Advertisement
ಅಲ್ಲದೆ, ಒಪ್ಪಿಗೆ ಪಡೆದ ದಿನದಿಂದ 90 ದಿನಗಳ ಅವಧಿಯಲ್ಲಿ ರಾಜ್ಯ ಏಜೆನ್ಸಿಗಳೂ ಒಳಗೊಂಡು, ಕೇಂದ್ರದ ನೋಡಲ್ ಏಜೆನ್ಸಿಗಳಾದ ಎಫ್ಸಿಐ, ನಾಫೆಡ್, ಎನ್‌ಸಿಸಿಎಫ್ ಮತ್ತು ಎಸ್‌ಎಫ್ಎಸಿ ಸಂಗ್ರಹಿಸಲಿವೆ. ಈ ಎಲ್ಲಾ ಏಜೆನ್ಸಿಗಳೂ ಸರಾಸರಿ ಗುಣಮಟ್ಟದಲ್ಲಿ ರಾಜ್ಯ ಏಜೆನ್ಸಿಗಳಿಂದ ಖರೀದಿಸಿ, 15 ದಿನಗಳಲ್ಲಿ ಗೋದಾಮಿನ ರಸೀದಿಯನ್ನಾಧರಿಸಿ ಹಣ ಪಾವತಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರೈತರಿಗೆ ಹಣ ಪಾವತಿಸುವ ಸಂದರ್ಭದಲ್ಲಿ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆಯೋ ಇಲ್ಲವೋ ಎನ್ನುವುದನ್ನು ಕಡ್ಡಾಯವಾಗಿ ನೋಡಲಾಗುವುದು. ಖರೀದಿ ಪ್ರಕ್ರಿಯೆ ಮುಗಿದ ಮೂರು ದಿನದೊಳಗಾಗಿ ರೈತರಿಗೆ ಹಣ ಪಾವತಿಸಲಾಗುವುದು ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮನವಿ ಮೇರೆಗೆ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. 2018-19ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗೆ ಇದು ಅನ್ವಯವಾಗಲಿದೆ ಎಂದು ಮುಖ್ಯಮಂತ್ರಿಗಳ ಕಚೇರಿಯ ಪ್ರಕಟಣೆ ತಿಳಿಸಿದೆ.