Advertisement

Bollywood: ಜೂನ್‌ನಿಂದಲೇ ಬ್ಯುಸಿಯಾಗಲಿದೆ ಬಾಲಿವುಡ್; ಶುರುವಾಗಲಿದೆ ರಿಲೀಸ್‌ ಭರಾಟೆ

03:24 PM May 13, 2024 | Team Udayavani |

ಮುಂಬಯಿ: ಐಪಿಎಲ್‌, ಎಲೆಕ್ಷನ್‌ ಅಬ್ಬರದಲ್ಲಿ ಸಿನಿಮಾರಂಗ ಕೊಂಚ ವಿಶ್ರಾಂತಿ ಮೂಡಿನಲ್ಲಿದೆ. ಕೋಟಿ ಗಳಿಕೆಯ ಲೆಕ್ಕಚಾರದಲ್ಲಿರುತ್ತಿದ್ದ ಬಾಕ್ಸ್‌ ಆಫೀಸ್‌ ಶಾಂತವಾಗಿದೆ. ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್‌ ಡೇಟ್‌ ನ್ನು ಮುಂದಕ್ಕೆ ಹಾಕಿಕೊಂಡಿದೆ.

Advertisement

ಚುನಾವಣೆ ಹಾಗೂ ಕ್ರಿಕೆಟ್‌ ಸೀಸನ್‌ ನಲ್ಲಿ ಕೈ ಲೆಕ್ಕದಲ್ಲಿ ಕೆಲವೇ ಕೆಲ ಸಿನಿಮಾಗಳು ಮಾತ್ರ ತೆರೆಕಂಡಿದೆ. ಹೆಚ್ಚಾಗಿ ದಕ್ಷಿಣದ ಸಿನಿಮಾಗಳು ತೆರೆಕಂಡಿವೆ. ಬಾಲಿವುಡ್ ಹೆಚ್ಚಿನ ಸಿನಿಮಾಗಳನ್ನು ರಿಲೀಸ್‌ ಮಾಡಿಲ್ಲ. ಮಾಡಿದರೂ ಅವು ಅಷ್ಟಾಗಿ ಸದ್ದು ಮಾಡಿಲ್ಲ.

ಬಾಲಿವುಡ್‌ನಲ್ಲಿ ಈ ವರ್ಷ ನಿರೀಕ್ಷೆಯನ್ನು ಹೆಚ್ಚಿಸಿರುವ ಹಲವು ಸಿನಿಮಾಗಳು ಬರಲಿವೆ. ಸಮಯ ಸಂದರ್ಭ ನೋಡಿಕೊಂಡು ರಿಲೀಸ್‌ ಮಾಡುವ ಯೋಜನೆಯನ್ನು ಹಾಕಿಕೊಂಡು ಕೆಲ ಸಿನಿಮಾಗಳು ಕಾದುಕೂತಿವೆ.

ಬ್ಯುಸಿಯಾಗಲಿದೆ ಬಾಲಿವುಡ್..‌ ಬಾಲಿವುಡ್‌ ನಲ್ಲಿ ಇತ್ತೀಚೆಗೆ ಸಿನಿಮಾಗಳು ಬಂದ ಸಿನಿಮಾಗಳು ಅಷ್ಟಾಗಿ ಕಮಾಲ್‌ ಮಾಡಿಲ್ಲ. ಅಮೀರ್‌ ಖಾನ್‌ ಮಾಜಿ ಪತ್ನಿಯ ‘ಲಾಪತಾ ಲೇಡಿಸ್​’ ಕಂಟೆಂಟ್‌ ವಿಚಾರವಾಗಿ ಸದ್ದು ಮಾಡಿತ್ತು. ಉಳಿದಂತೆ ಬಂದ ʼಬಡೇ ಮಿಯಾನ್ ಚೋಟೆ ಮಿಯಾನ್ʼ , ʼಸೈತಾನ್‌ʼ, ʼಮೈದಾನ್‌ʼ, ʼರುಸ್ಲಾನ್‌ʼ, ʼಕ್ರ್ಯೂʼ ʼಯೋಧʼ.. ಹೀಗೆ ರಿಲೀಸ್‌ ಆದ ಸಿನಿಮಾಗಳು ಅಷ್ಟಕ್ಕಷ್ಟೇ ಎನ್ನುವಷ್ಟರ ಮಟ್ಟಿಗೆ ನಿರಾಸೆ ಮೂಡಿಸಿತು.

