ಷರೀಫ್ ನಿಧನದ ನಂತರ ಮುಸ್ಲಿಂ ಸಮುದಾಯದ ನಾಯಕತ್ವದಲ್ಲಿ ಕೊರತೆ ಇದಿಯಾ?
ನಾಯಕತ್ವದ ಕೊರತೆ ಇಲ್ಲ. ಇವರು ಕೊರತೆ ಇದೆ ಎನ್ನುವುದನ್ನು ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪಕ್ಷ ಹೇಳಿದರೆ ಸಮಾಜ ಒಪ್ಪುವುದಿಲ್ಲ. ನನ್ನ ಹೆಂಡ್ತಿ ಯಾರಾಗಬೇಕು ಎಂದು ನಾನು ನಿರ್ಧರಿಸಬೇಕು. ಪಕ್ಕದ ಮನೆಯವರಲ್ಲ… ಸಮಾಜ ಒಪ್ಪಿದರೂ ಪಕ್ಷ ನಿಮ್ಮನ್ನು ಗುರುತಿಸುತ್ತಿಲ್ಲ ಅಂತಾನಾ?
ಸಮಾಜ ಗುರುತಿಸುತ್ತಿದೆ ಅಂತ ಹೇಳ್ಳೋ ಅವಶ್ಯಕತೆ ಇದಿಯಾ? ಅಂಗೈ ಹುಣ್ಣಿಗೆ ಕನ್ನಡಿ ಬೇಕಾ? ಚುನಾವಣೆ ಇದ್ದಾಗ 20 ದಿನ ಪ್ರಚಾರಕ್ಕೆ ಕರೆದುಕೊಂಡು ಹೋಗ್ತಾರೆ. ಪ್ರಚಾರದಲ್ಲಿ ಕಾರು ಕೊಟ್ಟು ತಿರುಗಾಡಿಸ್ತಿದ್ದಾರೆ. ಚುನಾವಣೆ ಮುಗಿದ ಮೇಲೆ ಮೂಲೆಗುಂಪು ಮಾಡುತ್ತಾರೆ. ಕಾಂಗ್ರೆಸ್ ನಿಮ್ಮನ್ನು ಜೋಕರ್ ಥರಾ ಬಳಸ್ಕೊಳ್ತಿದಿಯಾ ?
ಜೋಕರ್ ಅಂತ ಪದಗಳನ್ನು ಹೇಳ್ಳೋದಿಲ್ಲ. ಓಟು ಗಳಿಸೋದಕ್ಕೆ ಮಾತ್ರ ನನ್ನನ್ನು ಉಪಯೋಗಿಸಿ ಕೊಳ್ಳುತ್ತಿದ್ದಾರೆ. ನನ್ನ ಬಿಟ್ಟು 13 ಚುನಾವಣೆ ಮಾಡಿ ದರಲ್ಲಾ ಎಷ್ಟು ಸ್ಥಾನ ಗೆದ್ದರು?. ವಿಧಾನಸಭೆ ಚುನಾ ವಣೆ ಮಾಡಿದರಲ್ಲಾ ಯಾಕೆ 80ಕ್ಕೆ ಇಳಿದ್ರು. ನಾನೇ ನಾ ದರೂ ಹೋಗದಿದ್ರೆ ಇವರು 40 ಕ್ಕೆ ಬರುತ್ತಿ ದ್ದರು. ಶಿರಾ ಗೆಲ್ಲುವ ಸೀಟು ಸೋಲಲಿಲ್ಲವಾ ನಾವು ? ನಿಮ್ಮ ಗೈರು ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ ಅಂತೀರಾ?
