Advertisement

Byndoor: ವಾಹನಕ್ಕೆ ಬೆಂಕಿ- ಲಕ್ಷಾಂತರ ರೂ. ನಷ್ಟ

12:40 AM Nov 24, 2023 | Team Udayavani |

ಬೈಂದೂರು: ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗಲಿ ಕಾರು ಮತ್ತು ದ್ವಿಚಕ್ರ ವಾಹನ ಸುಟ್ಟು ಹೋಗಿದೆ.ಬುಖಾರಿ ಕಾಲನಿಯಾ ಸಿನಾ ಫಹಿನ್‌ ಮನೆಯಲ್ಲಿ ಈ ಅವಘಡ ಸಂಭವಿಸಿದೆ.

Advertisement

ಮನೆಯ ಹಾಲ್‌ ಸುಟ್ಟು ಕರಕಲಾಗಿದೆ. ಶೆಡ್‌ನ‌ಲ್ಲಿ ನಿಲ್ಲಿಸಿದ್ದ ಮಾರುತಿ ಶಿಫ್ಟ್ ಕಾರಿಗೆ ಮತ್ತು ಸುಜುಕಿ ಮೋಟಾರ್‌ ಸೈಕಲಿಗೆ ಬೆಂಕಿ ತಗಲಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಈ ಅವಘಡದಿಂದಾಗಿ ಅಂದಾಜು 16,70,000 ರೂ. ನಷ್ಟ ಉಂಟಾಗಿದೆ. ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next