Advertisement
ನಬಾರ್ಡ್ ಹಾಗೂ ಜಲಜೀವನ್ ಮಿಷನ್‌ನಡಿ ಜಂಟಿಯಾಗಿ ಬೈಂದೂರು ಕ್ಷೇತ್ರದ 53,425 ಮನೆಗಳಿಗೆ ಪ್ರತಿ ನಿತ್ಯ ನಳ್ಳಿ ಮೂಲಕ ಗಂಗೆ (ನೀರು) ಪೂರೈಸುವ ಯೋಜನೆ ಇದಾಗಿದೆ. ಕ್ಷೇತ್ರದಲ್ಲಿ ಉಪ್ಪು ನೀರಿನಿಂದಾಗಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟರ ಮುತುವರ್ಜಿಯಲ್ಲಿ ಈ ಯೋಜನೆ ಅವರ ಸಾಕಾರಗೊಳ್ಳುತ್ತಿದೆ.
Related Articles
Advertisement
ಬೈಂದೂರು ವಿಧಾನಸಭಾ ಕ್ಷೇತ್ರದ 59 ಗ್ರಾಮಗಳ (39 ಗ್ರಾ.ಪಂ.) ಹಾಗೂ ಬೈಂದೂರು ಪಟ್ಟಣ ಪಂಚಾಯತ್ (3 ಗ್ರಾಮ)ಯ 53,425 ಮನೆಗಳಿಗೆ ಈ ಯೋಜನೆ ಮೂಲಕ ನೀರು ಪೂರೈಸಲಾಗುತ್ತದೆ. ಇದರಲ್ಲಿ ಗ್ರಾಮೀಣ ಭಾಗದ 788 ಜನವಸತಿ ಪ್ರದೇಶ ಹಾಗೂ ಪಟ್ಟಣ ಪಂಚಾಯತ್ ವ್ಯಾಪ್ತಿಯ 60 ಸೇರಿದಂತೆ ಒಟ್ಟು 848 ಜನವಸತಿ ಪ್ರದೇಶಗಳಿಗೆ ನೀರು ಸರಬರಾಜು ಆಗಲಿದೆ. ಇದರಲ್ಲಿ ಪ್ರತಿ ಗ್ರಾಮಗಳ ವ್ಯಾಪ್ತಿಯಲ್ಲಿ ಈಗಿರುವ 220 ಟ್ಯಾಂಕ್‌ಗಳು ಹಾಗೂ ಹೊಸದಾಗಿ ನಿರ್ಮಾಣವಾಗಲಿರುವ 128 ಟ್ಯಾಂಕ್ ಸೇರಿ ಒಟ್ಟು 348 ಟ್ಯಾಂಕ್‌ಗಳಿಗೆ ನೀರು ಪೂರೈಕೆಯಾಗಲಿದೆ.
ನೀರಿನ ಸಮಸ್ಯೆಗೆ ಮುಕ್ತಿ: ಬೈಂದೂರಿನ ಜನ ಬೇಸಗೆಯಲ್ಲಿ ಪ್ರತಿ ವರ್ಷ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಆದ್ದರಿಂದ ಈ ಸಮಸ್ಯೆಗೆ ಶಾಶ್ವತ ಪರಿಹಾರ ನಿಟ್ಟಿನಲ್ಲಿ ಈ ದೊಡ್ಡ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದರಿಂದ ಪ್ರತಿ ಮನೆಗಳಿಗೂ ವರದಾನವಾಗಲಿದೆ. –ಬಿ.ವೈ. ರಾಘವೇಂದ್ರ, ಸಂಸದರು
ಕೊಟ್ಟ ಮಾತಿನಂತೆ ಈಡೇರಿಕೆ: ಚುನಾವಣೆ ಸಂದರ್ಭದಲ್ಲಿ ಜನರಿಗೆ ಪ್ರತಿ ಮನೆ-ಮನೆಗೆ ನೀರು ಕೊಡುವ ಭರವಸೆಯನ್ನು ನೀಡಿದ್ದೆ. ಅದನ್ನು ಈಗ ಈಡೇರಿಸುವ ನಿಟ್ಟಿನಲ್ಲಿ ಈ ಮಹತ್ವದ ಯೋಜನೆಗೆ ಮುಖ್ಯಮಂತ್ರಿಗಳೇ ಶಂಕುಸ್ಥಾಪನೆ ನೆರವೇರಿಸುತ್ತಿದ್ದಾರೆ. ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. –ಬಿ.ಎಂ. ಸುಕುಮಾರ್ ಶೆಟ್ಟಿ ಬೈಂದೂರು ಶಾಸಕರು