Advertisement
ಬೈಂದೂರಿನಲ್ಲಿ ಅಗ್ನಿ ಶಾಮಕ ಠಾಣೆ ಕಾರ್ಯಾರಂಭ ಮಾಡಿ ನಾಲ್ಕು ವರ್ಷವಾಗಿದೆ. ಆದರೆ, ಸ್ವಂತ ಕಟ್ಟಡ ಇರಲಿಲ್ಲ. ಈಗ ಕರ್ನಾಟಕ ಪೋಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನೂತನ ಕಟ್ಟಡ ನಿರ್ಮಿಸಿದೆ. ಈ ಕಟ್ಟಡದಲ್ಲಿ ಎರಡು ವಾಹನಗಳ ನಿಲುಗಡೆಗೆ ಅವಕಾಶವಿದೆ. ಜತೆಗೆ ವಿಶ್ರಾಂತಿ ಕೊಠಡಿ, ನಿಸ್ತಂತು ಕೊಠಡಿ, ಸಂಗ್ರಹಣಾ ಕೊಠಡಿ ಹಾಗೂ ಠಾಣಾಧಿಕಾರಿ ಕಚೇರಿಗಳನ್ನು ಒಳಗೊಂಡಿದೆ. ಪ್ರಸ್ತುತ ಒಂದೇ ವಾಹನವಿದ್ದು, ಇನ್ನೊಂದು ವಾಹನದ ಬೇಡಿಕೆಯಿದೆ.
ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ಅಗ್ನಿಶಾಮಕ ಠಾಣೆ ಆರಂಭಿಸಲು ಹತ್ತಾರು ವರ್ಷಗಳಿಂದ ಹೋರಾಟ ನಡೆದಿದೆ. 2015-16ರ ಸುಮಾರಿಗೆ ಅಂದಿನ ಶಾಸಕ ಕೆ. ಗೋಪಾಲ ಪೂಜಾರಿ ಯೋಜನಾ ನಗರದ ಬಳಿ ಸುಮಾರು ಒಂದು ಏಕ್ರೆ ಜಾಗ ಗುರುತಿಸಿ, ಸರ್ಕಾರದಿಂದ ಮಂಜೂರಾತಿ ಒದಗಿಸಿದ್ದರು. ಆದರೆ ತಾಂತ್ರಿಕ ಕಾರಣಗಳಿಂದ ಸರ್ಕಾರದ ಅನುಮೋದನೆ ವಿಳಂಬವಾಯಿತು. ಸದ್ಯ ತಾತ್ಕಾಲಿಕ ಕಟ್ಟಡದಲ್ಲಿ
2020ರಲ್ಲಿ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಅಂದಿನ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಪ್ರಯತ್ನದಿಂದ ಬೆ„ಂದೂರಿಗೆ ಅಗ್ನಿಶಾಮಕ ಠಾಣೆ ಮಂಜೂರಾಗಿ ಕಳೆದ ನಾಲ್ಕು ವರ್ಷದಿಂದ ತಾತ್ಕಾಲಿಕ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದಕ್ಕಿಂತ ಮೊದಲು ಬೈಂದೂರಿನಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದರೆ 40-50 ಕಿ.ಮೀ ದೂರದ ಕುಂದಾಪುರ ಅಥವಾ ಭಟ್ಕಳದಿಂದ ಅಗ್ನಿಶಾಮಕದಳದವರು ಆಗಮಿಸಬೇಕಾಗಿತ್ತು.
Related Articles
ಬೈಂದೂರು ಅಗ್ನಿಶಾಮಕ ಠಾಣೆಯ ಸ್ವಂತ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು ಮೇಲಧಿಕಾರಿಗಳ ಆದೇಶದ ಬಳಿಕ ಶೀಘ್ರವೇ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು.
-ವಿನಾಯಕ ಕಲ್ಗುಟ್ಕರ್, ಜಿಲ್ಲಾ ಅಗ್ನಿಶಾಮಕದಳದ ಅಧಿಕಾರಿ
Advertisement
ಶೀಘ್ರ ಹಸ್ತಾಂತರಕಟ್ಟಡ ನಿರ್ಮಾಣಕ್ಕೆ ಮೂರು ಕೋಟಿ ರೂಪಾಯಿ ಮಂಜೂರಾಗಿದೆ. 2.31 ಕೋಟಿ ರೂಪಾಯಿ ಖರ್ಚಾಗಿದೆ. ಕಟ್ಟಡವನ್ನು ಶೀಘ್ರ ಸಂಬಂಧಿತ ಇಲಾಖೆಗೆ ಹಸ್ತಾಂತರಿಸಲಾಗುವುದು.
-ರಾಜೇಶ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು – ಅರುಣ್ ಕುಮಾರ್ ಶಿರೂರು