Advertisement

ಬೈಂದೂರು ವ್ಯಾಪ್ತಿ: ಈ ವರ್ಷ 1,181 ಹೆಕ್ಟೇರ್‌ ಭೂಮಿ ಹಡೀಲು

11:17 PM Jun 17, 2019 | Sriram |

ಬೈಂದೂರು: ಆಧುನಿಕತೆಯ ಪ್ರಭಾವ, ಪಟ್ಟಣ ವಲಸೆ, ಕೂಲಿಯಾಳುಗಳ ಸಮಸ್ಯೆ ಗ್ರಾಮೀಣ ಭಾಗಕ್ಕೆ ಬಹುತೇಕವಾಗಿ ತಟ್ಟಿದೆ. ಬೈಂದೂರು ವ್ಯಾಪ್ತಿಯಲ್ಲಿ ಈ ವರ್ಷ ಬೆಳೆ ಸರ್ವೆ ವರದಿ ಪ್ರಕಾರ ಹಿಂದಿನ ಅವಧಿಗಿಂತ 1181 ಹೆಕ್ಟೇರ್‌ ಕೃಷಿ ಇಳಿಮುಖವಾಗಿದೆ.

Advertisement

ಕೃಷಿ ಕೇಂದ್ರದ ಯೋಜನೆಗಳು
ಸರಕಾರ ಕೃಷಿ ಅಭಿವೃದ್ಧಿಗಾಗಿ ಹತ್ತಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆನ್‌ಲೈನ್‌ ವ್ಯವಸ್ಥೆ ಮೂಲಕ ಅತ್ಯಂತ ಪಾರದರ್ಶಕತೆ ಇದ್ದರೂ ಸಹ ಸವಲತ್ತುಗಳನ್ನು ಸ್ವೀಕರಿಸಲು ಕೃಷಿಕರು ಆಸಕ್ತಿ ವಹಿಸದಿರುವುದು ಕೆಲವು ಕಡೆ ಕಂಡು ಬರುತ್ತಿದೆ.

ಬೈಂದೂರು ವ್ಯಾಪ್ತಿಯಲ್ಲಿ ಮೊದಲು 5450 ಹೆಕ್ಟೇರ್‌ ಬೆಳೆ ಬೆಳೆಯಾಗುತ್ತಿತ್ತು. ಈ ವರ್ಷ 4269 ಹೆಕ್ಟೇರ್‌ಗೆ ಇಳಿಮುಖವಾಗಿದೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಭತ್ತ ನಾಟಿಗೆ ಸಿದ್ಧತೆ ನಡೆದಿದೆ. ಬೈಂದೂರು ರೈತ ಸಂಪರ್ಕ ಕೇಂದ್ರದ ವತಿಯಿಂದ 600 ಕ್ವಿಂಟಾಲ್‌ ಬೀಜದ ಬೇಡಿಕೆ ಕಳುಹಿಸಲಾಗಿದೆ. 340 ಕ್ವಿಂಟಾಲ್‌ ಬೀಜ ಸರಬರಾಜಾಗಿದ್ದು, ಇದುವರೆಗೆ 736 ಜನರಿಗೆ ವಿತರಿಸಲಾಗಿದೆ. ಇನ್ನುಳಿದಂತೆ ಕೃಷಿ ಸುಣ್ಣ, ಸೆಣಬಿನಬೀಜ ಲಭ್ಯವಿದ್ದು ಇವುಗಳನ್ನು ಮೊದಲ ಮಳೆ ಮುನ್ನ ಬಿತ್ತನೆ ಮಾಡಿ 25 ದಿನದ ಬಳಿಕ ಉಳುಮೆ ಮಾಡಬೇಕು. ಕೃಷಿ ಭಾಗ್ಯ ಯೋಜನೆ ಮೂಲಕ ಮಳೆಯಾಶ್ರಿತ ಕೃಷಿಯನ್ನು ಸುಸ್ಥಿರ ಕೃಷಿಯನ್ನಾಗಿ ರೂಪಾಂತರ ಮತ್ತು ಮಳೆ ನೀರಿನ ಸಮರ್ಥ ಬಳಕೆ ಬಗ್ಗೆ ಒತ್ತು ನೀಡಲಾಗಿದೆ. ಕೃಷಿ ಹೊಂಡಗಳಿಗೆ ಶೇ. 80 ಸಹಾಯಧನ ಸರಕಾರದಿಂದ ಲಭ್ಯವಿದೆ.ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನದ ಮೂಲಕ ಬೀಜ ವಿತರಣೆ, ಸಹಾಯಧನ ಉಪಕರಣ ವಿತರಣೆ,ಬೆಳೆ ಪದ್ಧ‌ªತಿ ಆಧಾರಿತ ಪ್ರಾತ್ಯಕ್ಷಿಕೆಗಳ ಆಯೋಜನೆ ಬೆಳೆ ವಿಮೆ ಮುಂತಾದ ಸವಲತ್ತುಗಳಿವೆ. ಮಣ್ಣಿನ ಆರೋಗ್ಯದ ಬಗ್ಗೆ ಕೃಷಿ ಇಲಾಖೆ ವಿಶೇಷ ಯೋಜನೆ ಹಾಗೂ ಅಭಿಯಾನ ರೂಪಿಸಿದ್ದು ರೈತರ ಪ್ರಯತ್ನಗಳನ್ನು ಪ್ರೋತ್ಸಾಹಿಸುವ ಅನನ್ಯ ಕಾರ್ಯಕ್ರಮವನ್ನೂ ರೂಪಿಸಿದೆ.

