Advertisement

ಪಶ್ಚಿಮ ಬಂಗಾಳ: ಬಿಸಿಲ ಝಳದ ಪ್ರಕೋಪಕ್ಕೆ ಮೂವರು ಭಕ್ತರ ಸಾವು

06:18 PM Jun 12, 2022 | Team Udayavani |

ಕೋಲ್ಕತಾ: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಬಿಸಿಲ ಝಳದ ಪ್ರಕೋಪಕ್ಕೆ ಮೂವರು ಭಕ್ತರು ಅಸುನೀಗಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

Advertisement

ದೇಗುಲವೊಂದರಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲೋಸುಗ ವೃದ್ಧರಾಗಿರುವ ಮೂವರು ಭಕ್ತರು ಆಗಮಿಸಿದ್ದರು.

ಆದರೆ, ಬಿಸಿಲ ಝಳ ಮತ್ತುಆರ್ದ್ರತೆಯಿಂದ ಬಳಲಿದ ಮೂವರು ಭಕ್ತರು ಕೊನೆಯುಸಿರೆಳೆದಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಜಿಲ್ಲಾಧಿಕಾರಿ, ಜಂಟಿ ಪೊಲೀಸ್‌ ಆಯುಕ್ತರು ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next