ನಿಮಗೆ ಅನಿಸ್ತಿಲ್ವಾ? ಶಿರಾದಲ್ಲಿ ನಾನು ಸ್ಟಾರ್ ಕ್ಯಾಂಪೇನರ್ ಆಗಿದ್ದೆ. ನನ್ನ ಕರೆದ್ರೂ ನಾನು ಹೋಗಲಿಲ್ಲಾ. ಹೆರಿಗೆ ಮಾಡೋಕೆ ನಾವು, ಬಸರು ಮಾಡೋರು ಬೇರೆಯವರು. ಕುಮಾರಸ್ವಾಮಿ ಕಣ್ಣೀರಿಗೆ ಜನರು ಮರುಳಾಗಲ್ಲಾ ಅಂತ ನೀವೇ ಹೇಳಿದ್ದೀರಿ ? ಈಗ ಮನೇಗೆ ಕರೆದು ಊಟ ಹಾಕ್ತಿದ್ದೀರಾ?
ದೇವೇಗೌಡರು, ಕುಮಾರಸ್ವಾಮಿ, ರೇವಣ್ಣನವರ ಬಗ್ಗೆ ವ್ಯಕ್ತಿಗತವಾಗಿ ನಾನು ಯಾವತ್ತೂ ಸಾರ್ವಜನಿಕ ವಾಗಿ ಮಾತನಾಡಿಲ್ಲ. ರಾಜಕೀಯ ವ್ಯವಸ್ಥೆ ಹದಗೆಡುತ್ತಿದೆ. ಬಿಜೆಪಿಯಲ್ಲಿ ಎಲ್ಲವೂ ಹದಗೆಟ್ಟಿದೆ. ಕಾಂಗ್ರೆಸ್‌ನಲ್ಲಿಯೂ ಅದೇ ಪರಿಸ್ಥಿತಿ ಇದೆ. ನಾನು ಜವಾಬ್ದಾರಿ ಇರುವ ನಾಯಕನಾಗಿ ಅದನ್ನು ನೋಡುತ್ತ ಕೂಡಲು ಆಗುವುದಿಲ್ಲ. ನಮ್ಮ ಜವಾಬ್ದಾರಿ ನಿರ್ವಹಣೆ ಮಾಡಬೇಕಾಗುತ್ತದೆ. ನೀವು ರಾಷ್ಟ್ರಮಟ್ಟದಲ್ಲಿ 2ನೇ ಸ್ಥಾನದಲ್ಲಿದ್ದೇ ಅಂತಿದ್ರಿ, ಈಗ ಎಲ್ಲೂ ಸಲ್ಲದವರಾಗಿದ್ದೀರಲ್ಲಾ ?
ನಾನು ಈಗಲೂ ಒಂದನೇ ಸ್ಥಾನದಲ್ಲಿದ್ದೇನೆ. ನನ್ನನ್ನು ಯಾವ ಸಮುದಾಯ ನಿರಾಕರಿಸಿದೆ ಹೇಳಿ ? ಸರ್ಕಲ್‌ನಲ್ಲಿ ನಿಂತರೆ ಈಗಲೂ ಹತ್ತಾರು ಜನರು ಬರುತ್ತಾರೆ. ಮುಸ್ಲಿಮರಷ್ಟೇ ಅಲ್ಲ. ಲಿಂಗಾಯತರೂ, ಒಕ್ಕಲಿಗರೂ ಎಲ್ಲರೂ ನನ್ನ ಜೊತೆಗೆ ಬರುತ್ತಾರೆ. ಆರ್.ಎಸ್.ಎಸ್ ಕೂಡ ನನ್ನನ್ನು ಜಾತಿವಾದಿ, ಕೋಮುವಾದಿ ಎಂದು ಕರೆದಿಲ್ಲ. ದೇವೇಗೌಡರು ಮುಸ್ಲಿಂ ಸಮುದಾಯದ ಹಿತ ಕಾಯುತ್ತಾರೆ ಅಂತ ಅನಿಸುತ್ತಾ?
