Advertisement

Byndoor constituency; ಬೈಂದೂರು- ಬಿಜೆಪಿಯಿಂದ ಪ್ರಣಾಳಿಕೆ ಬಿಡುಗಡೆ

01:43 PM May 02, 2023 | Team Udayavani |

ಕುಂದಾಪುರ: ಆಸ್ಪತ್ರೆ, ಸಾರಿಗೆ, ಅಂಗನವಾಡಿ, ಬಡವರ ಮನೆ, 94ಸಿ ಹಕ್ಕುಪತ್ರ, ಮೀನುಗಾರಿಕೆ ಹೀಗೆ ಬೈಂದೂರು ಕ್ಷೇತ್ರದ ಸರ್ವರ ಸಮಗ್ರವಾದಂತಹ ಅಭಿವೃದ್ಧಿ ದೃಷ್ಟಿಯಿಂದ ಪ್ರತ್ಯೇಕ ಪ್ರಣಾಳಿಕೆ ತಯಾರಿಸಿದ್ದು, ಮುಂಬರುವ ಚುನಾವಣೆಯಲ್ಲಿ ಗುರುರಾಜ್‌ ಗಂಟಿಹೊಳೆ ಅವರನ್ನು ಗೆಲ್ಲಿಸುವ ಮೂಲಕ ಈ ಕನಸನ್ನು ಸಾಕಾರಗೊಳಿಸಲು ಕಾರಣೀಭೂತರಾಗಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿನಂತಿಸಿಕೊಂಡರು.

Advertisement

ಅವರು ಸೋಮವಾರ ತ್ರಾಸಿಯ ಕೊಂಕಣ ಖಾರ್ವಿ ಭವನದಲ್ಲಿ ನಡೆದ ಬಿಜೆಪಿಯ ಬೈಂದೂರು ಕ್ಷೇತ್ರದ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಕಲ್ಪನೆ, ನಿರೀಕ್ಷೆಯಂತೆ ಕಾರ್ಯ ಬಿಜೆಪಿ ಅಭ್ಯರ್ಥಿ ಗುರುರಾಜ್‌ ಗಂಟಿಹೊಳೆ ಮಾತನಾಡಿ, ಮುಂಬರುವ ಚುನಾವಣೆಯಲ್ಲಿ ಬೈಂದೂರಿನ ಜನರ ಆಶೀರ್ವಾದದಿಂದ ಗೆದ್ದು, ಇಲ್ಲಿನ ಗ್ರಾ.ಪಂ. ಪ್ರತಿನಿಧಿಗಳು, ಉಳಿದ ಜನಪ್ರತಿನಿಧಿಗಳಲ್ಲಿ ಬೈಂದೂರಿನ ಸಮಗ್ರ ಅಭಿವೃದ್ಧಿಯ ಕಲ್ಪನೆಯಿದ್ದು, ಅವರೆಲ್ಲರ ಸಲಹೆಯಂತೆ, ನಿಮ್ಮೆಲ್ಲರ ನಿರೀಕ್ಷೆಯಂತೆ ಕಾರ್ಯನಿರ್ವಹಿಸುವೆ ಎಂದವರು ಭರವಸೆಯಿತ್ತರು.

ಓಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಗೋವಿಂದ ಬಾಬು ಪೂಜಾರಿ, ಪ್ರಣಾಳಿಕೆ ಸಮಿತಿ ಸಂಚಾಲಕ ಚಿಟ್ಟೆ ರಾಜಗೋಪಾಲ ಹೆಗ್ಡೆ ಮಾತನಾಡಿದರು. ಬೈಂದೂರು ಉಸ್ತುವಾರಿ ಬ್ರಿಜೇಶ್‌ ಚೌಟ ಉಪಸ್ಥಿತರಿದ್ದರು. ಮಂಡಲದ ಅಧ್ಯಕ್ಷ ದೀಪಕ್‌ ಕುಮಾರ್‌ ಶೆಟ್ಟಿ ಪ್ರಸ್ತಾವಿಸಿ, ಪ್ರ. ಕಾರ್ಯದರ್ಶಿ ಪ್ರಿಯದರ್ಶಿನಿ ಸ್ವಾಗತಿಸಿ, ಜಿಲ್ಲಾ ಉಪಾಧ್ಯಕ್ಷ ಆನಂದ ಖಾರ್ವಿ ವಂದಿಸಿದರು.

