ಕೊಳ್ಳೇಗಾಲ: ನಗರದ 7 ವಾರ್ಡುಗಳಿಗೆ ನಡೆ ಯುವ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಸೋಮವಾರ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಬಿಎಸ್ಪಿ, ಕೆಆರ್ ಎಸ್ ಪಕ್ಷ ಮತ್ತು ಪಕ್ಷೇತರ ಒಟ್ಟು 25 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು.
ಕಳೆದ 2020ರಲ್ಲಿ ಶಾಸಕ ಎನ್.ಮಹೇಶ್ ಬಿಎಸ್ಪಿಯಿಂದ ಉಚ್ಚಾಟನೆಗೊಂಡ ಬಳಿಕ ಬಿಜೆಪಿಗೆ ಸೇರ್ಪಡೆಯಾದರು. ನಂತರ ಶಾಸಕರೊಂದಿಗೆ 7 ಜನ ಬಿಎಸ್ಪಿ ನಗರಸಭಾ ಸದಸ್ಯರು ಗುರುತಿಸಿಕೊಂಡು ಬಿಜೆಪಿ ನಗರಸಭಾ ಸದಸ್ಯರೊಂದಿಗೆ ಸೇರಿ ನಗರಸಭೆಯ ಅಧ್ಯಕ್ಷರ ಆಯ್ಕೆಯ ವೇಳೆ ಬಿಎಸ್ಪಿಯಲ್ಲಿ ಗೆದ್ದು ಶಾಸಕರೊಂದಿಗೆ ಗುರುತಿಸಿಕೊಂಡಿದ್ದ ವಿಪ್ ಜಾರಿ ಉಲ್ಲಂಘನೆಯಿಂದ ನ್ಯಾಯಾಲಯ ಅನರ್ಹಗೊಳಿಸಿದ್ದರು. ಆನಂದಜ್ಯೋತಿ ಕಾಲೋನಿ ಬಡಾವಣೆಯ 2ನೇ ವಾರ್ಡಿಗೆ ಎಲ್.ನಾಗಮಣಿ ಬಿಜೆಪಿ, ಭಾಗ್ಯ ಕಾಂಗ್ರೆಸ್, ಎಚ್.ಶಾಂತಲಕ್ಷ್ಮಿ ಎಸ್‌ಡಿಪಿಐ.
ಹಳೇ ಕುರುಬರ ಬಡಾವಣೆಯ 6ನೇ ವಾರ್ಡಿಗೆ ಈ ಹಿಂದೆ ಗಂಗಮ್ಮ ವರದರಾಜುಅವಿರೋಧವಾಗಿ ಆಯ್ಕೆಯಾಗಿದ್ದ ಹಿನ್ನೆಲೆಯಲ್ಲಿ ಬಿಎಸ್ಪಿಗೆ ಹಲವಾರು ಸದಸ್ಯರು ಆಯ್ಕೆಗೆ ಸಹಕಾರಿಯಾಗಿತ್ತು. ನಂತರ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯ ವೇಳೆ ಅವಿರೋಧವಾಗಿ ಆಯ್ಕೆಯಾಗಿದ್ದ ಗಂಗಮ್ಮ ಅದ್ಯಕ್ಷರಾಗಿ ನೇಮಕಗೊಂಡು ನ್ಯಾಯಾಲಯದ ಆದೇಶದಂತೆ ಅನರ್ಹರಾಗಿದ್ದು ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕಾಂಗ್ರೆಸ್‌ನಿಂದ ಟಿಕೆಟ್ ವಂಚಿತರಾದ ಬಳಿಕ ವಾರ್ಡಿಗೆ ಅವರ ತಂಗಿ ಮಾನಸ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದಾರೆ.
ಕಾಂಗ್ರೆಸ್‌ನಿಂದ ಸಂಪತ್‌ಕುಮಾರಿ ನಾಮಪತ್ರ ಸಲ್ಲಿಸಿದರು. 7ನೇ ವಾರ್ಡಿಗೆ ನಾಷೀರ್ ಷರೀಫ್ ಬಿಜೆಪಿ, ಮಹಮ್ಮದ್ ಖೀಜರ್ ಕಾಂಗ್ರೆಸ್, ಇನಾಯತ್ ಪಾಷಾ ಬಿಎಸ್ಪಿ, ಮಹಮ್ಮದ್ ಇರ್ಪಾನ್ ಜೆಡಿಎಸ್, ಶಿವಶಂಕರ್ ಪಕ್ಷೇತರ, 13ನೇ ವಾಡಿನಿಂದ ಪವಿತ್ರ ಬಿಜೆಪಿ, ಸರಸ್ವತಿ ಕಾಂಗ್ರೆಸ್, 21ನೇ ವಾರ್ಡಿ ನಿಂದ ಪ್ರಕಾಶ್ ಬಿಜೆಪಿ, ಎಸ್.ಮೂರ್ತಿ ಕಾಂಗ್ರೆಸ್, ಎಂ.ಆರ್.ಲೋಕೇಶ್ ಬಿಎಸ್ಪಿ, ಜಗದೀಶ್ ಎಂ ಕೆಆರ್‌ಎಸ್, 25ನೇ ವಾರ್ಡಿನಿಂದ ರಾಮಕೃಷ್ಣ ಬಿಜೆಪಿ, ರಮೇಶ್ ಕಾಂಗ್ರೆಸ್, ರಂಗಸ್ವಾಮಿ ಬಿಎಸ್ಪಿ, ಶಿವಮಲ್ಲು ಪಕ್ಷೇತರ, ಎಂ.ಮಹದೇವ ಪಕ್ಷೇತರ, 26ನೇ ವಾರ್ಡಿನಿಂದ ನಾಗಸುಂದ್ರಮ್ಮ ಬಿಜೆಪಿ, ಸುನೀತ ಕಾಂಗ್ರೆಸ್, ಮಂಗಳಮ್ಮ ಜೆಡಿಎಸ್, ಕವಿತ.ಸಿ ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಶಾಸಕ ಎನ್.ಮಹೇಶ್ 7 ಸದಸ್ಯರೊಂದಿಗೆ ಮೆರವಣಿಗೆಯಲ್ಲಿ ತಾಲೂಕು ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿ ನೂತನವಾಗಿ ಆಯ್ಕೆ ಯಾಗುವಂತೆ ಎಲ್ಲಾ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.