ಆರೋಗ್ಯ ಸುಧಾರಣೆ ಸಮತೋಲಿತ ಪೋಷಕಾಂಶಗಳ ನಿರ್ವಹಣೆಯಿಂದ ಇಳುವರಿ ಹಾಗೂ ಆದಾಯದಲ್ಲಿ ಹೆಚ್ಚಳ ಬರುವಂತೆ ಪ್ರೋತ್ಸಾಹಿಸುವುದು ಇದರ ಉದ್ದೇಶವಾಗಿದೆ.

ಯಾಂತ್ರಿಕ ಕೃಷಿಗೆ ಆದ್ಯತೆ
ಕೃಷಿ ಕೂಲಿ ಕಾರ್ಮಿಕರ ಕೊರತೆ ನೀಗಿಸಲು ಹಾಗೂ ಕೃಷಿ ಚಟುವಟಿಕೆ ಸಕಾಲಕ್ಕೆ ಕೈಗೊಳ್ಳಲು ಕೃಷಿ ಯಾಂತ್ರಿಕರಣಕ್ಕೆ ಇಲಾಖೆ ಉತ್ತೇಜನ ನೀಡುತ್ತಿದೆ. ಈ ವರ್ಷ ಬೈಂದೂರಿನ ಕೆರ್ಗಾ, ಉಪ್ಪುಂದ ಮುಂತಾದ ಕಡೆ ಸೀಡ್‌ಡ್ರಿಲ್‌ ಹೊಸ ಪ್ರಯೋಗ ನಡೆಸಲಾಗಿದೆ.ಇದನ್ನು ಕೂರ್ಗಿ ಬಿತ್ತನೆ ಎಂದು ಕರೆಯುತ್ತಾರೆ. ಧಾರವಾಡ, ಉತ್ತರ ಕರ್ನಾಟಕದ ಭಾಗಗಳಲ್ಲಿ ಈ ಪದ್ದತಿ ಅನುಸರಿಸಲಾಗುತ್ತಿತ್ತು. ಟ್ರಾÂಕ್ಟರ್‌ ಮೂಲಕ ಯಂತ್ರ ಅಳವಡಿಸಿ ಬಿತ್ತನೆ ನಡೆಸಲಾಗುತ್ತದೆ. ನರೇಗಾ ಯೋಜನೆಯ ಎರೆಹುಳ ತೊಟ್ಟಗೆ 26,000, ಅಲ್ಪ ಆಳದ ಬಾವಿಗೆ 1.28 ಲಕ್ಷ ರೂ. ನೆರವು ಸಿಗಲಿದೆ. ಉದ್ಯೋಗ ಖಾತ್ರಿ ಚೀಟಿ ಹೊಂದಿದ ಸಣ್ಣ ರೈತರು ಈ ಸೌಲಭ್ಯ ಪಡೆಯಬಹುವುದಾಗಿದೆ. ಕೃಷಿ ಯಂತ್ರಗಳಿಗೆ ಸಾಮಾನ್ಯ ವರ್ಗದವರಿಗೆ ಶೇ. 50, ಪ.ಪಂಗಡ, ಪ.ಜಾತಿಯವರಿಗೆ ಶೇ. 90 ಸಹಾಯ ಧನವಿದೆ.

