Advertisement

ಸಿಂದಗಿ ಉಪಚುನಾವಣೆ: ಬಿಜೆಪಿ ಅಭ್ಯರ್ಥಿ ಕುಟುಂಬದ ಮಹಿಳೆಯರಿಂದ ಮತಗಟ್ಟೆಗೆ ಪೂಜೆ

08:44 AM Oct 30, 2021 | Team Udayavani |

ವಿಜಯಪುರ: ಸಿಂದಗಿ ವಿಧಾನಸಭೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಮತದಾನ ನಡೆಯುತಿದ್ದು, ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಕುಟುಂಬದ ಮಹಿಳೆಯರು ಮತಗಟ್ಟೆಗೆ ಪೂಜೆ ಸಲ್ಲಿಸಿ, ಮತದಾನ ಮಾಡಿದ್ದಾರೆ.

Advertisement

ಬೆ.7 ಗಂಟೆಯಿಂದ ಮತದಾನ ಆರಂಭಗೊಂಡಿದ್ದು, ಮತದಾನ ಆರಂಭಕ್ಕೆ ಮುನ್ನವೇ ಆಲಮೇಲ ಪಟ್ಟಣದ ಮತಗಟ್ಟೆಗೆ ಆಗಮಿಸಿದ ಭೂಸನೂರ ಅವರ ಸಂಬಂಧಿ ಪದ್ಮಾವತಿ ಎಂಬವರು ಮತಗಟ್ಟೆ ಬಾಗಿಲು, ಹೊಸ್ತಿಲಿಗೆ ಪೂಜೆ ಸಲ್ಲಿಸಿ, ಆರತಿ ಬೆಳಗಿದರು.

ಮತದಾನ ಶಾಂತಿಯುತವಾಗಿ ಆರಂಭಗೊಂಡಿದ್ದು, ಮಂದಗತಿಯಲ್ಲಿ ಮತದಾನ ನಡೆದಿದೆ.

ಇದನ್ನೂ ಓದಿ:ನಾನು ಆಡಿಸಿ ಬೆಳೆಸಿದ ಹುಡುಗ; ಮಾಮಾ….ಎಂದು ಅಕ್ಕರೆಯಿಂದ ಕರೆಯುತ್ತಿದ್ದ ಅಪ್ಪು

ಜೆಡಿಎಸ್ ಶಾಸಕರಾಗಿದ್ದ ಮಾಜಿ ಸಚಿವ ಎಂ.ಸಿ.ಮನಗೂಳಿ ಅವರ ನಿಧನದ ಹಿನ್ನೆಲೆಯಲ್ಲಿ ಸಿಂದಗಿ ವಿಧಾನಸಭೆ ಉಪ ಚುನಾವಣೆ ನಡೆಯುತ್ತಿದೆ.

Advertisement

ಜೆಡಿಎಸ್ ಶಾಸಕರಾಗಿದ್ದ ಎಂ.ಸಿ. ಮನಗೂಳಿ ಪುತ್ರ ಅಶೋಕ ಕಾಂಗ್ರೆಸ್ ಅಭ್ಯರ್ಥಿ ಯಾಗಿದ್ದು, ಇದೇ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿದ್ದ ರಮೇಶ ಭೂಸನೂರ ಬಿಜೆಪಿ ಸ್ಪರ್ಧಿ. ಜೆಡಿಎಸ್ ನಾಜಿಯಾ ಅಂಗಡಿ ಅವರನ್ನು ಕಣಕ್ಕಿಳಿಸಿದೆ. ಈ ಪ್ರಮುಖರ ಹೊರತಾಗಿ ಇನ್ನೂ ಮೂವರು ಸ್ಪರ್ಧೆಯಲ್ಲಿ ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next