ಕಲಬುರಗಿ: 371(ಜೆ)ನೇ ಕಲಂ ಅನ್ವಯ ಹೈ. ಕ.ಭಾಗದ ಜಿಲ್ಲೆಗಳಲ್ಲಿ ಉನ್ನತ ವ್ಯಾಸಂಗಕ್ಕಾಗಿ ಪಡೆದ ಶೈಕ್ಷಣಿಕ ಸಾಲವನ್ನು ಕೇಂದ್ರ ಸರ್ಕಾರದಿಂದ ಮನ್ನಾ ಮಾಡಬೇಕು ಹಾಗೂ ನಿರುದ್ಯೋಗಿ ಪದವೀಧರರಿಗೆ ನೌಕರಿ ಅಥವಾ ನಿರುದ್ಯೋಗಿ ಭತ್ಯೆ ನೀಡಬೇಕು.
ಇಲ್ಲವೇ ಸ್ವ ಉದ್ಯೋಗಕ್ಕಾಗಿ 5 ರಿಂದ 10 ಲಕ್ಷ ರೂ. ಬಡ್ಡಿ ರಹಿತ ಸಾಲ ಕೇಂದ್ರದಿಂದ ನೀಡಬೇಕೆಂದು ಪ್ರಧಾನಿಗಳಿಗೆ ಒತ್ತಡ ಹೇರಲು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಸಲ್ಲಿಸಲಾಯಿತು.
ಈಶಾನ್ಯ ವಲಯದ ಶಿಕ್ಷಕರ ವೇದಿಕೆ ಅಧ್ಯಕ್ಷ ಎಂ.ಬಿ.ಅಂಬಲಗಿ ನೇತೃತ್ವದ ನಿಯೋಗದಲ್ಲಿ ಸೂರ್ಯಕಾಂತ ಜೀವಣಗಿ, ಬಸವರಾಜ ರಾಜಾಪೂರ, ಚಂದ್ರಶೇಖರ ಚಿಂಚೋಳಿ,ಶಿವಾನಂದ ಮಠ, ಪರ್ವತಯ್ಯ ಸ್ವಾಮಿ, ಸೂರ್ಯಕಾಂತ ಜಮಾದಾರ, ನೀಲಕಂಠದೊಡ್ಮನಿ, ಮಹ್ಮದ ಜಾಫರ್, ಅಬ್ದುಲ್ ಹಾಯ್, ಪರಮೇಶ್ವರ ಬಸವರಾಜ ಕೋಳಕೂರ,
ಸಿದ್ರಾಮಪ್ಪ ಕುಡುತೆ, ವೀರಣ್ಣ, ನಾಗಪ್ಪ, ಶರಣಪ್ಪ ಮಹಾಗಾಂವ, ಮಲ್ಲನಗೌಡ ಪಾಟೀಲ, ಶಾಂತಪ್ಪ ಕಮಲಾಪೂರ, ಜಗನ್ನಾಥ ರೆಡ್ಡಿ ಮಂದ°ರ, ಮಲ್ಲಿಕಾರ್ಜುನ ಕೋರಿಗೆಲ್ಲ, ಅಶೋಕಕುಮಾರ ಅಡಕಿ, ವಿಠಲರಾವ ನಾಟೀಕಾರ, ವಿ.ಎನ್.ಪತ್ತಾರ ಹಾಗೂ ಇತರರು ಮನವಿ ಸಲ್ಲಿಸಿ ಆಗ್ರಹಿಸಿದರು.
ಸಂಸದೆ ಕರಂದ್ಲಾಜೆ ಬೇಡಿಕೆಗಳ ಬಗ್ಗೆ ಕೇಂದ್ರ ಸಚಿವರು, ಸಂಸದರೊಂದಿಗೆ ಮಾತನಾಡುವೆ. ದೆಹಲಿಗೆ ಬಂದರೆ ಪ್ರಧಾನಿಯವರನ್ನು ಭೇಟಿಯಾಗಿ ಸಮಸ್ಯೆ ಕುರಿತು ವಿವರಿಸಿ ನ್ಯಾಯಕೊಡಿಸಲು ಪ್ರಾಮಾಣಿಕವಾಗಿ ಯತ್ನಿಸುವೆ ಎಂದು ಭರವಸೆ ನೀಡಿದರು.