-80ರಷ್ಟು ಸೀಟು ಗಳಿಸಬಹುದು. ಅಲ್ಲದೇ ಸುಮಾರು 86 ಕ್ಷೇತ್ರಗಳಲ್ಲಿ ಗೆಲ್ಲುವ ಬಲವೇ ಇಲ್ಲವಾಗಿದೆ ಎಂಬ ಅಂಶ ಗೊತ್ತಾಗಿತ್ತು. ಇದನ್ನು ಇತ್ತೀಚಿಗಷ್ಟೇ ರಾಜ್ಯ ಪ್ರವಾಸ ಕೈಗೊಂಡಿದ್ದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗಮನಕ್ಕೂ ತರಲಾಗಿತ್ತು. ಈಗ ಸಿ-ಪೋರ್ ಸಮೀಕ್ಷೆಯಲ್ಲೂ ಬಿಜೆಪಿ 60-70 ಸ್ಥಾನ ಗಳಿಸಬಹುದು ಎಂದು ಹೇಳಿರುವುದು
“ಮಿಷನ್-150′ ಗುರಿ ಹೊಂದಿರುವ ಪಕ್ಷಕ್ಕೆ ಶಾಕ್ ನೀಡಿದೆ ಎನ್ನಲಾಗಿದೆ.
Advertisement
ರಾಜ್ಯದ ಸುಮಾರು 86 ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲ್ಲುವ ಬಲವಿಲ್ಲ ಎಂಬ ಸಂಗತಿ ತಿಳಿದ ಅಮಿತ್ ಶಾ, ಪಕ್ಷ ಸಂಘಟನೆಗೆ ಹಾಗೂ ಕಾಂಗ್ರೆಸ್ ಸರಕಾರದ ವಿರುದಟಛಿ ಹೋರಾಟ ನಡೆಸುವಂತೆ ಖಡಕ್ ಸಂದೇಶ ನೀಡಲೂ ಬಿಜೆಪಿ ಆಂತರಿಕ ಸಮೀಕ್ಷೆ ವರದಿಯೇ ಕಾರಣ ಎನ್ನಲಾಗುತ್ತಿದೆ. ಒಂದೂವರೆ ವರ್ಷಗಳ ಹಿಂದೆ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಕ್ಷ ಸಂಘಟನೆ ಕುರಿತು ನೀಡಿದ್ದ ಸೂಚನೆಯ ಹೊರತಾಗಿಯೂ ಪರಿಣಾಮಕಾರಿಯಾಗಿ ಸಂಘಟನೆ ಮಾಡದಿರುವ ಬಗ್ಗೆಯೂ ಶಾ ಅಸಮಾಧಾನ ವ್ಯಕ್ತಪಡಿಸಿದ್ದರು. ಪ್ರಮುಖವಾಗಿ ಪಕ್ಷಕ್ಕೆ ಯುವಜನರನ್ನು ತರಬೇಕಾದ ರಾಜ್ಯ ಯುವಮೋರ್ಚಾ ಘಟಕ ಸರಿಯಾಗಿ ಕೆಲಸ ಮಾಡದಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದ ಶಾ, ಯುವ ಘಟಕದ ಪದಾಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡಿದ್ದರು. ಪಕ್ಷ ಸಂಘಟನೆ, ಹೋರಾಟಕ್ಕೆ ಮುಂದಾಗದಿದ್ದರೆ ಘಟಕ ಪುನಾರಚನೆ ಅನಿವಾರ್ಯ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ ಎನ್ನಲಾಗಿದೆ.
ಅಮಿತ್ ಶಾ ಎಚ್ಚರಿಕೆ ಹಾಗೂ ಪಕ್ಷದ ಆಂತರಿಕ ಚುನಾವಣೆ ಸಮೀಕ್ಷೆ ಅಂಕಿ-ಅಂಶದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಘಟಕ ಪಕ್ಷ ಸಂಘಟನೆ, ಕಾಂಗ್ರೆಸ್ ಸರಕಾರದ ವಿರುದಟಛಿ ಹೋರಾಟಕ್ಕೆ ಮುಂದಾಗಿದೆ. ಮುಂದಿನ ವಾರ ಬೆಂಗಳೂರಿನಲ್ಲಿ ನಡೆಯುವ ಜಿಲ್ಲಾ ಘಟಕಗಳ ಅಧ್ಯಕ್ಷರು ಹಾಗೂ ಪ್ರಮುಖರ ಸಭೆಯಲ್ಲಿ ಇನ್ನಷ್ಟು ಮಹತ್ವದ ತೀರ್ಮಾನ
ಕೈಗೊಳ್ಳಲಾಗುತ್ತಿದೆ ಎನ್ನಲಾಗಿದೆ. ಅಕ್ಟೋಬರ್ ಕೊನೆ ವೇಳೆಗೆ ಮತ್ತೂಮ್ಮೆ ರಾಜ್ಯಕ್ಕೆ ಬರುವುದಾಗಿ ಅಮಿತ್ ಶಾ ತಿಳಿಸಿದ್ದು, ಅಷ್ಟರೊಳಗೆ ಪಕ್ಷ ಸಂಘಟನೆ, ಹೋರಾಟದ ವರದಿ ಸಿದಟಛಿಪಡಿಸುವ ಒತ್ತಡಕ್ಕೆ ರಾಜ್ಯ ಬಿಜೆಪಿ ಘಟಕ
ಸಿಲುಕಿದೆ ಎನ್ನಲಾಗಿದೆ.