ರಾಯಚೂರು: ಮಸ್ಕಿ ಕ್ಷೇತ್ರದಲ್ಲಿ ಮತದಾನ ಶಾಂತಿಯುತವಾಗಿ ನಡೆದಿದ್ದು ಬೆಳಗ್ಗೆ 9.30ರ ವೇಳೆಗೆ ಶೇ.11.23ರಷ್ಟು ಮತದಾನವಾಗಿದೆ. 13115 ಪುರುಷರು, 10,065 ಮಹಿಳೆಯರು ಹಾಗೂ 10 ಇತರೆ ಮತದಾರರು ಮತ ಚಲಾಯಿಸಿದರು.
ಮಸ್ಕಿ ಕ್ಷೇತ್ರದ ವಟಗಲ್ ನ ಮತಗಟ್ಟೆ ಏಳರಲ್ಲಿ 95 ವರ್ಷದ ಅಂಬಮ್ಮ ಮತ ಚಲಾಯಿಸಿದರು. ನಡೆಯಲು ಶಕ್ತರಲ್ಲದ ಅವರು ಸೊಸೆ ನೆರವಿನೊಂದಿಗೆ ಬಂದು ಹಕ್ಕು ಚಲಾಯಿದರು. ಇನ್ನೂ ತುರವಿಹಾಳನ ಮತಗಟ್ಟೆ 217ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರವಿಹಾಳ ಮತ ಚಲಾಯಿಸಿದರು.
ಬಿಸಿಲಿನ ಝಳ ಕಡಿಮೆ ಇದ್ದಾಗ್ಯೂ ಮತಗಟ್ಟೆಯತ್ತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ. ಬೆಳಗ್ಗೆ 10 ಗಂಟೆ ಬಳಿಕ ಮತದಾನ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ: ಉಪಚುನಾವಣೆ: ಬೆಳಗಾವಿ, ಬಸವಕಲ್ಯಾಣ, ಮಸ್ಕಿಯಲ್ಲಿ ಮತದಾನಕ್ಕೆ ಚಾಲನೆ
ಉಪ ಚುನಾವಣೆ ನಿಮಿತ್ತ ಮಸ್ಕಿಯ ಸರಕಾರಿ ಪಪೂ ಕಾಲೇಜಿನಲ್ಲಿ ಸ್ಥಾಪಿಸಿದ ಸಖಿ ಮತಗಟ್ಟೆಯಲ್ಲಿ ಮೊದಲು ಮತ ಚಲಾಯಿಸಿದ ಮಹಿಳೆಗೆ ಸಸಿ ನೀಡಿ ಅಭಿನಂದಿಸಲಾಯಿತು. ಮಹಿಳಾ ಮತದಾರರನ್ನು ಸೆಳೆಯುವ ನಿಟ್ಟಿಬಲ್ಲಿ ಸಖಿ ಮತಗಟ್ಟೆ ಕೇಂದ್ರವನ್ನು ಶೃಂಗಾರ ಮಾಡಲಾಗಿದೆ. ಪ್ರಥಮ ಬಾರಿಗೆ ಮತದಾನ ಮಾಡಿದ ಅಕ್ಷತಾ ಮಸ್ಕಿ ಅವರಿಗೆ ಸಹಾಯಕ ಆಯುಕ್ತ ರಾಜಶೇಖರ್ ಡಂಬಳ ಸಸಿ ನೀಡಿ ಅಭಿನಂದಿಸಿದರು. ಇನ್ನೂ ಪ್ರತಾಪ ಗೌಡ ಪಾಟೀಲ್ ಹೊರತಾಗಿಸಿ ಅವರ ಕುಟುಂಬ ಸದಸ್ಯರು ಮಸ್ಕಿಯಲ್ಲಿ ಹಕ್ಕು ಚಲಾಯಿಸಿದರು. ತುರವಿಹಾಳನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರವಿಹಾಳ ಮತ ಚಲಾಯಿಸಿದರು.
ಇದನ್ನೂ ಓದಿ: ತಮಿಳು ಚಿತ್ರರಂಗದ ಖ್ಯಾತ ಹಾಸ್ಯ ನಟ ವಿವೇಕ್ ಇನ್ನಿಲ್ಲ