ಉತ್ತರ ಪ್ರದೇಶದಲ್ಲಿ ಲೋಕಸಭೆ ಚುನಾವಣೆಯೇನೋ ಮುಗಿಯಿತು. ಆದರೆ ಇಲ್ಲಿ ಮತ್ತೂಂದು ಸುತ್ತಿನ ಉಪ ಚುನಾವಣೆಗೆ ರಾಜ್ಯ ಸಿದ್ಧವಾಗಬೇಕಿದೆ. ಯಾಕೆಂದರೆ ಈ ಬಾರಿ 11 ಶಾಸಕರು ಲೋಕಸಭೆ ಕಣಕ್ಕಿಳಿದು ಆಯ್ಕೆಯಾಗಿದ್ದಾರೆ.
ಹೀಗಾಗಿ ಈ ಕ್ಷೇತ್ರಗಳಲ್ಲಿ ಈಗ ಚುನಾವಣೆ ಎದುರಿಸುವಂತಾಗಿದೆ. ಒಟ್ಟು 13 ಶಾಸಕರು ಲೋಕಸಭೆಗೆ ಸ್ಪರ್ಧಿಸಿದ್ದರಾದರೂ, ಇಬ್ಬರು ಸೋಲುಂಡಿದ್ದರು. ಈ ಪೈಕಿ ಬಿಜೆಪಿಯ ಒಂಬತ್ತು ಶಾಸಕರು, ನಾಲ್ವರು ಸಚಿವರು ಮತ್ತು ಎರಡು ಸಮಾಜವಾದಿ ಪಕ್ಷದ ಶಾಸಕರು ಮತ್ತು ಬಿಎಸ್‌ಪಿ, ಅಪ್ನಾ ದಳದ ತಲಾ ಒಬ್ಬರು ಸ್ಪರ್ಧಿಸಿದ್ದರು. ನಾಲ್ವರು ಸಚಿವರ ಪೈಕಿ ಮೂವರು ಗೆದ್ದಿದ್ದಾರೆ. ಹೀಗಾಗಿ ನಾಲ್ಕು ಸಚಿವರ ಹುದ್ದೆಯನ್ನು ಭರ್ತಿ ಮಾಡಬೇಕಿದ್ದು, ಸಿಎಂ ಯೋಗಿ ಆದಿತ್ಯನಾಥ ಸಚಿವ ಸಂಪುಟವನ್ನೂ ಪುನಾರಚನೆ ಮಾಡುವ ಅಗತ್ಯ ಉಂಟಾಗಿದೆ.
Advertisement