Advertisement
ಆರಂಭದಲ್ಲಿ ಕೆ. ಶ್ರೀಕಾಂತ್ ಫ್ರಾನ್ಸ್‌ನ ಟೋಮ ಪೊಪೋವ್ ಅವರನ್ನು ನೇರ ಗೇಮ್‌ಗಳಲ್ಲಿ ಮಣಿಸಿದರು. ಬಳಿಕ ಪಿ.ವಿ. ಸಿಂಧು ಡೆನ್ಮಾರ್ಕ್‌ನ ಲಿನ್ ಕ್ರಿಸ್ಟೋಫ್ಸೆನ್ ಅವರಿಗೆ ಆಘಾತವಿಕ್ಕಿದರು.
Related Articles
Advertisement
ಥಾಯ್ಲೆಂಡಿನ 3 ಬಾರಿಯ ಜೂನಿಯರ್ ವಿಶ್ವ ಚಾಂಪಿಯನ್ ವಿತಿದ್ಸರಣ್ ಅವರನ್ನು ಕೆ. ಶ್ರೀಕಾಂತ್ ಮುಂದಿನ ಪಂದ್ಯದಲ್ಲಿ ಎದುರಿಸಲಿದ್ದಾರೆ.
“ಎ’ ವಿಭಾಗದಲ್ಲಿ ಕಾಣಿಸಿಕೊಂಡಿರುವ ಪಿ.ವಿ. ಸಿಂಧು ಡೆನ್ಮಾರ್ಕ್‌ನ ಲಿನ್ ಕ್ರಿಸ್ಟೋಫ್ಸೆನ್ ಅವರನ್ನು 21-14, 21-16 ಅಂತರದಿಂದ ಪರಾಭವಗೊಳಿಸಿದರು. 2018ರ ಚಾಂಪಿಯನ್ ಆಗಿರುವ ಸಿಂಧು ಅವರ ಮುಂದಿನ ಎದುರಾಳಿ ಜರ್ಮನಿಯ ವ್ಯೋನ್ ಲೀ.
ಅಶ್ವಿನಿ-ಸಿಕ್ಕಿ ಪರಾಭವವನಿತಾ ಡಬಲ್ಸ್ ವಿಭಾಗದ ಮೊದಲ ಪಂದ್ಯದಲ್ಲಿ ಅಶ್ವಿನಿ ಪೊನ್ನಪ್ಪ-ಎನ್. ಸಿಕ್ಕಿ ರೆಡ್ಡಿ ಪರಾಭವಗೊಂಡರು. “ಬಿ’ ವಿಭಾಗದ ಮುಖಾಮುಖೀಯಲ್ಲಿ ಭಾರತೀಯ ಜೋಡಿಯನ್ನು ಜಪಾನಿನ ದ್ವಿತೀಯ ಶ್ರೇಯಾಂಕಿತ ಜೋಡಿಯಾದ ನಾಮಿ ಮತ್ಸುಯಾಮಾ-ಚಿಹರು ಶಿದಾ 21-14, 21-18 ಅಂತರದಿಂದ ಹಿಮ್ಮೆಟ್ಟಿಸಿದರು. “ಎ’ ವಿಭಾಗದ ಪುರುಷರ ಡಬಲ್ಸ್‌ನ ಮೊದಲ ಪಂದ್ಯದಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ಅವರನ್ನು ಡೆನ್ಮಾರ್ಕ್‌ನ ಕಿಮ್ ಆ್ಯಸ್ಟ್ರಪ್-ಆ್ಯಂಡರ್ ರಾಸು¾ಸೆನ್ 21-16, 21-5 ಅಂತರದಿಂದ ಪರಾಭವಗೊಳಿಸಿದರು.