ದೇವೇಗೌಡರು ಮಾಡ್ತಾರೆ, ಕುಮಾರ ಸ್ವಾಮಿ, ಸಿದ್ದ ರಾಮಯ್ಯ ಮಾಡ್ತಾರಂತಲ್ಲಾ… ಸಮಸ್ಯೆಗಳನ್ನು ಯಾರು ಪರಿಹಾರ ಮಾಡ್ತಾರೆ ಅನ್ನುವುದು ಮುಖ್ಯ. ಗೌಡರು ಪ್ರಧಾನಿಯಾಗಿದ್ದಾಗ ಅವರ ಕೆಲಸ ನೋಡಿ ದ್ದೀರಲ್ಲ. ಮುಸ್ಲಿಂರಿಗೆ ಶೇ 4 ಮೀಸಲಾತಿ ಕೊಟ್ಟವರು ಯಾರು? ವಸತಿ ಶಾಲೆಗಳನ್ನು ಕೊಟ್ಟವರು ಯಾರು? ಅವರು ಮಾಡಿದ್ದಾರೆ. ಸಿದ್ದರಾಮಯ್ಯನವರೂ ಅಲ್ಪ ಸಂಖ್ಯಾತರ ವಿರೋಧಿ ಅಂತ ನಾನು ಹೇಳಿಲ್ಲ. ಈಗ ಜೆಡಿಎಸ್ ಕಡೆ ಮುಖ ಮಾಡಿರೋದು ಅವಕಾಶವಾದಿ ಅನಿಸಲ್ವಾ ?
ಕಾಂಗ್ರೆಸ್ ಸರಿ ಇಲ್ಲಾ ಅಂತ ನಾನು ಹೇಳಿಲ್ಲಾ. ಜನರ ಅಭಿಪ್ರಾಯ ಕೇಳಿ ನಾನು ನಿರ್ಧಾರ ಮಾಡುತ್ತೇನೆ. ರೈತರ ವಿಷಯದಲ್ಲಿ ಜೆಡಿಎಸ್ ನಡೆಯ ಬಗ್ಗೆ ನಿಮಗೇನು ಅನಿಸುತ್ತೆ ?
ರೈತರ ಬಿಲ್‌ಗಳಲ್ಲಿ ಬೇರೆ ಬೇರೆ ಅಭಿಪ್ರಾಯ ಗಳಿಗೆ, ಗೋಹತ್ಯೆ ನಿಷೇಧ ಬಿಲ್‌ನಲ್ಲಿ ಜೆಡಿಎಸ್ ನಮ್ಮ ಪರವಾಗಿ ನಿಂತರು. ಅದಕ್ಕೆ ಬಿಜೆಪಿಯವರು ಬಿಲ್ ಮಂಡನೆ ಮಾಡಲಿಲ್ಲ. ಕುಮಾರಸ್ವಾಮಿ ಬಿಜೆಪಿ ಪರವಾಗಿ ನಡಕೊಳ್ತಿರೋ ಬಗ್ಗೆ ನಿಮಗೇನು ಅನಿಸುತ್ತದೆ ?
ಅವರು ಬಹಿರಂಗವಾಗಿ ನಡೆದುಕೊಳ್ಳುತ್ತಿದ್ದಾರೆ. ಕೆಲವರು ಪರದೆ ಒಳಗೆ ನಡೆದುಕೊಳ್ಳುತ್ತಿದ್ದಾರೆ. ಈಗ ಯಾರು ಏನು ಅಂತ ಮುಸ್ಲಿಮರಿಗೆ
ಗೊಂದಲ ಉಂಟಾಗಿದೆ. ನಿಮ್ಮನ್ನ ಬಿಜೆಪಿ ಕರೆದ್ರೆ ಹೋಗ್ತಿರಾ ?
ಬಿಜೆಪಿಯವರು ಅಂಬೇಡ್ಕರ್ ಬರೆದ ಸಂವಿಧಾನ ಮುಟ್ಟಬಾರದು, ಧರ್ಮಕ್ಕೆ ಕೈ ಹಾಕಬಾರದು. ನಮ್ಮ ಊಟಕ್ಕೆ ಕೈ ಹಾಕಬಾರದು. ಆಗ ಬಿಜೆಪಿಗೆ ಹೋಗುವ ಬಗ್ಗೆ ಆಲೋಚನೆ ಮಾಡಬಹುದು.