Advertisement

ನಿಮ್ಮಿಂದ ರಾಷ್ಟ್ರಭಕ್ತಿ ಕಲಿಯುವ ಅಗತ್ಯ ನಮಗಿಲ್ಲ, ಆಯನೂರು ವಿರುದ್ಧ ಬಿ.ವೈ.ರಾಘವೇಂದ್ರ ಕಿಡಿ

12:18 PM Feb 14, 2024 | sudhir |

ಶಿವಮೊಗ್ಗ: ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್ ವಿರುದ್ಧ ಬಿಜೆಪಿ ಸಂಸದ ಬಿ.ವೈ. ರಾಘವೇಂದ್ರ ಕಿಡಿಕಾರಿದ್ದಾರೆ.

Advertisement

ದೇಶ ವಿಭಜನೆಯ ಕುರಿತು ಹೇಳಿಕೆ ನೀಡಿದ ಡಿ.ಕೆ. ಸುರೇಶ್ ಹೇಳಿಕೆ ಬಗ್ಗೆ ಈಶ್ವರಪ್ಪ ನೀಡಿರುವ ಸ್ಪಷ್ಟನೆ ಕುರಿತು ಆಯನೂರು ಮಂಜುನಾಥ್ ನೀಡಿರುವ ಹೇಳಿಕೆಗೆ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ ಸಂಸದ ಬಿ.ವೈ. ರಾಘವೇಂದ್ರ ಕಾಂಗ್ರೆಸ್‌ ವಕ್ತಾರ ಆಯನೂರು ಮಂಜುನಾಥ್ ಅವರು ಅವರದೇ ಆದಂತಹ ಭಾಷೆಯಲ್ಲಿ ಪ್ರಧಾನಿಗಳ ಬಗ್ಗೆ, ಈಶ್ವರಪ್ಪ ಬಗ್ಗೆ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ಈಶ್ವರಪ್ಪ ನವರ ಸುದೀರ್ಘ ಸೇವೆ ದೇಶದ ವಿಚಾರ ಬಂದಾಗ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಡಿ.ಕೆ ಸುರೇಶ್ ಕೊಟ್ಟ ಹೇಳಿಕೆ ಬಗ್ಗೆ ಈಶ್ವರಪ್ಪ ಮಾತನಾಡಿದ್ದರು. ಹೀಗೆ ಮಾತನಾಡುವವರಿಗೆ ಸರಿಯಾದ ಕಾನೂನು ತನ್ನಿ ಎಂದಿದ್ದಾರೆ ಎಂದು ಹೇಳಿದ್ದಾರೆ ಆದರ ಬದಲು ಕಡಿ ಬಡಿ ಎಂದಿಲ್ಲ ಎಂದು ಹೇಳಿದ್ದಾರೆ.

ಡಿ.ಕೆ ಸುರೇಶ್ ಹೇಳಿಕೆಯನ್ನು ಆಯನೂರು ಮಂಜುನಾಥ್ ಸರ್ಮಥಸಿಕೊಂಡಿದ್ದಾರೆ ಇದರಿಂದ ಗೊತ್ತಗುತ್ತದೆ ಕಪಟ ದೇಶಭಕ್ತರು ಯಾರು ಎಂದು. ದೇಶವನ್ನು ವಿಭಜನೆ ಮಾಡಿದ್ದು ಇದೇ ಕಾಂಗ್ರೆಸ್ ಇಂಥವರಿಂದ ರಾಷ್ಟ್ರಭಕ್ತಿ ಕಲಿಯುವ ಅಗತ್ಯ ನಮಗಿಲ್ಲ, ಬಿಜೆಪಿಯಿಂದ ನಾಲ್ಕು ಸದನ ಆಯ್ಕೆ ಆಗಿದ್ದವರು ಇವರು ಈಗ ಕಾಂಗ್ರೆಸ್ ನಲ್ಲಿ ಯಾವುದೋ‌ ಹುದ್ದೆ ಕೊಟ್ಟಿದ್ದಾರೆ ಅಂತ ಏನ್ ಏನೋ ಮಾತಾಡೋದಲ್ಲ ಈಶ್ವರಪ್ಪ ನವರ ಹೇಳಿಕೆ ತಿರುಚುವುದು ಸರಿಯಲ್ಲ ಎಂದರು.

