Advertisement

ಪಿ.ವಿ. ಸಿಂಧುಗೆ ಕಠಿನ ಡ್ರಾ

06:00 AM Dec 11, 2018 | |

ಗ್ವಾಂಗ್‌ಝೂ (ಚೀನ): ಬುಧವಾರದಿಂದ ಆರಂಭವಾಗಲಿರುವ “ಬಿಡಬ್ಲ್ಯುಎಫ್ ವರ್ಲ್ಡ್ ಟೂರ್‌ ಫೈನಲ್ಸ್‌’ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಬ್ಯಾಡ್ಮಿಂಟನ್‌ ತಾರೆ ಪಿ.ವಿ. ಸಿಂಧುಗೆ ವನಿತಾ ಸಿಂಗಲ್ಸ್‌ ವಿಭಾಗದಲ್ಲಿ ಕಠಿನ ಡ್ರಾ ಎದುರಾಗಿದೆ. ಮೊದಲ ಬಾರಿಗೆ ಈ ಕೂಟದಲ್ಲಿ ಭಾಗವಹಿಸುತ್ತಿರುವ ಸಮೀರ್‌ ವರ್ಮ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಸುಲಭ ಡ್ರಾ ಸಿಕ್ಕಿದ್ದು ನಾಕೌಟ್‌ ಹಂತ ತಲುಪುವ ಅವಕಾಶವಿದೆ. 

Advertisement

ಕಳೆದ ವರ್ಷ ದುಬಾೖಯಲ್ಲಿ ನಡೆದ ಆವೃತ್ತಿಯಲ್ಲಿ ರನ್ನರ್‌ ಆಪ್‌ ಪ್ರಶಸ್ತಿ ಪಡೆದಿದ್ದ ಸಿಂಧು, ಈ ಬಾರಿಯ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್‌ ಜಪಾನಿನ ಅಕಾನೆ ಯಮಗುಚಿ, ವಿಶ್ವದ ನಂ. ವನ್‌ ಚೈನೀಸ್‌ ತೈಪೆನ ತೈ ತ್ಸು ಯಿಂಗ್‌ ಹಾಗೂ ಅಮೆರಿಕದ ಬೈವೆನ್‌ ಹಾಂಗ್‌ ಅವರೊಂದಿಗೆ “ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ. ಹೀಗಾಗಿ ಸಿಂಧುಗೆ ಈ ಕೂಟ ಕಷ್ಟಕರವಾಗಿರಲಿದೆ. 3ನೇ ಬಾರಿಗೆ ಈ ಕೂಟದಲ್ಲಿ ಸಿಂಧು ಪಾಲ್ಗೊಳ್ಳುತ್ತಿದ್ದು, ಯಮಗುಚಿ ವಿರುದ್ಧ 9-4 ಗೆಲುವುಗಳ ದಾಖಲೆ ಹೊಂದಿದ್ದಾರೆ. ಆದರೆ ಈ ಋತುವಿನಲ್ಲಿ ಯಮಗುಚಿ ವಿರುದ್ಧದ 5 ಪಂದ್ಯಗಳಲ್ಲಿ 4ರಲ್ಲಿ ಸೋಲನುಭವಿಸಿದ್ದಾರೆ. 

ಸಯ್ಯದ್‌ ಮೋದಿ ಅಂತಾರಾಷ್ಟ್ರೀಯ ಟೂರ್ನಿಯ ಪ್ರಶಸ್ತಿ ಉಳಿಸಿಕೊಂಡಿರುವ ಸಮೀರ್‌ ವರ್ಮ, ಕೊನೆ ಘಳಿಗೆಯಲ್ಲಿ ಈ ಕೂಟಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಅವರು ವಿಶ್ವದ ನಂ. ವನ್‌ ಜಪಾನಿನ ಕೆಂಟೊ ಮೊಮೊಟಾ, ಇಂಡೋನೇಶ್ಯದ ಟಾಮಿ ಸುಗಿಆರ್ಟೊ ಹಾಗೂ ಥಾಯ್ಲೆಂಡ್‌ನ‌ ಕಂಟಾಫೊನ್‌ ವಾಂಗ್‌ಚಾರಿಯನ್‌ ಅವರೊಂದಿಗೆ ಗುಂಪು ಹಂಚಿಕೊಂಡಿದ್ದಾರೆ. ಕೆ. ಶ್ರೀಕಾಂತ್‌ ಬಳಿಕ ಈ ಕೂಟಕ್ಕೆ ಅರ್ಹತೆ ಪಡೆದ ಎರಡನೇ ಭಾರತೀಯ ಆಟಗಾರನಾಗಿರುವ ಸಮೀರ್‌ ವರ್ಮ ಸೆಮಿಫೈನಲ್‌ ವರೆಗೆ ಸುಲಭವಾಗಿ ಸಾಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next