Advertisement

Bollywood: ʼಚಂದು ಚಾಂಪಿಯನ್‌ʼಗೆ ಪಾಸಿಟಿವ್‌ ರೆಸ್ಪಾನ್ಸ್:‌ ಮೊದಲ ದಿನ ಗಳಿಸಿದ್ದೆಷ್ಟು?

12:22 PM Jun 15, 2024 | Team Udayavani |

ಮುಂಬಯಿ: ಕಾರ್ತಿಕ್ ಆರ್ಯನ್ ಅವರ ಬಹು ನಿರೀಕ್ಷಿತ ʼಚಂದು ಚಾಂಪಿಯನ್‌ʼ ವರ್ಲ್ಡ್‌ ವೈಡ್‌ ರಿಲೀಸ್‌ ಆಗಿದೆ.

Advertisement

ಕಾರ್ತಿಕ್‌ ಆರ್ಯನ್‌ ಪಾತ್ರಕ್ಕಾಗಿ ಸಾಕಷ್ಟು ಶ್ರಮವಹಿಸಿದ್ದು,  ಸ್ಪೋರ್ಟ್ಸ್‌ ಬಯೋಪಿಕ್‌ ಇದೇ ಕಾರಣಕ್ಕಾಗಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿತ್ತು. ಭಾರತದ ಮೊದಲ ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ ಮುರಳಿಕಾಂತ್ ಪೇಟ್ಕರ್ ಜೀವನದ ಕಥೆಯನ್ನೊಳಗೊಂಡಿರುವ ʼಚಂದು ಚಾಂಪಿಯನ್‌ʼ ಗೆ ಕಬೀರ್‌ ಖಾನ್‌ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಚಿತ್ರದ ಬಗ್ಗೆ ಎಲ್ಲೆಡೆ ಪಾಸಿಟಿವ್‌ ರಿವ್ಯೂ ಕೇಳಿ ಬರುತ್ತಿದೆ. ವಿಮರ್ಶಕರು ಕಾರ್ತಿಕ್‌ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟ್ರೇಲರ್‌ ಮೂಲಕ ನಿರೀಕ್ಷೆಯನ್ನು ಹೆಚ್ಚಿಸಿದ್ದ ʼಚಂದು ಚಾಂಪಿಯನ್‌ʼ ಈ ವಾರ ಥಿಯೇಟರ್‌ ಗೆ ಲಗ್ಗೆಯಿಟ್ಟಿದೆ. ಆದರೆ ಬಾಕ್ಸ್‌ ಆಫೀಸ್‌ ನಲ್ಲಿ ದೊಡ್ಡಮಟ್ಟದ ಆರಂಭವನ್ನು ಪಡೆದುಕೊಳ್ಳುವ ನಿರೀಕ್ಷೆ ಮಾತ್ರ ಸುಳ್ಳಾಗಿದೆ.

‘ಚಂದು ಚಾಂಪಿಯನ್’ ಮೊದಲ ದಿನ 4.75 ಕೋಟಿ ರೂ.ಗಳಿಸಿರುವುದಾಗಿ ವರದಿಯಾಗಿದೆ. ಇದು ಕಾರ್ತಿಕ್‌ ವೃತ್ತಿ ಬದುಕಿನ ಅತ್ಯಂತ ಕಡಿಮೆ ಓಪನಿಂಗ್‌ ಪಡೆದ ಚಿತ್ರವಾಗಿದೆ. ಈ ಹಿಂದೆ  2015 ರಲ್ಲಿ ‘ಪ್ಯಾರ್ ಕಾ ಪಂಚ್ ನಾಮಾ 2’ ಅತ್ಯಂತ ಕಡಿಮೆ ಓಪನಿಂಗ್‌ ಪಡೆದುಕೊಂಡಿತ್ತು.

Advertisement

ಇದಲ್ಲದೆ ‘ಸತ್ಯಪ್ರೇಮ್ ಕಿ ಕಥಾ’ಮೊದಲ ದಿನ 8.25 ಕೋಟಿ ಗಳಿಸಿತ್ತು. ಕಾರ್ತಿಕ್ ಅವರ ‘ಭೂಲ್ ಭುಲೈಯಾ 2’ ಮೊದಲ ದಿನ 14.11 ಕೋಟಿ ರೂ.ಗಳಿಸಿತ್ತು. ಈ ಎಲ್ಲಾ ಚಿತ್ರಗಳನ್ನು ಹೋಲಿಸಿದರೆ ʼಚಂದು ಚಾಂಪಿಯನ್‌ʼ ಆರಂಭಿಕವಾಗಿ ಕಡಿಮೆ ಗಳಿಕೆ ಕಂಡಿದೆ.

ವಾರಾಂತ್ಯದಲ್ಲಿ ಚಿತ್ರ ಹೆಚ್ಚು ಗಳಿಕೆ ಕಾಣುವ ಸಾಧ್ಯತೆಯಿದೆ ಎನ್ನಲಾಗಿದೆ.

‘ಚಂದು ಚಾಂಪಿಯನ್’ ಗೆ ಸಾಜಿದ್ ನಾಡಿಯಾಡ್ವಾಲಾ ಮತ್ತು ಕಬೀರ್ ಖಾನ್ ಜಂಟಿಯಾಗಿ ಬಂಡವಾಳ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next