Advertisement

ಚಡಚಣ ಸಹೋದರ ಹತ್ಯೆ, ನಕಲಿ ಎನ್ಕೌಂಟರ್ ಸಂಚು: ನ್ಯಾಯಾಲಯಕ್ಕೆ ಹಾಜರಾದ ಭೈರಗೊಂಡ

09:01 PM Feb 28, 2023 | Team Udayavani |

ವಿಜಯಪುರ: ಭೀಮಾ ತೀರದಲ್ಲಿ ಐದುವರೆ ವರ್ಷದ ಹಿಂದೆ ನಕಲಿ ಎನ್ಕೌಂಟರ್ ಹಾಗೂ ನಿಗೂಢ ಹತ್ಯೆಯಾಗಿದ್ದ ಚಡಚಣ ಸಹೋದರರ ಪ್ರಕರಣದಲ್ಲಿ ಮಹಾದೇವ ಭೈರಗೊಂಡ, ಸಸ್ಪೆಂಡ್ ಆಗಿದ್ದ ಎಸ್ಐ ಸೇರಿದಂತೆ ಏಳು ಆರೋಪಿಗಳು ಮಂಗಳವಾರ ನಗರದಲ್ಲಿರುವ ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗಿದ್ದರು.

Advertisement

ಚಡಚಣ ತಾಲೂಕಿನ ಕೊಂಕಣಗಾಂ ಗ್ರಾಮದ ಜಮೀನಿನಲ್ಲಿ ಎಸ್ಐ ಗೋಪಾಲ ಹಳ್ಳೂರ ನೇತೃತ್ವದಲ್ಲಿ 2017 ಅಕ್ಟೋಬರ್ 30 ನಡೆದಿದ್ದ ಧರ್ಮರಾಜ ಚಡಚಣ ಮೇಲಿನ ನಕಲಿ ಎನ್ಕೌಂಟರ್ ಪ್ರಕರಣ ಜರುಗಿತ್ತು. ಬಳಿಕ ಧರ್ಮರಾಜ ಚಡಚಣನ ತಮ್ಮ ಗಂಗಾಧರ ನಿಗೂಢ ಹತ್ಯೆ ಪ್ರಕರಣ ಜರುಗಿದ್ದವು.

ಸದರಿ ನಕಲಿ ಎನ್ಕೌಂಟರ್ ಪ್ರಕರಣಕ್ಕೆ ಸುಪಾರಿ ನೀಡಿದ ಆರೋಪ ಎದುರಿಸುತ್ತಿರುವ ಚಡಚಣ ಕುಟುಂಬದ ಬದ್ಧವೈರಿ, ಮಹಾದೇವ ಭೈರಗೊಂಡ, ಎಸೈ ಗೋಪಾಲ ಹಳ್ಳೂರು, ಶಿವಾನಂದ ಬಿರಾದಾರ ಸೇರಿದಂತೆ ಸದರಿ ಪ್ರಕರಣದ ಪ್ರಮುಖ ಆರೋಪಗಳು ಜಿಲ್ಲಾ ನ್ಯಾಯಾಲಯ ಸಂಕಿರಣದಲ್ಲಿನ ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ತನ್ನ ಮಗ ಧರ್ಮರಾಜ ಚಡಚಣ ಎನ್ಕೌಂಟರ್ ಹಾಗೂ ನಿಗೂಢವಾಗಿ ಹತ್ಯೆಯಾಗಿರುವ ಗಂಗಾಧರ ಚಡಚಣ ಪ್ರಕರಣದ ಕುರಿತು ತನಿಖೆ ನಡೆಸುವಂತೆ ಚಡಚಣ ಸಹೋದರರ ತಾಯಿ ವಿಮಲಾಬಾಯಿ ಚಡಚಣ ಹೈಕೋರ್ಟ್ ಮೊರೆ ಹೋಗಿದ್ದರು.

ಬಳಿಕ ನ್ಯಾಯಾಲಯದ ಸೂಚನೆ ಮೇರೆಗೆ ತನಿಖೆ ನಡೆಸಿದ ಸಿಐಡಿ ಪೊಲೀಸರು ಮಹಾದೇವ ಭೈರಗೊಂಡ, ಎಸ್ಐ ಗೋಪಾಲ ಹಳ್ಳೂರು ಸೇರಿದಂತೆ ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ಹಲವರನ್ನು ಬಂಧಿಸಿದ್ದರು.

Advertisement

ಬಳಿಕ ಮಹಾದೇವ ಭೈರಗೊಂಡ ಹಾಗೂ ಇತರರು ಜಾಮೀನಿನ ಮೇಲೆ ಹೊರ ಬಂದಿದ್ದಾರೆ.

ಇದಾದ ಬಳಿಕ ಚಡಚಣ ಬೆಂಬಲಿಗರು ಶಸ್ತ್ರಾಸ್ತ್ರ ಹಾಗೂ ಮಾರಕಾಸ್ತ್ರಗಳ ಸಹಿತ ಮಹಾದೇವ ಭೈರಗೊಂಡ ಮೇಲೆ ದಾಳಿ ನಡೆಸಿದ್ದರು. ಪರಿಣಾಮ ಮಹಾದೇವ ಗಾಯಗೊಂಡು, ಚಿಕಿತ್ಸೆ ಬಳಿಕ ಗ್ರಾಮಕ್ಕೆ ಮರಳಿದ್ದರು.

ಮತ್ತೊಂದೆಡೆ ಕೆಲವೇ ದಿನಗಳ ಹಿಂದೆ ಚಡಚಣ ಪಟ್ಟಣದಲ್ಲಿ ಸಾರ್ವಜನಿಕ ಸಭೆ ಏರ್ಪಡಿಸಿದ್ದ ಎಡಿಜಿಪಿ ಅಲೋಕಕುಮಾರ, ಚಡಚಣ ಹಾಗೂ ಭೈರಗೊಂಡ ಕುಟುಂಬಗಳ ಮಧ್ಯೆ ರಾಜಿ ಸಂಧಾನ ಮಾಡಿಸಿದ್ದರು.

ಈ ಬೆಳವಣಿಗೆ ಬಳಿಕ ಇದೇ ಮೊದಲ ಬಾರಿಗೆ ಮಹಾದೇವ ಭೈರಗೊಂಡ ವಿಚಾರಣೆಗಾಗಿ ಮಂಗಳವಾರ ವಿಜಯಪುರ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

ಇದನ್ನೂ ಓದಿ: ಮಂಗಳೂರು: ರೈಲಿನಲ್ಲಿ ಕಳೆದು ಹೋಗಿದ್ದ ಚಿನ್ನಾಭರಣಗಳಿದ್ದ ಟ್ರಾಲಿ ಬ್ಯಾಗ್‌ ಪತ್ತೆ

Advertisement

Udayavani is now on Telegram. Click here to join our channel and stay updated with the latest news.

Next