Advertisement
ಸರಳ ಉಡುಗೆಇಂದಿನ ಫ್ಯಾಶನ್ ಜಗತ್ತಿನಲ್ಲಿ ಮಹಿಳೆಯರಿಗೆ ಬಹುವಿಧದ ದಿರಿಸುಗಳನ್ನು ಆಯ್ದುಕೊಳ್ಳುವ ಅವಕಾಶವಿದ್ದರೂ ಬಹುತೇಕ ಯುವತಿ ಯರು, ಮಹಿಳೆ ಯರು ಕುರ್ತಾ ವನ್ನೇ ಇಷxಪಡುತ್ತಿದ್ದಾರೆ. ಕುರ್ತಾ ಹೆಣ್ಮಕ್ಕಳ ಇಷ್ಟದ ಉಡುಗೆಗಳಲ್ಲಿ ಒಂದಾಗಿದೆ. ಕಾರಣ, ಕುರ್ತಾ ಧರಿಸಲು ಆರಾಮದಾಯಕ ಮತ್ತು ನೋಡಲು ಸರಳ ಸುಂದರವಾಗಿರುವುದು. ಕುರ್ತಾ ಎಲ್ಲಾ ಸಂದರ್ಭಗಳಿಗೂ ಪರ್‌ಫೆಕ್ಟ್ ಉಡುಪು. ಅಲ್ಲದೆ ಎಲ್ಲ ವಯೋಮಾನದವರೂ ಧರಿಸಬಹುದಾದಂಥದ್ದು. ಅಲ್ಲದೆ ವಿವಿಧ ನಮೂನೆಯ ಕುರ್ತಾಗಳು ಬಟ್ಟೆ ಮಳಿಗೆಗಳಲ್ಲಿ ಅತಿ ಕಡಿಮೆ ಬೆಲೆಗಳಲ್ಲಿಯೂ ಲಭ್ಯವಿವೆ. ಕುರ್ತಾಗಳನ್ನು ಲೆಗ್ಗಿಂಗ್ಸ್, ಪ್ಯಾಂಟ್ಸ್ , ಪಟಿಯಾಲ, ಲಾಂಗ್ ಸ್ಕರ್ಟ್, ಪಲಾಸೋ ಜೊತೆಯೂ ಧರಿಸಬಹುದು. ಹಾಂ! ಚೂಡಿದಾರಕ್ಕಾದರೆ ಹೊಲಿಗೆ ಚಾರ್ಜ್ ನೀಡಬೇಕು, ಆಗಾಗ ಟೈಲರ್ ಅಂಗಡಿ ಅಳೆಯುತ್ತಿರಬೇಕು. ಆದರೆ, ರೆಡಿಮೇಡ್ ಕುರ್ತಾ ಖರೀದಿಸಿದರೆ ಇದ್ಯಾವ ಖರ್ಚೂ ಇಲ್ಲ. ಸ್ವಲ್ಪ ಫಿಟ್ಟಿಂಗÕ… ಸರಿಪಡಿಸಿಕೊಂಡರೆ ಅಷ್ಟೇ ಸಾಕು!
ಹಿಂದೆ ಉದ್ದದ ಕುರ್ತಾಗಳು ಚಾಲ್ತಿಯಲ್ಲಿದ್ದವು. ಇದೀಗ ಆ ಹಳೆಯ ಸ್ಟೈಲೇ ಮತ್ತೆ ಚಾಲ್ತಿಗೆ ಬಂದಿದೆ. ಫ್ಯಾಷನೇಬಲ್ ಹಾಗೂ ಟ್ರೆಡಿಶನಲ್ ಗೆಟಪ್‌ನಲ್ಲೂ ಸಹ ಲಾಂಗ್ ಕುರ್ತಾ ದೊರೆಯುತ್ತದೆ. ಡಿಸೈನರ್, ಎಂಬ್ರಾಯಿಡರಿ, ಪ್ಲೆ„ನ್, ಫ್ಲೋರಲ್, ಸ್ಟ್ರೆಪ್, ಮಲ್ಟಿ ಕಲರ್- ಹೀಗೆ ಹಲವಾರು ವಿನ್ಯಾಸದ ಕುರ್ತಾಗಳು ಲಭಿಸುತ್ತವೆ. ಅನಾರ್ಕಲಿ, ಟ್ರೇಲ್, ಸಿ, ಎ-ಲೈನ್ ಮೊದಲಾದ ಕಟ್‌ಗಳು ಇಂದಿನ ಫ್ಯಾಷನ್ ಟ್ರೆಂಡ್‌ಗಳು. ಈ ಲಾಂಗ್ ಕುರ್ತಾಗಳನ್ನು ಲೆಗ್ಗಿಂಗ್ಸ್ , ಜಗ್ಗಿಂಗ್ಸ್ , ಪಟಿಯಾಲದ ಜೊತೆ ಸಹ ಧರಿಸಬಹುದು. ಪ್ಲೇನ್ ಮತ್ತು ಪ್ರಿಂಟೆಡ್ ಲಾಂಗ್ ಕುರ್ತಾಗಳನ್ನು ಆಫೀಸ್, ಕಾಲೇಜ್ ಅಥವಾ ಫ್ರೆಂಡ್ಸ್ ಜೊತೆ, ಫ್ಯಾಮಿಲಿ ಜೊತೆ ಟೂರ್‌ಗೆ ಹೋಗುವ ಸಂದರ್ಭದಲ್ಲಿ ಸೂಕ್ತವಾದರೆ, ಇನ್ನು ಎಂಬ್ರಾಯಿಡರಿ ಹಾಗೂ ಡಿಸೈನರ್ ಕುರ್ತಾಗಳನ್ನು ಮದುವೆ, ಪಾರ್ಟಿ ಹಾಗೂ ಇತರ ಸಮಾರಂಭಗಳಲ್ಲಿ ಧರಿಸಬಹುದು. ಮದುವೆ ಸಮಾರಂಭಗಳಿಗೆ ಡಿಸೈನರಿ ಲಾಂಗ್ ಕುರ್ತಾ ಗ್ರಾಂಡ್ ಲುಕ್ ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ಫ್ಲೋರಲ್ ಲೆನ್¤ ಕುರ್ತಾಗಳು ಟ್ರೆಂಡಿಂಗ್‌ನಲ್ಲಿದೆ. ಕೇವಲ ಅನಾರ್ಕಲಿ ಮಾತ್ರವಲ್ಲ, ಸ್ಟ್ರೇಟ್ ಕುರ್ತಾವನ್ನು ಸಹ ಫ್ಲೋರಲ್ ಲೆನ್¤ವರೆಗೆ ಧರಿಸಬಹುದು. ಫ್ರಂಟ್ ಕಟ್ ಹೊಂದಿರುವ ಕುರ್ತಾಗಳನ್ನು ಲಾಂಗ್ ಸ್ಕರ್ಟ್ ಅಥವಾ ಸ್ಟ್ರೇಟ್ ಪ್ಯಾಂಟ್‌ಗೆ ಧರಿಸಿದರೆ ಸುಂದರವಾಗಿ ಕಾಣಿಸುತ್ತದೆ.
Related Articles
Advertisement