ಐಪಿಎಲ್‌ ಹಾಗೂ ಎಲೆಕ್ಷನ್‌ ಭರಾಟೆಯಲ್ಲಿದ್ದ ಬಾಲಿವುಡ್‌ ನಿಧಾನವಾಗಿ ಸಿನಿಮಾಗಳ ರಿಲೀಸ್‌ ನತ್ತ ಸಾಗುತ್ತಿದೆ. ಯಾವೆಲ್ಲಾ ಸಿನಿಮಾಗಳು ಪ್ರಮುಖವಾಗಿ ರಿಲೀಸ್‌ ಆಗುವ ಸಿದ್ಧತೆಯಲ್ಲಿದೆ ಮತ್ತು ಅವು ಯಾವ ಹಂತದಲ್ಲಿದೆ ಎನ್ನುವುದನ್ನು ನೋಡಿಕೊಂಡು ಬರೋಣ..

Advertisement

ಚಂದು ಚಾಂಪಿಯನ್:‌ ಕಾರ್ತಿಕ್‌ ಆರ್ಯನ್‌ ಅವರಿಗೆ ‘ಭೂಲ್ ಭುಲೈಯಾ 2’ ಮತ್ತೆ ಯಾವ ಸಿನಿಮಾ ಕೂಡ ಅಷ್ಟಾಗಿ ಯಶಸ್ಸು ತಂದುಕೊಡಲಿಲ್ಲ.  ಒಂದಷ್ಟು ನಿರೀಕ್ಷೆಯನ್ನಿಟ್ಟುಕೊಂಡಿರುವುದು ಅವರ ಮುಂದಿನ ಸಿನಿಮಾದ ಮೇಲೆ. ಕಬೀರ್‌ ಖಾನ್‌ ಅವರ ʼಚಂದು ಚಾಂಪಿಯನ್ʼ ಜೂನ್.14‌ ರಂದು ರಿಲೀಸ್‌ ಆಗಲಿದೆ.

ಮೂಲಗಳ ಪ್ರಕಾರ ಸಿನಿಮಾದ ಟ್ರೇಲರ್‌ ಶೀಘ್ರದಲ್ಲಿ ಬರಲಿದೆ. ನಾಲ್ಕು ವಾರ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಚಿತ್ರತಂಡ ನಿರತವಾಗಲಿದೆ ಎನ್ನಲಾಗಿದೆ.

ʼಬೇಬಿ ಜಾನ್‌ʼ: ವರುಣ್‌ ಧವನ್‌ – ಕೀರ್ತಿ ಸುರೇಶ್‌ ನಟಿಸಿರುವ ʼಬೇಬಿ ಜಾನ್‌ʼ ಸಿನಿಮಾ  ಮೇ.31 ರಂದು ರಿಲೀಸ್‌ ಆಗಲಿದೆ ಎನ್ನಲಾಗಿತ್ತು. ಆದರೆ ಇದೀಗ ಬಂದಿರುವ ಮಾಹಿತಿಯ ಪ್ರಕಾರ ಸಿನಿಮಾದ ರಿಲೀಸ್‌ ಡೇಟ್‌ ಮುಂದೂಡಿಕೆ ಆಗಿದ್ದು, ಶೀಘ್ರದಲ್ಲಿ ಹೊಸ ರಿಲೀಸ್‌ ಡೇಟ್‌ ಅನೌನ್ಸ್‌ ಆಗಲಿದೆ. ಕಾಲಿವುಡ್‌  ನಿರ್ದೇಶಕ ಅಟ್ಲಿ ಅವರ ʼಥೇರಿʼ ಸಿನಿಮಾದ ರಿಮೇಕ್‌ ಸಿನಿಮಾ ಇದಾಗಿದ್ದು, ಮುರಾದ್ ಖೇತಾನಿ, ಅಟ್ಲೀ ಮತ್ತು ಜಿಯೋ ಸ್ಟುಡಿಯೋಸ್ ಸಿನಿಮಾವನ್ನು ನಿರ್ಮಾಣ ಮಾಡಲಿದೆ.