Advertisement

ಮುಂಗಾರು ವಿಳಂಬ,
ಕೃಷಿ ಚಟುವಟಿಕೆ ಹಿನ್ನಡೆ
ಈ ಬಾರಿಯ ಮುಂಗಾರು ವಿಳಂಬವಾದ ಕಾರಣ ಕೃಷಿ ಚಟುವಟಿಕೆಯ ಮೇಲೆ ಸಾಕಷ್ಟು ಪರಿಣಾಮ ಬಿದ್ದಿದೆ ಎನ್ನುವುದು ರೈತರ ಅಭಿಪ್ರಾಯವಾಗಿದೆ.ಸಾಮಾನ್ಯವಾಗಿ ಬೇಸಿಗೆ ಅಂತ್ಯದಲ್ಲಿ ಬೀಜ ಬಿತ್ತನೆ ಮಾಡಲಾಗುತ್ತಿತ್ತು ಆದರೆ ನೀರಿನ ಅಭಾವದಿಂದ ಮಳೆಯ ನಿರೀಕ್ಷೆಯಲ್ಲಿ ಜೂನ್‌ ಆರಂಭದವರೆಗೆ ಬೀಜ ಬಿತ್ತನೆ ಸಾಧ್ಯವಾಗಿಲ್ಲ. ಹೀಗಾಗಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಒಂದು ತಿಂಗಳು ಮುಂಗಾರು ಬೆಳೆ ವಿಳಂಬವಾಗಿದೆ.

ಮಾಹಿತಿ ನೀಡುತ್ತದೆ
ಬೈಂದೂರು ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಅವಶ್ಯವಿರುವ ಮಾಹಿತಿ, ಭಿತ್ತನೆ ಬೀಜ, ಕೃಷಿ ಸಲಕರಣೆಗಳನ್ನು ಸರಕಾರದ ನಿಯಮ ಪ್ರಕಾರ ವಿತರಿಸಲಾಗುತ್ತಿದೆ. ಕೃಷಿ ಅಭಿಯಾನದ ಮೂಲಕ ಇಲಾಖೆಯ ಸವಲತ್ತುಗಳ ಬಗ್ಗೆ ರೈತರಿಗೆ ಪೂರಕ ಮಾಹಿತಿ ನೀಡಲಾಗಿದೆ.ಕೃಷಿ ಆಸಕ್ತರಿಗೆ ಇಲಾಖೆ ನಿರಂತರವಾಗಿ ಯೋಜನೆಗಳ ಸಹಕಾರ ಮತ್ತು ಮಾಹಿತಿ ನೀಡುತ್ತಿದೆ.
-ಗಾಯತ್ರಿದೇವಿ,
ಕೃಷಿ ಅಧಿಕಾರಿ ಬೈಂದೂರು

ರೈತ ಸಂಪರ್ಕದ ಕೇಂದ್ರದ ವಿವರ
-ವಂಡ್ಸೆ: 08254-239358
- ಬೈಂದೂರು: 08254-252321
-   ಕುಂದಾಪುರ: 08254-232535

-   ಅರುಣ ಕುಮಾರ್‌, ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next