ನವದೆಹಲಿ: ದೈನಂದಿನ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದ ಜನರಿಗೆ ಇದೀಗ 21 ದಿನಗಳ ಸುದೀರ್ಘ ಲಾಕ್ ಡೌನ್ ನಿಂದಾಗಿ ಮನೆಯಲ್ಲೇ ಕುಳಿತು ಏನು ಮಾಡುವುದು ಎಂಬ ಚಿಂತೆ ಕಾಡತೊಡಗಿತ್ತು. ಅಲ್ಲದೇ ಮತ್ತೆ ದೂರದರ್ಶನದಲ್ಲಿ “ರಾಮಾಯಣ” ಧಾರವಾಹಿ ಆರಂಭಿಸಬೇಕೆಂಬ ಸಾರ್ವಜನಿಕರ ಒತ್ತಾಯಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದೆ.
ರಮಾನಂದ ಸಾಗರ್ ಅವರ ರಾಮಾಯಣ ಧಾರವಾಹಿ ಮೊದಲು ದೂರದರ್ಶನದಲ್ಲಿ 1987ರಲ್ಲಿ ಪ್ರಸಾರವಾಗಿತ್ತು. ಅಂದಿನ ಜನಪ್ರಿಯ ರಾಮಾಯಣ ಧಾರವಾಹಿ ಇದೀಗ ಮತ್ತೆ ದೂರದರ್ಶನದಲ್ಲಿ ಪ್ರಸಾರವಾಗಲಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಜಾವ್ಡೇಕರ್ ಶುಕ್ರವಾರ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಮಾರ್ಚ್ 28ರಿಂದ ಡಿಡಿ ನ್ಯಾಷನಲ್ ಚಾನೆಲ್ ನಲ್ಲಿ ದಿನಕ್ಕೆ ಎರಡು ಬಾರಿಯಂತೆ ರಾಮಾಯಣ ಧಾರವಾಹಿ ಪ್ರಸಾರವಾಗಲಿದೆ ಎಂದು ಟ್ವೀಟ್ ನಲ್ಲಿ ಖಚಿತಪಡಿಸಿದ್ದಾರೆ.
ಸಾರ್ವಜನಿಕರ ಬೇಡಿಕೆ ಮೇರೆಗೆ ಈ ಘೋಷಣೆ ಮಾಡಲು ತುಂಬಾ ಸಂತೋಷವಾಗುತ್ತಿದೆ. ನಾವು ರಾಮಾಯಣ ಧಾರವಾಹಿಯನ್ನು ನಾಳೆಯಿಂದ ಡಿಡಿ ನ್ಯಾಷನಲ್ ನಲ್ಲಿ ಮರು ಪ್ರಸಾರ ಮಾಡಲಿದ್ದೇವೆ. ಬೆಳಗ್ಗೆ 9ರಿಂದ 10ಗಂಟೆಗೆ ಮೊದಲ ಎಪಿಸೋಡ್ ಪ್ರಸಾರವಾದರೆ, ರಾತ್ರಿ 9ರಿಂದ 10ರವರೆಗೆ ಮತ್ತೊಂದು ಎಪಿಸೋಡ್ ಪ್ರಸಾರ ಮಾಡಲಾಗುವುದು ಎಂದು ತಿಳಿಸಿದ್ದಾರೆ.