Advertisement

ತೊಗರಿ ಖರೀದಿ 10 ಕ್ವಿಂಟಲ್‌ ನಿಗದಿಗೊಳಿಸಿದ್ದಕ್ಕೆ ಖಂಡನೆ

11:15 AM Feb 16, 2018 | Team Udayavani |

ಅಫಜಲಪುರ: ಸರ್ಕಾರ ರೈತರಿಗೆ ಅನುಕೂಲ ಮಾಡುತ್ತೇವೆ ಎಂದು ತೊಗರಿಗೆ ಬೆಂಬಲ ಬೆಲೆ ನಿಗದಿಗೊಳಿಸಿ ಸರ್ಕಾರದ ಮಟ್ಟದಲ್ಲೇ ಖರೀದಿ ಆರಂಭಿಸಿ ದಿಢೀರ್‌ನೆ ಖರೀದಿ ನಿಲ್ಲಿಸಿತ್ತು. ಈರ ರೈತರು ಪ್ರತಿಭಟಿಸಿದ ನಂತರ ಎಚ್ಚೆತ್ತುಕೊಂಡು ಖರೀದಿ ಪುನಾರಂಭಿಸಿದೆ. ಆದರೆ 20 ಕ್ವಿಂಟಲ್‌ ನಿಗದಿಗೊಳಿಸಿದ್ದನ್ನು 10 ಕ್ವಿಂಟಲ್‌ ಗೆ ಇಳಿಸಿದ್ದು ಖಂಡನೀಯ ಎಂದು ಜೆಡಿಎಸ್‌ ತಾಲೂಕು ಅಧ್ಯಕ್ಷ ರಾಜಕುಮಾರ ಬಡದಾಳ ಹೇಳಿದರು.

Advertisement

ಪಟ್ಟಣದ ತಹಶೀಲ್‌ ಕಚೇರಿಯಲ್ಲಿ ತಹಶೀಲ್ದಾರ್‌ ಇಸ್ಮಾಯಿಲ್‌ ಮುಲ್ಕಿ ಅವರ ಮುಖಾಂತರ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ನೀಡಿದ ನಂತರ ಮಾತನಾಡಿದ ಅವರು, ಮೊದಲು ಆದೇಶ ಮಾಡಿದಂತೆ 20 ಕ್ವಿಂಟಲ್‌ ತೊಗರಿ ರೈತರಿಂದ ಖರೀದಿಸಬೇಕು. ಎಲ್ಲ ಖರೀದಿ ಕೇಂದ್ರಗಳಲ್ಲಿ ಭಾರಿ ಅವ್ಯವಹಾರ ನಡೆಯುತ್ತಿದೆ. ಇದನ್ನು ತಡೆಯಬೇಕು. ಎಲ್ಲ ರೈತರ ತೊಗರಿಯನ್ನು ಸರ್ಕಾರವೇ ಖರೀದಿ ಮಾಡಬೇಕು. ಖರೀದಿ ಕೇಂದ್ರಗಳ ಮುಂದಿಟ್ಟ ತೊಗರಿಗೆ ಗೊರಲಿ ಹತ್ತಿ ಹಾಳಾಗುತ್ತಿವೆ. ಹಾಳಾದ ತೊಗರಿಗೆ ಸೂಕ್ತ ಪರಿಹಾರ ಸರ್ಕಾರವೇ ನೀಡಬೇಕು. ಈ ಎಲ್ಲ ಬೇಡಿಕೆಗಳನ್ನು ಮೂರು ದಿನಗಳಲ್ಲಿ ಪರಿಹರಿಸಬೇಕು. ಇಲ್ಲದಿದ್ದರೆ ಜೆಡಿಎಸ್‌ ಪಕ್ಷದ ವತಿಯಿಂದ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಜೆಡಿಎಸ್‌ ರೈತ ಘಟಕದ ಅಧ್ಯಕ್ಷ ಹಣಮಂತರಾವ್‌ ಬಿರಾದಾರ, ಮುಖಂಡರಾದ ಸಂಜು ಕೋಳಿಗೇರಿ, ಅಸ್ಲಂ ನಗಾರ್ಚಿ, ಕಾಶಿನಾಥ ಗಾಯಕವಾಡ, ಆಸೀಪ್‌ ನದಾಫ್‌, ಅಜಯ ಹರಳೇಕರ, ಬಸವರಾಜ ಪೂಜಾರಿ, ಮಾಳಪ್ಪ ಪೂಜಾರಿ, ಸಿದ್ದು ವಿಭೂತಿಹಳ್ಳಿ, ಭೂತಾಳಿ ಪೂಜಾರಿ, ಪ್ರವೀಣ ಗಾಯಕವಾಡ, ಸಾಗರ ಪೂಜಾರಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next