Advertisement
ಸಿಂಧು ಈ ಪಂದ್ಯಕ್ಕೂ ಮುನ್ನವೇ ಸತತ 2 ಪಂದ್ಯದಲ್ಲಿ ಗೆದ್ದು ಸೆಮೀಸ್ ತಲುಪಿದ್ದರು. ಆದರೆ ಗುಂಪಿನ ಅಂತಿಮ ಪಂದ್ಯದಲ್ಲಿಯೂ ಗೆಲುವು ಪಡೆದು ಗುಂಪಿನಲ್ಲಿ ಒಟ್ಟು 3 ಅಂಕ ಸಂಪಾದಿಸಿ ಅಗ್ರಸ್ಥಾನದಲ್ಲಿಯೇ ಉಳಿದುಕೊಂಡಿದ್ದಾರೆ. ಈ ಪಂದ್ಯಕ್ಕೂ ಮುನ್ನ ಸಿಂಧು ಜಪಾನ್‌ನ ಯಮಗುಚಿ ವಿರುದ್ಧ 4-2ರ ಸೋಲು ಗೆಲುವಿನ ಅಂತರ ಹೊಂದಿದ್ದರು. ಗೆಲುವಿನ ನಂತರ ಈ ಅಂತರ 5-2ಕ್ಕೆ ಏರಿದೆ.
Related Articles
Advertisement
ಸೆಮೀಸ್‌ನಲ್ಲಿ ಚೆನ್ ಎದುರಾಳಿ: ಸಿಂಧುಗೆ ಇದು ಗುಂಪು ಹಂತದಲ್ಲಿ ಕೊನೆಯ ಪಂದ್ಯವಾಗಿತ್ತು. ಇದಕ್ಕೂ ಮುನ್ನ ಚೀನಾದ ಹಿ ಬಿಂಗ್‌ಜಿಯೊ, ಮತ್ತೂಂದು ಪಂದ್ಯದಲ್ಲಿ ಜಪಾನ್‌ನ ಸಾಯಕ ಸ್ಯಾಟೊ ವಿರುದ್ಧ ಗೆಲುವು ಪಡೆದಿದ್ದರು. ಎಲ್ಲಾ ಪಂದ್ಯದಲ್ಲಿಯೂ ನೇರ ಸೆಟ್‌ನಲ್ಲಿಯೇ ಜಯ ಸಾಧಿಸಿರುವುದು ವಿಶೇಷ. ಶನಿವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ಸಿಂಧು ಚೀನಾದ ಚೆನ್ ಯುಫೈ ಸವಾಲನ್ನು ಎದುರಿಸಲಿದ್ದಾರೆ.
ಮೊದಲ ಬಾರಿ ದುಬೈಓಪನ್ ಗೆಲ್ಲುವ ಗುರಿ
ಭಾರತದ ತಾರಾ ಆಟಗಾರ್ತಿ ಸಿಂಧು ಒಲಿಂಪಿಕ್ಸ್ ಬೆಳ್ಳಿ ಪದಕ ಸೇರಿದಂತೆ ವಿಶ್ವ ಮಟ್ಟದಲ್ಲಿ ಅನೇಕ ಮಹತ್ವದ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಆದರೆ ಈವರೆಗೂ ದುಬೈ ವಿಶ್ವ ಸೂಪರ್ ಸೀರೀಸ್ ಪ್ರಶಸ್ತಿ ಗೆದ್ದಿಲ್ಲ. ಹೀಗಾಗಿ ಪ್ರಸಕ್ತ ಕೂಟದಲ್ಲಿ ಸಿಂಧು ಈ ಸಾಧನೆಯನ್ನು ಮಾಡುವ ಸಾಧ್ಯತೆ ಇದೆ. ಸದ್ಯ ಸಿಂಧು ಭರ್ಜರಿ ಫಾರ್ಮ್ನಲ್ಲಿರುವುದರಿಂದ ಗುಂಪು ಹಂತದಲ್ಲಿ ಆಡಿದ ಎಲ್ಲಾ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ. ಪ್ರಬಲ ಆಟಗಾರ್ತಿಯರಿಗೆ ಆಘಾತ ನೀಡಿದ್ದಾರೆ. ಎಲ್ಲಾ ಪಂದ್ಯದಲ್ಲಿಯೂ ನೇರ ಸೆಟ್‌ನಲ್ಲಿಯೇ ಗೆಲುವು ಸಾಧಿಸಿರುವುದು ವಿಶೇಷವಾಗಿದೆ. ಗುಂಪು ಹಂತದಲ್ಲಿ ಅಗ್ರ ಸ್ಥಾನದಲ್ಲಿಯೇ ಸೆಮಿಫೈನಲ್‌ಗೆ ಲಗ್ಗೆ ಹಾಕಿದ ಸಿಂಧು ಚೀನಾದ ಚೆನ್ ಯುಫೈ ಸವಾಲು ಎದುರಿಸಲಿದ್ದಾರೆ. ಈ ಪಂದ್ಯವೂ ಕೂಡ ಸಿಂಧುಗೆ ಸುಲಭ ಜಯ ಆಗುವ ಸಾಧ್ಯತೆ ಇದೆ. ಯಾಕೆಂದರೆ ಈ ಹಿಂದೆ ಎದುರಾದ ಮುಖಾಮುಖೀಯಲ್ಲಿ ಸಿಂಧು ಚೀನಾ ಆಟಗಾರ್ತಿಯನ್ನು ಸೋಲಿಸಿದ್ದಾರೆ. ಈ ಎಲ್ಲಾ ದೃಷ್ಟಿಯಲ್ಲಿ ಸಿಂಧು ಮೊದಲ ಬಾರಿಗೆ ದುಬೈ ಸೂಪರ್ ಸೀರೀಸ್ ಪ್ರಶಸ್ತಿ ಗೆಲ್ಲುವ ಎಲ್ಲಾ ಸಾಧ್ಯಗಳು ಇವೆ.