ಹೊಸದಿಲ್ಲಿ: ಜನವರಿ 29ರಂದು ರಾಜಸ್ಥಾನದ ಅಜ್ಮಿàರ್ ಹಾಗೂ ಅಲ್ವಾರ್ ಸಂಸತ್ ಕ್ಷೇತ್ರಗಳಿಗೆ ಹಾಗೂ ಮದಲ್ಗಡ್ ವಿಧಾನಸಭಾ ಕ್ಷೇತ್ರಕ್ಕೆ ನಡೆದಿದ್ದ ಉಪ ಚುನಾವಣೆಗಳ ಫಲಿತಾಂಶ ಗುರುವಾರ ಹೊರಬಿದ್ದಿದ್ದು, ಈ ಮೂರೂ ಚುನಾವಣೆ ಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಇದು ಆಡಳಿತಾರೂಢ ಬಿಜೆಪಿಯನ್ನು ಮುಜುಗರಕ್ಕೀಡು ಮಾಡಿದೆ.
ಅಜ್ಮಿàರ್, ಅಲ್ವಾರ್ ಲೋಕಸಭಾ ಕ್ಷೇತ್ರಗಳಲ್ಲಿ ಕ್ರಮವಾಗಿ ರಘು ಶರ್ಮಾ ಹಾಗೂ ಕರಣ್ ಸಿಂಗ್ ಯಾದವ್ ಜಯ ಗಳಿಸಿದ್ದರೆ, ಮದಲ್ಗಡ್ ವಿಧಾನಸಭಾ ಕ್ಷೇತ್ರದಲ್ಲಿ ವಿವೇಕ್ ಧಾಕಡ್ ವಿಜಯಿಯಾಗಿದ್ದಾರೆ.
ಅಜ್ಮಿàರ್‌ನಲ್ಲಿ ರಘು ಶರ್ಮಾ ಅವರು, ಬಿಜೆಪಿಯ ರಾಮ್ ಸ್ವರೂಪ್ ಲಂಬಾ ವಿರುದ್ಧ 84,000 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದರೆ, ಅಲ್ವಾರ್ ಸಂಸತ್ ಕ್ಷೇತ್ರದಲ್ಲಿ ಕರಣ್ ಸಿಂಗ್ ಯಾದವ್ ಅವರು, ಬಿಜೆಪಿಯ ಜಸ್ವಂತ್ ಸಿಂಗ್ ಯಾದವ್ ವಿರುದ್ಧ 1.96 ಲಕ್ಷ ಮತಗಳಿಂದ ಗೆಲುವು ಪಡೆದಿದ್ದಾರೆ. ಇನ್ನು ಮದಲ್ಗಡ್ ವಿಧಾನಸಭಾ ಕ್ಷೇತ್ರದಲ್ಲಿ ಧಾಕಡ್ ಅವರು, ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಶಕ್ತಿ ಸಿಂಗ್ ಹಾಡಾ ವಿರುದ್ಧ 12, 976 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ.
ಬಂಗಾಳದಲ್ಲೂ ಬಿಜೆಪಿಗೆ ಹಿನ್ನಡೆ
ಇನ್ನು ಪ. ಬಂಗಾಳದ ನೊವಾಪರಾ ವಿಧಾನಸಭಾ ಕ್ಷೇತ್ರದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಸಜಾª ಅಹ್ಮದ್ ಗೆಲವು ಸಾಧಿಸಿದ್ದರೆ, ಉಲುಬೆರಿಯಾ ಲೋಕಸಭಾ ಕ್ಷೇತ್ರದಲ್ಲಿ ಟಿಎಂಸಿಯ ಸುನಿಲ್ ಸಿಂಗ್ ಜಯಶಾಲಿಯಾಗಿದ್ದಾರೆ.