Advertisement
ಕಾಲೇಜು ಸಭಾಂಗಣದ ಬಿ. ಎಚ್. ಶ್ರೀಧರ ವೇದಿಕೆಯಲ್ಲಿ ಹಿರಿಯ ಪತ್ರಕರ್ತ, ಎಸ್. ಜನಾರ್ದನ ಮರವಂತೆ ಅಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನಕ್ಕೆ ಸಾಧನಾ-2019 ಎಂಬ ಹೆಸರಿಡಲಾಗಿದೆ.
Related Articles
ಅಧ್ಯಾಪಕನಾಗಿ, ಪಂಚಾಯತ್ ರಾಜ್ಯ ಗ್ರಾಮೀಣ ಅಭಿವೃದ್ಧಿಯ ಸಂಪನ್ಮೂಲ ವ್ಯಕ್ತಿಯಾಗಿ, ಪತ್ರಕರ್ತನನಾಗಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ದುಡಿದ ಅನುಭವದಲ್ಲಿ ಈ ಜವಾಬ್ದಾರಿ ಸಿಕ್ಕಿರುವುದು ವಿಶೇಷ ಅವಕಾಶ ಹಾಗೂ ಸಂತಸ ನೀಡಿದೆ.
Advertisement
ಜನರಲ್ಲಿ ಸಾಹಿತ್ಯದ ಕಡೆಗೆ ಆಸಕ್ತಿ ಕಡಿಮೆಯಾಗುತ್ತಿದೆಯೇ?ಹೌದು. ಇಂದು ಜಾಲತಾಣಗಳ ಕಡೆಗೆ ಜನರು ಹೆಚ್ಚು ಆಕರ್ಷಿತರಾಗಿರುವುದರಿಂದ ಪುಸ್ತಕದ ಓದು ಕಡಿಮೆಯಾಗಿದೆ. ವಿದ್ಯಾರ್ಥಿಗಳ ಜೀವನದಲ್ಲೇ ಮಕ್ಕಳಿಗೆ ಓದಿನ ಮಹತ್ವದ ಕುರಿತು ತಿಳಿಸುವ ಜವಾಬ್ದಾರಿ ಶಿಕ್ಷಕರ ಹಾಗೂ ಪಾಲಕರ ಮೇಲಿದೆ. ಪುಸ್ತಕದ ಓದು ಮೌಲ್ಯಯುತ ಜೀವನಕ್ಕೆ ದಾರಿದೀಪವಾಗುತ್ತದೆ. ಇದನ್ನು ತಿಳಿಸುವ ಜವಾಬ್ದಾರಿ ಸಮ್ಮೇಳನದ ಮೇಲಿದೆ. ಗ್ರಾಮೀಣ ಭಾಗಗಳಲ್ಲಿ ಸಾಹಿತ್ಯ ಸಮ್ಮೇಳನ ಹೇಗೆ ಪ್ರಭಾವ ಬೀರುತ್ತದೆ?
ಪ್ರತಿ ಊರಿನಲ್ಲೂ ಕೂಡ ಕವನಗಾರರು, ಕಥೆಗಾರರು, ಲೇಖಕರು ಹೆಚ್ಚುತ್ತಿದ್ದಾರೆ. ಸಮ್ಮೇಳನದ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿವುಳ್ಳವರನ್ನು ಸಂಘಟಿಸಲು ಇದರಿಂದ ಸಾಧ್ಯವಾಗುತ್ತಿದೆ. ಸಮ್ಮೇಳನಕ್ಕೆ ಸಾಕಷ್ಟು ಜನರು ಬರುತ್ತಾರೆ. ಇದು ಜನರಿಗೆ ಪುಸ್ತಕ ಓದಲು ಪ್ರಭಾವ ಬೀರುತ್ತದೆ. 80ರ ಇಳಿವಯಸ್ಸಿನಲ್ಲಿ ಈ ಚಟುವಟಿಕೆ ಹೇಗೆ?
ಯಾವುದೇ ದುಶ್ಚಟಗಳಿಲ್ಲದೆ ಇರುವುದರಿಂದ ಆರೋಗ್ಯದ ಸಮಸ್ಯೆ ಇಲ್ಲ. ಎಲ್ಲ ಕ್ಷೇತಗಳಲ್ಲೂ ಆಸಕ್ತಿಯಿಂದ ತೊಡಗಿಸಿಕೊಂಡು ಯಶಸ್ಸು ಕಂಡಿದ್ದೇನೆ. ಮನೆಯಲ್ಲಿ ಕುಳಿತುಕೊಳ್ಳುವ ಪ್ರವತ್ತಿ ಅಲ್ಲ ನಿರಂತರವಾಗಿ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಸಿಕೊಳ್ಳುವ ಮನಸ್ಸು ಇರುವುದರಿಂದ ಸಾಧ್ಯವಾಗಿದೆ. ಯುವ ಬರಹಗಾರರಿಗೆ ಸಂದೇಶ?
ಉತ್ತಮ ಸಾಹಿತ್ಯಗಳನ್ನು ಅಧ್ಯಯನ ಮಾಡುವ ಮೂಲಕ ಪದ ಸಂಪತ್ತು ಕಟ್ಟಿಕೊಂಡು ತಮ್ಮದೇ ಶೈಲಿಯನ್ನು ರೂಢಿಸಿಕೊಳ್ಳಬೇಕು. ಯಾರೂ ಬರೆಯುತ್ತಾರೆ ನಾನು ಬರೆಯುತ್ತೇನೆ ಇದು ಬೇಡ. ಪ್ರತಿ ಬರವಣಿಗೆಯಲ್ಲೂ ವಿಶೇಷ ಶೈಲಿ, ಆಕರ್ಷಿಸುವ ರೀತಿ ಇರಬೇಕು ಇದರ ಕಡೆಗೆ ಯುವ ಬರಹಗಾರರು ಮನಸ್ಸು ಮಾಡಬೇಕು.