ಅಭಿವೃದ್ಧಿ ವಿಚಾರದಲ್ಲಿ ಅವರ ಸಂದರ್ಭದಲ್ಲಿ ಏನ್ ಏನು ಮಾಡಿದ್ದಾರೆ ರಾಷ್ಟ್ರೀಯ ಹೆದ್ದಾರಿ, ರೈಲ್ವೆ, ಟವರ್ ಗಳ ಬಗ್ಗೆ ಬಿಡಿ ಇದೆಲ್ಲ ಜನರಿಗೆ ಗೊತ್ತು. ಇದೀಗ ಇವರು ನಂಬಿಕೊಂಡ ಭಾಗ್ಯ ಕೈ ಕೊಡುತ್ತಿದೆ. ಹಾಗಾಗಿ ದೆಹಲಿಯಲ್ಲಿ ಪ್ರತಿಭಟನೆ ಮಾಡಲು ಹೋಗಿದ್ದಾರೆ, ಆಯನೂರು ಮಂಜುನಾಥ್ ಅವರಿಗೆ ಅಭಿವೃದ್ಧಿ ಬಗ್ಗೆ ಕೇಳುವ ನೈತಿಕತೆಯೇ ಇಲ್ಲ ಎಂದು ಹೇಳಿದರು.

Advertisement

ಶರಾವತಿ ಸಮಸ್ಯೆ ಬಗೆಹರಿಸಲು ನಾವು ಸಹ ಹೋರಾಟ ಮಾಡುತ್ತಿದ್ದೇವೆ, ಸವಳಂಗ ರೋಡ್ ನಲ್ಲಿ ನಮ್ಮ ಅಪ್ಪನ ಆಸ್ತಿ ಇಲ್ಲ ಆದರೆ ಸಾಗರ ರಸ್ತೆಯಲ್ಲಿ ಆಯನೂರು ಮಂಜುನಾಥ್ ಫಾರ್ಮ್ ಹೌಸ್ ಇದೆಯಲ್ಲ ಎಂದು ಕಿಡಿಕಾರಿದ್ದಾರೆ.

ವಿಐಎಸ್ಎಲ್ ಉಳಿಸಲು ನಮ್ಮ ಹೋರಾಟ ನಿರಂತರವಾಗಿದೆ, ಆಯನೂರು ಮಂಜುನಾಥ್ ನಮ್ಮ ಪಕ್ಷದ ಕಡೆ ಬೆರಳು ಮಾಡಿ ತೋರಿಸುವುದು ಬಿಡಬೇಕು, ಯಾವ ಸಂದರ್ಭದಲ್ಲಿ ಉತ್ತರ ಕೊಡಬೇಕು ಆ ಸಂದರ್ಭದಲ್ಲಿ ಉತ್ತರ ಕೊಡುತ್ತೇವೆ, ಅದೇ ರೀತಿ ಮಧು ಬಂಗಾರಪ್ಪ ಸಹ ಬಿಚ್ಚಿಡುತ್ತೇನೆ ಅನ್ನುತ್ತಾರೆ ಸಮಯ ಬಂದಾಗ ನಾವು ಬಿಚ್ಚಿಡುತ್ತೇವೆ ಎಂದರು.

ಶಿವಮೊಗ್ಗ-ಶಿಕಾರಿಪುರ ರಸ್ತೆಯಲ್ಲಿ ಕಾಂಗ್ರೆಸ್ ಟೋಲ್ ಹಾಕಿ ಹಣ ವಸೂಲಿ ಮಾಡಲು ಹೊರಟಿದೆ ಇದನ್ನು ನಾವು ವಿರೋಧಿಸುತ್ತೇವೆ ಈ ರಸ್ತೆಯಲ್ಲಿ ಎರಡೆರಡು ಟೋಲ್ ಆಗುತ್ತಿದೆ ಎಂದು ಆಯನೂರ್ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: Viral Video: ಚಿರತೆಯನ್ನು ಕೊಂದು ಮರಕ್ಕೆ ನೇತುಹಾಕಿದ ಗ್ರಾಮಸ್ಥರು! ಪ್ರಕರಣ ದಾಖಲು

Advertisement

Udayavani is now on Telegram. Click here to join our channel and stay updated with the latest news.

Next