ಬ್ಯಾಡಗಿ: ಪ್ರಸಕ್ತ ವರ್ಷ ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ವ್ಯಾಪಾರ ವಹಿವಾಟಿನಲ್ಲಿ ದಾಖಲೆ ಬರೆಯುತ್ತಿದ್ದು, ಈ ಬಾರಿ ಮಾರುಕಟ್ಟೆಯ ಇತಿಹಾಸದಲ್ಲಿಯೇ ಕ್ವಿಂಟಲ್‌ಗೆ 45,111 ರೂ. ಸಾರ್ವಕಾಲಿಕ ದಾಖಲೆಯ ದರದೊರೆತಿದ್ದರಿಂದ ಮೆಣಸಿನಕಾಯಿ ಬೆಳೆದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮಂಗಳವಾರ ಗದಗ ಜಿಲ್ಲೆ ರೋಣ ತಾಲೂಕಿನಸವಡಿ ಗ್ರಾಮದ ರೈತ ಬಸವರೆಡ್ಡೆಪ್ಪ ಭೂಸರೆಡ್ಡಿಬೆಳೆದ ಡಬ್ಬಿ ಮೆಣಸಿನ ಕಾಯಿ “ಬಂಗಾರ’ದಬೆಲೆಗೆ ಮಾರಾಟವಾಗಿದ್ದು, ಮಾರುಕಟ್ಟೆಇತಿಹಾಸದಲ್ಲಿಯೇ ಕ್ವಿಂಟಲ್‌ಗೆ ದಾಖಲೆಯ 45,111 ರೂ. ದರ ಪಡೆದುಕೊಂಡಿದೆ. ಅಂತಾರಾಷ್ಟ್ರೀಯ ಖ್ಯಾತಿಗೆ ತಕ್ಕಂತೆವ್ಯಾಪಾರ ವಹಿವಾಟು ನಡೆಸುತ್ತಿರುವ ಬ್ಯಾಡಗಿಮಾರುಕಟ್ಟೆಯಲ್ಲಿ ಕಳೆದ ಎರಡು ವಾರಗಳಿಂದ ಮೆಣಸಿನಕಾಯಿ ದರದಲ್ಲಿ ಸಮರವೇ ಏರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಒಂದೇ ವಾರದಲ್ಲಿ ಎರಡು ದಾಖಲೆ ದರಗ ಳನ್ನು ವ್ಯಾಪಾರಸ್ಥರುಗುಣಮಟ್ಟದ ಡಬ್ಬಿ ಮೆಣಸಿನಕಾಯಿಗೆ ನೀಡಿಖರೀದಿಸಿರುವುದು ಮಾರುಕಟ್ಟೆಯಲ್ಲಿ ಇತಿಹಾಸ ಸೃಷ್ಟಿಸಿದಂತಾಗಿದೆ.
ಕಳೆದ ಡಿ.14 ರಂದು ಇದೇ ರೈತ ಬೆಳೆದ ಮೆಣಸಿನಕಾಯಿ ಪ್ರಸಕ್ತ ವರ್ಷ 35,555 ರೂ.ದರ ಪಡೆಯುವ ಮೂಲಕ ದಾಖಲೆ ಮಾಡಿತ್ತು.ಎಂ.ಸಿ.ಮೇಲ್ಮುರಿ ಅಂಗಡಿಯಲ್ಲಿ ಮಾರಾಟಕ್ಕಿಟ್ಟಿದ್ದಮೆಣಸಿನಕಾಯಿಯನ್ನು ಅಮರಜ್ಯೋತಿಟ್ರೇಡಿಂಗ್ ಕಂಪನಿ ದಾಖಲೆ ದರ ನೀಡಿಖರೀದಿಸಿದ್ದನ್ನು ಇಲ್ಲಿ ಸ್ಮರಿಸಬಹುದು.ಇದೀಗ ಡಿ.22 ರಂದು ಮಂಗಳವಾರ ಅದೇ ರೈತ ಬೆಳೆದ ಮೆಣಸಿನಕಾಯಿ ಬೆಳೆಯನ್ನು ಸಿ.ಕೆ.ಮೇಲ್ಮುರಿ ಅಂಗಡಿಯಲ್ಲಿ ಮಾರಾಟಕ್ಕಿಟ್ಟಿದ್ದು, ದಾಖಲೆಯ 45,111 ರೂ. ದರ ನೀಡಿ ಗಣೇಶ ಎಂಟರಪ್ರ„ಸೆಸ್(ಅಜಗಣ್ಣನವರ)ಖರೀದಿ ಮಾಡಿದ್ದಾರೆ. ಇದುಮಾರುಕಟ್ಟೆ ಇತಿಹಾಸದಲ್ಲಿಯೇ ಸಾರ್ವಕಾಲಿಕ ಧಾರಣೆಯಾಗಿದೆ. ಮಾರುಕಟ್ಟೆಯಲ್ಲಿ ಏರ್ಪಟ್ಟಿರುವ ದರ ಸಮರವನ್ನು ಅವಲೋಕನಮಾಡಿದರೆ ಇದೀಗ ದಾಖಲಾಗಿರುವ ದರ ಸೇಫ್ ಅಲ್ಲ ಅನ್ನುವ ಅನುಮಾನ ಮೂಡುತ್ತಿದೆ. ಕಾರಣ ಈ ಹಿಂದೆ ದಾಖಲಾದ (ಡಿ.14 ರಂದು35,555ರೂ., ಡಿ.17 ರಂದು 36,999ರೂ.) ದರಗಳು ಕೇವಲ ಒಂದೇ ವಾರದಲ್ಲಿಧೂಳಿಪಟವಾಗಿವೆ. ಈ ಹಿನ್ನೆಲೆಯಲ್ಲಿ ಈದರ ಮುಂದಿನ ದಿನಗಳಲ್ಲಿ ಧೂಳಿಪವಾದರೆ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.
ಅಂತಾರಾಷ್ಟ್ರೀಯ ಖ್ಯಾತಿಯ ಮಾರುಕಟ್ಟೆಗೆ ಮಂಗಳವಾರದ ಮೆಣಸಿನಕಾಯಿ ದರ ಮತ್ತೂಂದುಮೈಲಿಗಲ್ಲಾಗಲಿದ್ದು, ಸಾರ್ವಕಾಲಿಕ ದಾಖಲೆ ದರದಲ್ಲಿ ಮೆಣಸಿನಕಾಯಿ ಖರೀದಿ ನಡೆದಿದೆ. –
ವೀರಭದ್ರಪ್ಪ ಗೊಡಚಿ, ಎಪಿಎಂಸಿ ಅಧ್ಯಕ್ಷ
ಈ ಹಿಂದೆಯೂ ಉತ್ತಮ ದರಕ್ಕೆ ಮೆಣಸಿನಕಾಯಿ ಮಾರಾಟ ಮಾಡಿದ್ದೆ. ಆದರೆ, ಈ ಬಾರಿ ಬಂಗಾರದ ಬೆಲೆ ದೊರೆಯುತ್ತೆ ಎಂಬ ನಿರೀಕ್ಷೆ ಇರಲಿಲ್ಲ. ದಾಖಲೆಯ ದರ ಸಿಕ್ಕಿರುವುದು ಖುಷಿ ನೀಡಿದೆ. –
ಬಸವರೆಡ್ಡೆಪ್ಪ ಭೂಸರೆಡ್ಡಿ, ರೈತ