ಸರ್ಫಿರಾ:  ಸತತ ಫ್ಲಾಪ್‌ ನಿಂದ ಸೋತಿರುವ ಅಕ್ಷಯ್‌ ಕುಮಾರ್‌ ಕಂಬ್ಯಾಕ್‌ ಮಾಡುವ ಸಿನಿಮಾವೆಂದು ಹೇಳಲಾಗುತ್ತಿರುವ  ʼಸರ್ಫಿರಾʼ ಜುಲೈ 12 ರಂದು ರಿಲೀಸ್‌ ಆಗಲಿದೆ. ಖ್ಯಾತ ನಿರ್ದೇಶಕಿ ಸುಧಾ ಕೊಂಗರ ಅವರ ʼಸೂರರೈ ಪೊಟ್ರುʼ ಸಿನಿಮಾದ ಸಿನಿಮಾ ಇದಾಗಿದೆ. ಜೂನ್‌ ತಿಂಗಳಿನಲ್ಲಿ ಸಿನಿಮಾದ ಪ್ರಚಾರ ಆರಂಭಗೊಳ್ಳಲಿದ್ದು, ಚಿತ್ರತಂಡ ಹಾಡು, ಟೀಸರ್ ಮತ್ತು ಟ್ರೈಲರ್ ರಿಲೀಸ್‌ ಗೆ ಪ್ಲ್ಯಾನ್‌ ಮಾಡುತ್ತಿದೆ ಎನ್ನಲಾಗಿದೆ.

ರೇಡ್‌ -2: 2018 ರಲ್ಲಿ ಬಂದ ಅಜಯ್‌ ದೇವಗನ್‌ ಅವರ ʼರೇಡ್‌ʼ ಸಿನಿಮಾದ ಸೀಕ್ವೆಲ್‌ ಅನೌನ್ಸ್‌ ಆದ ದಿನದಿಂದ ಸುದ್ದಿಯಲ್ಲಿದೆ. 95% ಚಿತ್ರೀಕರಣ ಮುಕ್ತಾಯ ಕಂಡಿದ್ದು,10 ದಿನಗಳ ಚಿತ್ರೀಕರಣ ಬಾಕಿ ಉಳಿದಿದೆ. ಈಗಾಗಲೇ ನವೆಂಬರ್‌ 15 ರಂದು ಸಿನಿಮಾ ರಿಲೀಸ್‌ ಮಾಡುವುದಾಗಿ ಅನೌನ್ಸ್‌ ಮಾಡಲಾಗಿದೆ. ಆದರೆ ಇದೀಗ ಬಂದಿರುವ ಮಾಹಿತಿ ಪ್ರಕಾರ ಚಿತ್ರದ ರಿಲೀಸ್‌ ಡೇಟ್ ಮುಂದೂಡಿಕೆ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ದೀಪಾವಳಿ ಹಬ್ಬಕ್ಕೆ ʼಸಿಂಗಂ ಅಗೇನ್‌ʼ ರಿಲೀಸ್‌ ಆಗುವ ಸಾಧ್ಯತೆಯಿದ್ದು, ಈ ಕಾರಣದಿಂದ ʼರೇಡ್-2‌ʼ ಮುಂಚಿತವಾಗಿ ಜುಲೈ  ತಿಂಗಳಿನಲ್ಲೇ ತೆರೆ ಕಾಣುವ ಸಾಧ್ಯತೆಯಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next