Advertisement
ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸಹಿತ 31 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರೆಡು ಕ್ಷೇತ್ರಗಳ 6.78 ಲಕ್ಷ ಮತದಾರರು ಅಭ್ಯರ್ಥಿಗಳ ಹಣೆಬರಹ ಬರೆಯಲಿದ್ದಾರೆ. ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ 1,008 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. 3,821 ಇವಿಎಂ ಮತ್ತು 2,251 ವಿವಿಪ್ಯಾಟ್‌ಗಳನ್ನು ಮತದಾನಕ್ಕೆ ಬಳಸಿಕೊಳ್ಳಲಾಗುತ್ತದೆ.
ತೀವ್ರ ಕುತೂಹಲ ಮೂಡಿಸಿರುವ ಶಿರಾ ಮತ್ತು ರಾಜ ರಾಜೇಶ್ವರಿ ನಗರ ಉಪ ಚುನಾವಣೆಯ ಮತದಾನ ನಡೆಯುವ ಮುನ್ನಾ ದಿನವಾದ ಸೋಮವಾರವೂ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತಯಾಚನೆ ಮೂಲಕ ಅಂತಿಮ ಹಂತದ ಕಸರತ್ತು ನಡೆಸಿದರು.
Related Articles
ಅಶೋಕ್ ಗಸ್ತಿ ನಿಧನದಿಂದ ತೆರವಾಗಿರುವ ರಾಜ್ಯಸಭೆ ಸ್ಥಾನಕ್ಕೆ ಡಿ. 1ಕ್ಕೆ ಚುನಾವಣೆ ನಿಗದಿ ಯಾಗಿದೆ. ಬಹುತೇಕ ಅವಿರೋಧ ಆಯ್ಕೆ ಸಾಧ್ಯತೆ ಹೆಚ್ಚಾಗಿದೆ. ನ. 11ಕ್ಕೆ ಚುನಾವಣೆ ಅಧಿಸೂಚನೆ ಹೊರಬೀಳಲಿದ್ದು, ನ. 18 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ನ. 19ರಂದು ನಾಮಪತ್ರ ಪರಿಶೀಲನೆ, ನ. 23ರಂದು ನಾಮಪತ್ರ ವಾಪಸಾತಿಗೆ ಕೊನೇ ದಿನ. ಡಿ. 1ರಂದು ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ಮತ ದಾನ ನಡೆಯಲಿದ್ದು, ಅದೇ ದಿನ ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯಲಿದೆ. ಅಶೋಕ್ ಗಸ್ತಿ ಅವರ ರಾಜ್ಯಸಭೆ ಸದಸ್ಯತ್ವ ಅವಧಿ 2026ರ ಜೂ. 25ರ ವರೆಗೆ ಇತ್ತು.
Advertisement
ಬಿಹಾರದಲ್ಲಿಂದು 2ನೇ ಹಂತಬಿಹಾರ ವಿಧಾನಸಭೆಯ 2ನೇ ಹಂತದ ಹಕ್ಕು ಚಲಾವಣೆ ಮಂಗಳವಾರ ನಡೆಯಲಿದೆ. 17 ಜಿಲ್ಲೆಗಳ 94 ವಿಧಾನಸಭಾ ಕ್ಷೇತ್ರಗಳಲ್ಲಿ ಇರುವ 2.85 ಕೋಟಿ ಮತದಾರರು ಸಿಎಂ ನಿತೀಶ್ ಕುಮಾರ್ ಸಂಪುಟದಲ್ಲಿನ ನಾಲ್ವರು ಸಚಿವರು, ರಾಘವಪುರ ಕ್ಷೇತ್ರದಿಂದ ಸ್ಪರ್ಧಿಸಿರುವ ಆರ್‌ಜೆಡಿ ನಾಯಕ ತೇಜಸ್ವಿ ಪ್ರಸಾದ್ ಯಾದವ್, ಸಚಿವರಾಗಿರುವ ರಾಮ್ ಸೇವಕ್ ಸಿಂಗ್, ರಾಣಾ ರಣಬೀರ್ ಸಿಂಗ್, ನಂದಕಿಶೋರ್ ಯಾದವ್ ಸಹಿತ 1,500 ಮಂದಿ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.