Advertisement
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಯಡ್ತರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಸ್ ನಿಲ್ದಾಣ ಕಾಮಗಾರಿ ಮುಗಿದು ಗುತ್ತಿಗೆದಾರರು ಸರಕಾರಕ್ಕೆ ಹಸ್ತಾಂತರಿಸಿದರೂ ಕೂಡ ಉದ್ಘಾಟನೆ ಭಾಗ್ಯ ಕಂಡಿಲ್ಲ. 2018ರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಎಸ್. ಆರ್. ಉಮಾಶಂಕರ್ ಈ ನಿಲ್ದಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಗ್ರಾಮೀಣ ಮತ್ತು ನಗರ ಭಾಗಗಳಿಗೆ ಹೆಚ್ಚು ಬಸ್‌ಗಳನ್ನು ಒದಗಿಸಿ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉಡುಪಿಯಲ್ಲಿ 34 ಕೋಟಿ ಬಸ್ ನಿಲ್ದಾಣ ಹಾಗೂ 6 ಕೋ.ರೂ. ವೆಚ್ಚದಲ್ಲಿ ಡಿಪೋ, ಬೈಂದೂರಿನಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಬಸ್ ನಿಲ್ದಾಣ ಹಾಗೂ 6 ಕೋಟಿ ರೂ. ವೆಚ್ಚದಲ್ಲಿ ಡಿಪೋ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿತ್ತು
ಶಂಕುಸ್ಥಾಪನೆ ಬಳಿಕ ಸರಕಾರ ಬದಲಾವಣೆಯಾಗಿ ಶಾಸಕರು ಕೂಡ ಬದಲಾಗಿದ್ದರು. ನೂತನ ಶಾಸಕರು ಮತ್ತೊಮ್ಮೆ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು. ಕೊಲ್ಲೂರು ದೇವಸ್ಥಾನದ ಯಾತ್ರಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಯಡ್ತರೆ ಬಳಿಯಲ್ಲಿ ಇದನ್ನು ನಿರ್ಮಿಸಲಾಗಿದೆ. ಎರಡು ಬಾರಿ ಶಂಕುಸ್ಥಾಪನೆ ಮಾಡುವ ಉತ್ಸಾಹ ಉದ್ಘಾಟನೆ ಮಾಡುವ ವಿಚಾರದಲ್ಲಿ ಕಂಡುಬಂದಿಲ್ಲ. ಅತೀ ಅಗತ್ಯದ ನಿಲ್ದಾಣವಿದು
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಬೈಂದೂರು ಯಡ್ತರೆ ಬೈಪಾಸ್ ಬಳಿಯ ಈ ನಿಲ್ದಾಣ ಪ್ರಯಾಣಿಕರಿಗೆ ಅತಿ ಅಗತ್ಯವಾದ ನಿಲ್ದಾಣವಾಗಿದೆ. ದೂರದ ಊರುಗಳಿಂದ ಬರು ವವರಿಗೆ ಶೌಚ ಮತ್ತಿತರ ಅಗತ್ಯಗಳಿಗೆ ಇದು
ಅನುಕೂಲವಾಗಿದೆ. ಜತೆಗೆ ಅದೆಷ್ಟೋ ಬಸ್ ಗ ಳಿಗೆ, ಪ್ರಯಾಣಿಕರಿಗೆ ಬಸ್ ಕಾಯಲುಬೇಕಾಗಿದೆ.
Related Articles
ಬಸ್ ನಿಲ್ದಾಣ ಉಳಿದ ಕಾಮಗಾರಿಗೆ ಈಗಾಗಲೇ ಅನುದಾನ ಮಂಜೂರಾಗಿದೆ. ಟೆಂಡರ್ ಕೂಡ ಆಗಿದೆ. ಗುತ್ತಿಗೆದಾರರು ಕಾಮಗಾರಿ ಮುಗಿಸಿ ಇಲಾಖೆಗೆ ಹಸ್ತಾಂತರಿಸಿದ್ದಾರೆ.ಆದರೆ ಆಧಿಕಾರಿಗಳು ಇದರ ಪೂರ್ಣತೆಗೆ ಗಮನಹರಿಸದಿರುವುದು ಬೇಸರದಾಯಕವಾಗಿದೆ.
*ಭೋಜರಾಜ ಶೆಟ್ಟಿ, ಬೈಂದೂರು ನಿವಾಸಿ
Advertisement
* ಅರುಣಕುಮಾರ ಶಿರೂರು