Advertisement

ಬೈಂದೂರು ರಥಬೀದಿ ಟ್ರಾಫಿಕ್‌ ಅವ್ಯವಸ್ಥೆ

07:25 AM Sep 10, 2017 | Team Udayavani |

ಬೈಂದೂರು: ತಾಲೂಕು ಕೇಂದ್ರವಾಗಿ ಬೆಳೆಯು ತ್ತಿರುವ ಬೈಂದೂರಿನ ಪೇಟೆಯಲ್ಲಿ ಸಾರ್ವಜನಿಕರು ನಡೆ ದಾಡಲು ಸಹ  ಹರಸಾಹಸಪಡಬೇಕಾಗಿದೆ. ಅಸಮರ್ಪಕ ವಾಹನ ಪಾರ್ಕಿಂಗ್‌ನಿಂದಾಗಿ ವಿದ್ಯಾರ್ಥಿಗಳು, ಸಾರ್ವಜನಿಕರು ನಿತ್ಯಯಾತನೆ ಅನುಭವಿಸುವಂತಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಇಲಾಖೆಗಳ ನಿರ್ಲಕ್ಷ್ಯದಿಂದಾಗಿ ತಾಲೂಕು ಕೇಂದ್ರ ಸಂಚಾರ ವ್ಯವಸ್ಥೆ ಅವ್ಯವಸ್ಥೆಯ ಆಗರವಾಗಿ ಪರಿಗಣಿಸಿದೆ. 

Advertisement

ದಿನನಿತ್ಯ ವಾಹನ ಪಾರ್ಕಿಂಗ್‌ ಕಿರಿಕಿರಿ
ಬೈಂದೂರು ಹೃದಯ ಭಾಗಕ್ಕೆ ಪ್ರಮುಖವಾಗಿ ಸಂಪರ್ಕ ಕಲ್ಪಿಸುವುದು ರಥಬೀದಿಯಾಗಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಪಡುವರಿ,  ಯಡ್ತರೆ, ಸೋಮೇಶ್ವರ ರಸ್ತೆಗಳು ಇಲ್ಲಿನಿಂದಲೇ ಸಂಪರ್ಕ ಪಡೆದುಕೊಳ್ಳುತ್ತಿದೆ. ಈ ರಥಬೀದಿ ಅಕ್ಕಪಕ್ಕದಲ್ಲಿ ಹತ್ತಾರು ಹೂವಿನ ಅಂಗಡಿ, ವ್ಯಾಪಾರಸ್ಥರ ಪೆಟ್ಟಿಗೆ ಅಂಗಡಿಗಳಿವೆ. ಇನ್ನೊಂದೆಡೆ ಕೆಲವು ದೊಡ್ಡ ಅಂಗಡಿಗಳು ಇದೇ ಮಾರ್ಗದಲ್ಲಿದೆ. ಹೀಗಾಗಿ ವಾಹನಗಳು ರಸ್ತೆಯ ಮಧ್ಯಭಾಗದಲ್ಲಿ ನಿಲ್ಲಿಸಿ ಅಂಗಡಿ ಗಳಲ್ಲಿ ವ್ಯಾಪಾರಕ್ಕೆ ತೆರಳುತ್ತಾರೆ. ಇದರಿಂದಾಗಿ ವಾಹನದ ಹಿಂದುಗಡೆ ಹತ್ತಾರು ವಾಹನಗಳು ಜಮಾವಣೆಗೊಳ್ಳುತ್ತದೆ. ಅದರಲ್ಲೂ  ಶಾಲಾ ಕಾಲೇಜುಗಳು ಬಿಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಈ ವಾಹನಗಳ ಕಿರಿಕಿರಿಯಿಂದಾಗಿ ರಸ್ತೆಯ ಪಕ್ಕದಲ್ಲೂ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಅವ್ಯವಸ್ಥೆಯಿಂದ ವಾಹನ ನಿಲುಗಡೆಗೊಳಿಸುವ ಕಾರಣ ಗಂಟೆಗಟ್ಟಲೆ ತಡೆ ಉಂಟಾಗುತ್ತದೆ. ಆರಕ್ಷಕ ಇಲಾಖೆ ಈ ಬಗ್ಗೆ ಕ್ರಮಕೈಗೊಳ್ಳುತ್ತಿಲ್ಲ.   

ತಾಲೂಕು ಕೇಂದ್ರವಾಗಿ ಬೆಳೆಯುತ್ತಿರುವ ಬೈಂದೂರಿ ನಲ್ಲಿ ವಾಹನಗಳ ಅವ್ಯವಸ್ಥೆ ಸರಿಪಡಿಸಬೇಕು. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಕ್ರಮಕೈಗೊಳ್ಳಬೇಕಾಗಿದೆ ಎನ್ನುವುದು ಸಾರ್ವಜನಿಕರ ಆಶಯವಾಗಿದೆ. 

ಸ್ಥಳೀಯ ಗ್ರಾ.ಪಂ. ಈ ಬಗ್ಗೆ ಪ್ರತಿಕ್ರಿಯಿಸಿ, ಈಗಾಗಲೇ ಕೆಲವು ಅಂಗಡಿಯವರಿಗೆ ನೋಟಿಸ್‌ ನೀಡಲಾಗಿದೆ. ಆರಕ್ಷಕ ಇಲಾಖೆ ಸಮರ್ಪಕ ಕ್ರಮಕೈಗೊಂಡರೆ ಸಮಸ್ಯೆ ಪರಿಹಾರ ಮಾಡಲು ಸಾಧ್ಯ. ಹೀಗಾಗಿ ಬೈಂದೂರಿನ ಅಭಿವೃದ್ಧಿ ದೃಷ್ಟಿಯಿಂದ ಇಲ್ಲಿನ ರಥಬೀದಿ ಅವ್ಯವಸ್ಥೆ ಸರಿಪಡಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next