Advertisement
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಪತನಕ್ಕೆ ರೂವಾರಿಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಿಂದ ಹೊರ ನಡೆದಿದ್ದ ರಮೇಶ್ ಜಾರಕಿಹೊಳಿ, ಎಚ್. ವಿಶ್ವನಾಥ್, ಎಂ.ಟಿ.ಬಿ. ನಾಗರಾಜ್, ಡಾ| ಕೆ. ಸುಧಾಕರ್, ಎಸ್.ಟಿ. ಸೋಮಶೇಖರ್, ಗೋಪಾಲಯ್ಯ ಸಹಿತ 13 ಮಂದಿ ಅನರ್ಹ ಶಾಸಕರ ರಾಜಕೀಯ ಭವಿಷ್ಯವೇ ಈ ಚುನಾವಣೆ ಮೇಲೆನಿಂತಿದೆ.
Related Articles
ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗಳು ಕಣದಲ್ಲಿರು ವುದರಿಂದ ಲಾಭವಾಗಲಿದೆ. ಅನರ್ಹಗೊಂಡವರ ವೈಯಕ್ತಿಕ ವರ್ಚಸ್ಸು ಹಾಗೂ ಪ್ರಭಾವ, ಸಮು ದಾಯದ ಮತಗಳ ಜತೆಗೆ ಸಾಂಪ್ರದಾಯಿಕ ಬಿಜೆಪಿ ಮತಗಳು ಬೀಳಲಿವೆ ಎಂಬ ನಂಬಿಕೆ ಬಿಜೆಪಿಯದು.
Advertisement
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಇರುವುದರಿಂದ ಅಭಿವೃದ್ಧಿ ಮಂತ್ರ ಜಪಿಸಿರುವ ಬಿಜೆಪಿ ಕನಿಷ್ಠ 10 ಸ್ಥಾನ ಗೆಲ್ಲುವ ಭರವಸೆ ಇದೆ. ಆಂತರಿಕವಾಗಿ ಎಂಟು ಗೆದ್ದರೂ ಸರಕಾರ ಸುರಕ್ಷಿತ ಎಂಬ ಮನಃಸ್ಥಿತಿಯಲ್ಲಿದೆ. ಆದರೆ 8 ಸ್ಥಾನ ಗೆದ್ದರೆ ಸರಕಾರವೇನೋ ಉಳಿದುಕೊಳ್ಳಬಹುದು. ಉಳಿದವರು ಸೋತರೆ ಅವರ ಭವಿಷ್ಯ ಚಿಂತಾಜನಕವಾಗಲಿದೆ.
ಕೈ ಹಿಡಿದೀತೇ ಒಳಒಪ್ಪಂದ?ಅನರ್ಹಗೊಂಡವರ ಬಗ್ಗೆ ಮತದಾರರಲ್ಲಿ ಆಕ್ರೋಶ ಇರುವುದರಿಂದ ಮತ್ತು ಬಿಜೆಪಿಗೆ ಕೆಲವು ಕಡೆ ಬಂಡಾಯ ಎದುರಾಗಿರುವುದರಿಂದ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಬಹುದು. ಜೆಡಿಎಸ್ ಜತೆಗಿನ ಕೆಲವು ಕ್ಷೇತ್ರಗಳ ಒಳ ಒಪ್ಪಂದ ಕೈ ಹಿಡಿಯಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್‌ನದ್ದಾಗಿದೆ. ಜೆಡಿಎಸ್‌ಗೆ ಕಿಂಗ್ ಮೇಕರ್ ಕನಸು
ಉಪ ಚುನಾವಣೆ ಫಲಿತಾಂಶ ರಾಜ್ಯ ರಾಜಕೀಯ ದಲ್ಲಿ ಧ್ರುವೀಕರಣಕ್ಕೆ ಕಾರಣವಾಗಲಿದೆ ಎಂದು ಮೊದಲಿನಿಂದಲೂ ಪ್ರತಿಪಾದಿಸುತ್ತಿರುವ ಜೆಡಿಎಸ್ ಕಿಂಗ್ ಮೇಕರ್ ಆಗುವ ಕನಸು ಕಾಣುತ್ತಿದೆ.ಕಾಂಗ್ರೆಸ್ ಹಾಗೂ ಜೆಡಿಎಸ್ ಹತ್ತು ಕ್ಷೇತ್ರ ಗೆದ್ದರೆ ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಗೆದ್ದರೆ ಬಿಜೆಪಿ ಸರಕಾರ ಪತನವಾಗಲಿದೆ. ಆಗ ಜೆಡಿಎಸ್‌ಗೆ ಕಿಂಗ್ ಮೇಕರ್ ಆಗುವ ಅವಕಾಶ ಸಿಗಲಿದೆ.