ಹೊಸದಿಲ್ಲಿ: 8 ರಾಜ್ಯಗಳ 10 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನವಣಾ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಬಿಜೆಪಿ 5 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ್ದು, ಕಾಂಗ್ರೆಸ್ ಪಾಲಿಗೆ ಕರ್ನಾಟಕದ 2 ಸ್ಥಾನಗಳು,ಮಧ್ಯಪ್ರದೇಶದ 1 ಸ್ಥಾನ ಲಭ್ಯವಾಗಿದೆ.
ಪಕ್ಷದ ಆಳ್ವಿಕೆಯಲ್ಲಿರುವ ರಾಜಸ್ಥಾನದ ಧೋಲ್‌ಪುರ್ ಕ್ಷೇತ್ರ,ಅಸ್ಸಾಂನ ಧಿಮಾಜಿ, ಮಧ್ಯಪ್ರದೇಶದ ಬಂಧಾವ್‌ಘರ್ ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದರೆ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಎಂಪಿಯ ಅಟೇರ್ ಉಳಿಸಿಕೊಂಡ ಕಾಂಗ್ರೆಸ್. ಆಪ್ ಆಳ್ವಿಕೆಯಲ್ಲಿರುವ ದೆಹಲಿಯ ರಜೌರಿ ಗಾರ್ಡನ್ ಕ್ಷೇತ್ರವನ್ನು ಬಿಜೆಪಿ ಆಪ್‌ನಿಂದ ಕಸಿದುಕೊಂಡಿದೆ.
ಕಾಂಗ್ರೆಸ್ ಆಡಳಿತವಿರುವ ಹಿಮಾಚಲ ಪ್ರದೇಶ ಬೋರಂಜ್ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಕರ್ನಾಟಕದ ಗುಂಡ್ಲುಪೇಟೆ ಮತ್ತು ನಂಜನಗೂಡು ಕೇತ್ರಗಳ ಗೆಲುವು ಕಾಂಗ್ರೆಸ್‌ನ ಅಸ್ತಿತ್ವ ಉಳಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಭಾವ ಇದೆ ಎನ್ನುವುದನ್ನು ತೋರಿಸಿದೆ.
ಬಿಜೆಪಿ ಆಳ್ವಿಕೆಯಿರುವ ಜಾರ್ಖಂಡ್‌ನಲ್ಲಿ ಜೆಎಂಎಂ ತನ್ನ ಸ್ಥಾನ ಉಳಿಸಿಕೊಂಡಿದ್ದು, ಪಶ್ಚಿಮ ಬಂಗಾಳದ ಕಾಂತಿ ದಕ್ಷಿಣ ಕ್ಷೇತ್ರವನ್ನು ಆಡಳಿತಾರೂಢ ಟಿಎಂಸಿ ಉಳಿಸಿಕೊಂಡಿದೆ.