Advertisement

ಬದಲಾಯ್ತು ಶ್ರೀಲೀಲಾ- ಧನ್ವೀರ್‌ ನಟನೆಯ ‘ಬೈ ಟು ಲವ್‌’ ರಿಲೀಸ್ ಡೇಟ್

09:08 AM Feb 08, 2022 | Team Udayavani |

ಶ್ರೀಲೀಲಾ ಹಾಗೂ ಧನ್ವೀರ್‌ ನಟನೆಯ “ಬೈ ಟು ಲವ್‌’ ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಫೆ.18ರಂದು ತೆರೆಕಾಣುತ್ತಿದೆ. ಆರಂಭದಲ್ಲಿ ಚಿತ್ರತಂಡ ಫೆ.25ಕ್ಕೆ ಬರಲು ನಿರ್ಧರಿಸಿತ್ತು. ಆದರೆ, ಈಗ ಒಂದು ವಾರ ಮೊದಲೇ ಬಿಡುಗಡೆ ಆಗಲಿದೆ. ಹೆಸರಿಗೆ ತಕ್ಕಂತೆ ಇದೊಂದು ಲವ್‌ಸ್ಟೋರಿ ಸಿನಿಮಾವಾಗಿದೆ.

Advertisement

ಇನ್ನು, “ಬೈ ಟು ಲವ್‌’ ಸಿನಿಮಾ ಆರಂಭದಿಂದ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ. ಪೋಸ್ಟರ್‌, ಟೀಸರ್‌ ಹಾಗೂ ಸಾಂಗ್ಸ್‌ ಹೀಗೆ ಪ್ರತಿ ಹಂತದಲ್ಲೂ ನಿರೀಕ್ಷೆ ಹುಟ್ಟಿಸಿರುವ ಬೈ ಟು ಲವ್‌ ಸಿನಿಮಾದಲ್ಲಿ ಧನ್ವೀರ್‌ ಹಾಗೂ ಶ್ರೀಲೀಲಾ ಜೋಡಿ ಮೋಡಿ ಮಾಡುವ ನಿರೀಕ್ಷೆ ಚಿತ್ರತಂಡದ್ದು.

ಈ ಹಿಂದೆ ಮಾಸ್‌ ಲುಕ್‌ನಲ್ಲಿ ಮಿಂಚಿದ್ದ ಧನ್ವೀರ್‌, ಈಗ “ಬೈ ಟು ಲವ್‌’ನಲ್ಲಿ ಲವರ್‌ ಬಾಯ್‌ ಪಾತ್ರ ಮಾಡಿದ್ದಾರೆ. ಶ್ರೀಲೀಲಾ ಮಲೆನಾಡ ಹುಡ್ಗಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳಲ್ಲಿ ಈ ಕ್ಯೂಟ್‌ ಜೋಡಿ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ:Minnal Murali ಚಿತ್ರದ ಮೂಲಕ ಗಮನ ಸೆಳೆದ ಯುವ ನಟಿ Femina George ಬ್ಯೂಟಿಫುಲ್ ಗ್ಯಾಲರಿ

ಗಣೇಶ್‌ ನಟನೆಯ ಸಖತ್‌, ನಿಖೀಲ್‌ ಕುಮಾರ್‌ಸ್ವಾಮಿ ನಟನೆಯ ಯದುವೀರ ಸಿನಿಮಾ ಹಾಗೂ “ಜೋಗಿ’ ಪ್ರೇಮ್ -ಧ್ರುವ ಸರ್ಜಾ ಕಾಂಬಿನೇಶನ್‌ ಸಿನಿಮಾಗಳನ್ನು ನಿರ್ಮಿಸುತ್ತಿರುವ ಕೆವಿಎನ್‌ ಪ್ರೊಡಕ್ಷನ್ಸ್‌ನಡಿ ನಿಶಾ ವೆಂಕಟ್‌ ಕೋನಂಕಿ “ಬೈ ಟು ಲವ್‌’ ನಿರ್ಮಾಣ ಮಾಡಿದ್ದಾರೆ. ಮಹೇನ್‌ ಸಿಂಹ ಛಾಯಾಗ್ರಹಣ, ಅಜನೀಶ್‌ ಲೋಕನಾಥ್‌ ಸಂಗೀತ ಹಾಗೂ ಯೋಗಾನಂದ್‌ ಸಂಭಾಷಣೆ ಈ ಚಿತ್ರಕ್ಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next