Advertisement

Shree ರಾಮನ ಪೂಜೆ ಮಾಡುವ ಮೂಲಕ ರಾಮನ ಗುಣಗಳನ್ನು ನಾವೆಲ್ಲರೂ ಪಡೆಯಬೇಕು: ಕಿಮ್ಮನೆ ರತ್ನಾಕರ್

04:15 PM Jan 22, 2024 | Team Udayavani |

ತೀರ್ಥಹಳ್ಳಿ: ಶ್ರೀರಾಮ ಶಾಂತಿ ಮತ್ತು ಸೌಹಾರ್ದತೆಗೆ ಹಾಗೂ ವಚನ ಪಾಲಿಸುತ್ತಿದ್ದ ಆತನನ್ನು ಮರ್ಯಾದಾ ಪುರುಷೋತ್ತಮ ಎಂಬ ಹೆಸರು ಬಂದಿದ್ದು, ಯಾರಿಗೂ ಅನ್ಯಾಯ ಮಾಡದೇ, ಮೋಸ ಮಾಡದೇ ತಮ್ಮ ಹಿರಿಯರಿಗೆ ಕೊಟ್ಟ ಮಾತನ್ನು, ಅವರ ಗೌರವವನ್ನು ಕಾಪಾಡಲು ತನ್ನ ವಯಕ್ತಿಕ ಬದುಕಿನ ಬಗ್ಗೆ ಯೋಚಿಸದೆ ಸರ್ವ ತ್ಯಾಗಕ್ಕೂ ಸಿದ್ದನಾಗಿದ್ದವನು ಶ್ರೀ ರಾಮಚಂದ್ರ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.

Advertisement

ಸೋಮವಾರ ಪಟ್ಟಣದ ರಥಬೀದಿಯಲ್ಲಿರುವ ಶ್ರೀ ಕೊದಂಡರಾಮ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು ತೀರ್ಥಹಳ್ಳಿಯಲ್ಲಿ 300 ವರ್ಷದ ಹಳೆಯ ರಾಮನ ದೇವಸ್ಥಾನ ಇದ್ದು ಇಲ್ಲಿ ಯಾವುದೇ ರೀತಿ ಜೀರ್ಣೋದ್ದಾರ ಆಗಿರಲಿಲ್ಲ. ದೇವಸ್ಥಾನದಲ್ಲಿ ಕಳೆದ ಎರಡು ದಿನಗಳಿಂದ ಶ್ರಮದಾನ ಮಾಡಿ ಹೊಸ ರೂಪಕ್ಕೆ ತಂದು ಇಂದು ಪೂಜೆ ಸಲ್ಲಿಸುತ್ತಿದ್ದೇವೆ ಎಂದರು.

ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆಯಿಂದ ದೇಶದ, ರಾಜ್ಯದ ಜನರಿಗೆ ಒಳ್ಳೆಯದಾಗಬೇಕು. ದೇಶದ ಸಮಸ್ಯೆಗಳು, ಸಾಮಾಜಿಕ ಸಮಸ್ಯೆಗಳು, ಎಲ್ಲರೂ ಶಾಂತಿ ಸೌಹಾರ್ದತೆಯಿಂದ ಬದುಕಬೇಕು, ಶ್ರೀ ರಾಮನ ಪೂಜೆ ಮಾಡುವ ಮೂಲಕ ಆತನ ಗುಣಗಳನ್ನು ನಾವೆಲ್ಲರೂ ಪಡೆಯುವ ಪ್ರಯತ್ನ ಮಾಡಬೇಕು. ಎಲ್ಲರೂ ಸಹಕರಿಸಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next