ಪ್ರಣಾಳಿಕೆಗಳಲ್ಲಿ ಪ್ರಮುಖ ಅಂಶಗಳು:
* ಕೃಷಿ ಪೂರಕವಾಗಿ ಕಿಂಡಿ ಅಣೆಕಟ್ಟು ನಿರ್ಮಾಣ.
* ಪ್ರತಿ ಜಿ.ಪಂ. ವ್ಯಾಪ್ತಿಯಲ್ಲಿ ಗೋಶಾಲೆ, ದೇಶಿಯ ತಳಿಯ ಜಾನುವಾರು ಹೆಚ್ಚಳಕ್ಕೆ ಪ್ರೋತ್ಸಾಹ, ಶಿರೂರಲ್ಲಿ ಹೊಸ ಹೈಟೆಕ್‌ ಪಶು ಚಿಕಿತ್ಸಾಲಯ, ಸಿಬಂದಿ ಭರ್ತಿಗೆ ಕ್ರಮ.
* ಬೈಂದೂರು ಸರಕಾರಿ ಆಸ್ಪತ್ರೆಯಲ್ಲಿ ಡಯಾಲೀಸಿಸ್‌ ಕೇಂದ್ರ, ಕೊಲ್ಲೂರು, ಸಿದ್ದಾಪುರ, ವಂಡ್ಸೆ, ಕಿರಿಮಂಜೇಶ್ವರ ಪ್ರಾಥಮಿಕ ಆಸ್ಪತ್ರೆ ಮೇಲ್ದರ್ಜೆಗೇರಿಸಲಾಗುವುದು.
* ಗ್ರಾಮಾಂತರದಲ್ಲಿ ಪ್ರೌಢಶಾಲೆ, ಕಾಲೇಜು ಹೆಚ್ಚಳ, ಸರಕಾರಿ, ಖಾಸಗಿ ಬಸ್‌ಗಳ ಸಂಪರ್ಕ ವ್ಯವಸ್ಥೆ. ಪಶು ಪಾಲಿಟೆಕ್ನಿಕ್‌ ಕಾಲೇಜು ಮಂಜೂರಾತಿ ಹಾಗೂ ಮೆಡಿಕಲ್‌, ಎಂಜಿನಿಯರಿಂಗ್‌ ಕಾಲೇಜು ಸ್ಥಾಪನೆಗೆ ಪ್ರಯತ್ನ.
* ಉದ್ಯೋಗ ಸೃಷ್ಟಿಗೆ ಕೈಗಾರಿಕಾ ವಲಯ, ಆಹಾರ ಪ್ಯಾಕೇಜ್‌, ಸಂಸ್ಕರಣಾ ಘಟಕ ಸ್ಥಾಪನೆ. ಬೃಹತ್‌ ಉದ್ಯೋಗ ಮೇಳ, ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು. ಕೊಲ್ಲೂರು – ಬೈಂದೂರು ಮಧ್ಯೆ ಇಕೊ ಕಾರಿಡಾರ್‌, ಟ್ರೀ ಪಾರ್ಕ್‌ ಸ್ಥಾಪನೆ.
* ಗಂಗೊಳ್ಳಿ, ಮರವಂತೆ, ಕೊಡೇರಿ, ಶಿರೂರು ಬಂದರಿನ ಡ್ರೆಜ್ಜಿಂಗ್‌ ನಡೆಸಿ, ಅಭಿವೃದ್ಧಿಗೆ ಆದ್ಯತೆ. ಸಕಾಲದಲ್ಲಿ ಸೀಮೆಎಣ್ಣೆ,ದೋಣಿಗಳಿಗೆ ಜಿಪಿಎಸ್‌ ವ್ಯವಸ್ಥೆ, ಮೀನುಗಾರರಿಗೆ ಮನೆ, ಮೀನು ಉತ್ಪನ್ನಗಳ ಮೌಲ್ಯವರ್ಧನೆಗೆ ಕ್ರಮ, ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ.
* 94 ಸಿ ಮಂಜೂರಾತಿ, 11ಇ ಕಡತಗಳ ತ್ವರಿತ ವಿಲೇ, ನೆಟ್ವರ್ಕ್ ಸಮಸ್ಯೆಗೆ ಮುಕ್ತಿ, ತಿಂಗಳಲ್ಲಿ ಒಂದು ದಿನ ಶಾಸಕರ ಜನತಾ ದರ್ಶನ, ಜನಸ್ಪಂದನಾ.
* ಗಂಗೊಳ್ಳಿ – ಕುಂದಾಪುರ ಸೇತುವೆ ನಿರ್ಮಾಣ, ಶಿವಮೊಗ್ಗ- ತೀರ್ಥಹಳ್ಳಿ – ಕುಂದಾಪುರ ನಡುವೆ ಹೊಸ ರೈಲ್ವೆ ಮಾರ್ಗ, ವಿಮಾನ ನಿಲ್ದಾಣಕ್ಕೆ ಪ್ರಯತ್ನ, ವಂಡ್ಸೆ ನಾಡ ಕಚೇರಿ ವಿಶೇಷ ತಹಶೀಲ್ದಾರ್‌ ಕಚೇರಿಯಾಗಿಸುವುದು, ಶಂಕರನಾರಾಯಣ ಹೋಬಳಿ ರಚನೆ.
* ಬೈಂದೂರಲ್ಲಿ ಯಕ್ಷಗಾನ ಥೀಮ್‌ ಪಾರ್ಕ್‌, ಕಲಿಕಾ ಕೇಂದ್ರ, ಕುಂದಗನ್ನಡ ಭಾಷ ಅಕಾಡೆಮಿ ಸ್ಥಾಪನೆ, ಗ್ರಾಮಗಳಲ್ಲಿ ಹಿಂದೂ ರುದ್ರಭೂಮಿ.

Advertisement

Udayavani is now on Telegram. Click here to join our channel and stay updated with the latest news.

Next