Advertisement
ಕೈ ಬೀಸಿ ಕರೆವ ಪ್ರವಾಸಿ ಸ್ಥಳಗಳು ಬೈಂದೂರಿನಲ್ಲಿ ಕಣ್ಮನ ತಣಿಸುವ ಹಲವು ನಿಸರ್ಗ ರಮಣೀಯ ಸ್ಥಳಗಳಿವೆ. ಕೊಲ್ಲೂರು ಮೂಕಾಂಬಿಕಾ ದೇಗುಲವಲ್ಲದೇ ಸೋಮೇಶ್ವರ ಬೀಚ್ ನದಿ-ಸಾಗರ ಸಂಗಮ ಸ್ಥಳವಾಗಿದ್ದು ಅತ್ಯಂತ ಸುಂದರವಾಗಿದೆ. ಐತಿಹಾಸಿಕ ಹಿನ್ನೆಲೆ ಹೊಂದಿರುವ ಚರ್ಚ್ ಗುಡ್ಡೆ, ಆನೆಝುರಿ ಚಿಟ್ಟೆ ಉದ್ಯಾನ, ಕೂಸಳ್ಳಿ ಜಲಪಾತ, ಮರವಂತೆ ಬೀಚ್, ಕೋಣಮಕ್ಕಿ ಪಿಕ್‌ನಿಕ್ ಪಾಯಿಂಟ್, ಕಳಿಹಿತ್ಲು ಬೀಚ್, ಶಿಲ್ಪಕಲಾ ವೈಭವದ ಸೇನೇಶ್ವರ ದೇಗುಲವಿದೆ. ರೈಲ್ವೇ ನಿಲ್ದಾಣ ಅಭಿವೃದ್ಧಿ, ಒತ್ತಿನೆಣೆ ಪ್ರದೇಶದಲ್ಲಿ ವಿಮಾನ ನಿಲ್ದಾಣ ಸ್ಥಾಪನೆ ಪ್ರಕ್ರಿಯೆಗಳಿಂದ ಪ್ರವಾಸೋದ್ಯಮಕ್ಕೆ ಮತ್ತಷ್ಟು ಗರಿಗೆದರಲು ಸಾಧ್ಯವಿದೆ. ಬೈಂದೂರು ಪ್ರವಾಸಿ ಕೇಂದ್ರವಾಗಬೇಕೆನ್ನುವ ಉದ್ದೇಶ ದಿಂದ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಬೆಸುಗೆ ಫೌಂಡೇಶನ್, ಬೈಂದೂರು ಗ್ರಾಮ ಪಂಚಾಯತ್ ಪಡುವರಿ, ಜಿಲ್ಲಾಡಳಿತ ಡಿಸೆಂಬರ್ 28ರಿಂದ ಜ. 1ರ ವರೆಗೆ ಬೀಚ್ ಉತ್ಸವ ನಡೆಸಲಿದೆ.
-ವೆಂಕಟೇಶ ಕಿಣಿ, ಅಧ್ಯಕ್ಷರು, ಬೆಸುಗೆ ಫೌಂಡೇಶನ್ ಬೈಂದೂರು ಬೀಚ್ ಉತ್ಸವ: ಏನೇನಿದೆ?
ಡಿ. 28 ಬೆಳಗ್ಗೆ: ಗಾಳಿಪಟ ಉತ್ಸವ, ಸೂಪರ್ ಸೆಲ್ಫಿ ಸ್ಪರ್ಧೆ, ಮರಳು ಶಿಲ್ಪ ಅನಾವರಣ, ಚಿತ್ರಕಲಾ ಸ್ಪರ್ಧೆ, ಪ್ರದರ್ಶನ ಮಳಿಗೆ ಉದ್ಘಾಟನೆ, ಕ್ರೀಡೋತ್ಸವ ಉದ್ಘಾಟನೆ
ಸಂಜೆ: ಕೋಟೆ ಬಾಗಿಲು ಹಿ.ಪ್ರಾ. ಶಾಲೆ ಹಾಗೂ ಬೈಂದೂರು ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸವಿ ಸವಿ ನೆನಪು ಕಲಾ ತಂಡದವರಿಂದ ಗಾನ ವೈವಿಧ್ಯ, ಚಂದ್ರ ಬಂಕೇಶ್ವರ ತಂಡದಿಂದ ಗಾಯನ, ಸಭಾ ಕಾರ್ಯಕ್ರಮ ಮತ್ತು ಬೀಚ್ ಉತ್ಸವ ಉದ್ಘಾಟನೆ
ರಾತ್ರಿ: ಭಾರ್ಗವಿ ಉಡುಪಿ ನೃತ್ಯ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ
ಡಿ. 29 ಬೆಳಗ್ಗೆ : ತಾಲೂಕು ಮಟ್ಟದ ಯೋಗ ಸ್ಪರ್ಧೆ, ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳು
ಸಂಜೆ: ಬೀಚ್ ಉತ್ಸವದ ಸಮಾರೋಪ, ಸಂಗೀತ ಸರ್‌ಗಮ್ ತಂಡದಿಂದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಇವುಗಳೊಂದಿಗೆ ದಿನವೂ ದೋಣಿ ವಿಹಾರ, ಆಹಾರೋತ್ಸವ, ಮರಳು ಶಿಲ್ಪ, ಸುಡುಮದ್ದು ಪ್ರದರ್ಶನ ಇರಲಿದೆ.