Advertisement
Related Articles
Advertisement
ಪ್ಲಾಸ್ಟಿಕ್ ನಿಂದ ಬದುಕು ಬರ್ಬಾದ್! : ಮಾರುಕಟ್ಟೆಗೆ ನಾನಾ ಪ್ಲಾಸ್ಟಿಕ್ ಉತ್ಪನ್ನಗಳು ಲಗ್ಗೆಇಟ್ಟಿದ್ದೇ ತಡ; ಈಚಲು, ಬಿದಿರಿನ ಪರಿಕರಗಳಿಗೆ ಇದ್ದ ಬೇಡಿಕೆ ಕುಸಿಯಿತು. ಪ್ಲಾಸ್ಟಿಕ್ ಉತ್ಪನ್ನಗಳು ನೋಡುವುದಕ್ಕೂ ಆಕರ್ಷಕವಾಗಿದ್ದವು ಮತ್ತು ಹೆಚ್ಚು ಕಾಲದವರೆಗೆ ಬಾಳಿಕೆಯೂ ಬರುತ್ತಿದ್ದವು. ಜನ ಸಹಜವಾಗಿಯೇ ಹೊಸ ಉತ್ಪನ್ನಗಳ ಕಡೆಗೆ ತಿರುಗಿ ಕೊಂಡರು. ಪರಿಣಾಮ, ಬುಟ್ಟಿ ಮಾರಾಟದಬ್ಯುಸಿನೆಸ್ ನೆಲ ಕಚ್ಚಿತು. ಈ ಜನ ಆಗಅನಿವಾರ್ಯವಾಗಿ ಅನ್ಯ ಉದ್ಯೋಗದತ್ತವಾಲಿದರು.
ಸೋಪಾಸೆಟ್‌ನಲ್ಲಿ ಸೆಟಲ್..! : ಅದುವರೆಗೂ ಬುಟ್ಟಿ ಮಾರುತ್ತಿದ್ದವರು, ಹಂತಹಂತವಾಗಿ ಸೋಪಾಸೆಟ್ ವ್ಯಾಪಾರದಲ್ಲಿ ಸೆಟಲ್‌ಆದರು.ಬೆಂಗಳೂರು ಮತ್ತು ಹೈದ್ರಾಬಾದ್ನಿಂದ ಸೋಫಾ ಸೆಟ್‌ಗಳನ್ನುಕೊಂಡು ತಂದು, ಕರ್ನಾಟಕದ ವಿವಿದೆಡೆ ಕಳೆದೊಂದು ದಶಕದಿಂದ ಮಾರುತ್ತಿದ್ದಾರೆ.ಫುಟ್‌ಬಾತ್ ಇವರ ವ್ಯಾಪಾರ ಕೇಂದ್ರ. ಗಂಡಸರು ವ್ಯಾಪಾರದ ಕೆಲಸಕ್ಕೆ ನಿಂತರೆ, ಮನೆ ಕೆಲಸದ ಜವಾಬ್ದಾರಿಯನ್ನು ಹೆಣ್ಣು ಮಕ್ಕಳು ವಹಿಸಿಕೊಳ್ಳುತ್ತಿದ್ದರು. ಪ್ರತಿವರ್ಷ ಚಳಿಗಾಲದ ಹೊತ್ತಿಗೆ ವ್ಯಾಪಾರದ ಉದ್ದೇಶದಿಂದ ಬಂದು, ಕನಿಷ್ಠ 6-7 ಊರು ತಿರುಗಿ, ಮಳೆಗಾಲದ ಹೊತ್ತಿಗೆ ಊರು ಸೇರಿಕೊಳ್ಳುವುದು ಈ ಜನರಿಗೆ ಅಭ್ಯಾಸವಾಗಿತ್ತು. ಕೋವಿಡ್ ಕಾರಣಕ್ಕೆ ಸೋಫಾ ಮಾರಾಟದ ಬ್ಯುಸಿನೆಸ್ ನೆಲ ಕಚ್ಚಿದಾಗ, ಈ ಹೆಣ್ಣುಮಕ್ಕಳು ಮತ್ತೆ ಬುಟ್ಟಿ ಹೆಣೆಯುವ ಕಾಯಕಕ್ಕೆ ಮುಂದಾದರು. ಹಳ್ಳಿಹಳ್ಳಿ ತಿರುಗಿ ಅವನ್ನು ಮಾರುವ ಕೆಲಸ ಗಂಡಸರ ಪಾಲಿಗೆ ಬಂತು. ಬಿದಿರಿನ ಕಡ್ಡಿ ಮತ್ತು ಬಣ್ಣ ಬಣ್ಣದ ಸಿಂಧಿವಯರ್ ಸೇರಿಸಿ ಬುಟ್ಟಿ ಹೆಣೆಯುತ್ತಾರೆ.ಬುಟ್ಟಿ ಚಿಕದಾದ್ದರೂ ಚೊಕ್ಕ ಮತ್ತು ಆಕರ್ಷಕ. ಈ ಬುಟ್ಟಿ ಸಾಕಷ್ಟು ದಿನ ಬಾಳಿಕೆ ಬರುವುದರಿಂದ ಗಿರಾಕಿಗಳನ್ನು ಸೆಳೆಯುತ್ತೆ.ಚೆನ್ನಾಗಿ ಕಾಪಾಡಿಕೊಂಡ್ರೆಬುಟ್ಟಿಐದಾರು ವರ್ಷ ಬಾಳಿಕೆ ಬರುತ್ತೆ.. ಎನ್ನುತ್ತಾರೆ ಬುಟ್ಟಿ ಹೆಣೆಯುವ ವಾಣಿಶ್ರೀ. “ಬಿದಿರು ಬುಟ್ಟಿಗಳಿಗೆ ನೀರು ಬಿದ್ರೆ ಹಾಳಾಗುತ್ತಿದ್ದವು. ಹೀಗಾಗಿ ಜನ ಕೊಳ್ಳುವುದು ಕಮ್ಮಿ ಆಗಿತ್ತು. ಇದರೊಟ್ಟಿಗೆ ಪ್ಲಾಸ್ಟಿಕ್ ಬುಟ್ಟಿಗಳು ಬಂದು ಹೊಟ್ಟೆ ಮೇಲೆ ಹೊಡೆದ್ರು. ಈಗ ಅವುಕ್ಕೇ ಸ್ಪರ್ಧೆ ಕೊಡ್ತಿದೀವಿ…’ ಎಂಬುದು ಅವರ ಮಾತು.
ಹೋಲ್ ಸೇಲ್‌ನಲ್ಲಿಬುಟ್ಟಿ ಬಿಕರಿ… : ಇಲ್ಲಿ ಒಂದು ಸ್ವಾರಸ್ಯವಿದೆ. ಬುಟ್ಟಿಗಳನ್ನು ಹೆಣೆಯುವವರು ಆಂಧ್ರದ ಕಡೆಯಿಂದ ಬಂದಿರುವ ಜನ. ಅವನ್ನು ಹೋಲ್ ಸೇಲ್ ದರಕ್ಕೆ ಖರೀದಿಸಿ ಮಾರಾಟ ಮಾಡುವವರುಕರ್ನಾಟಕದ ಜನ. ಅಂದರೆ, ಈ ಬುಟ್ಟಿಗಳ ಉತ್ಪಾದನೆ ಮತ್ತು ಮಾರಾಟದಿಂದ ಕರ್ನಾಟಕ ಮತ್ತು ಆಂಧ್ರದನೂರಾರು ಕುಟುಂಬಗಳು ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯವಾಗಿದೆ. ಒಂದು ಬುಟ್ಟಿ ಹೆಣೆಯಲು ಕೂತವರಿಗೆ 25-30 ರೂ. ಉತ್ಪಾದನೆಯ ಖರ್ಚು ಆಗುತ್ತಂತೆ. ಗ್ರಾಹಕರಿಗೆ ಒಂದಕ್ಕೆ 50 ರೂ.,ಗೆ ಮಾರುತ್ತಾರೆ. ಅದೇ ವ್ಯಾಪಾರಸ್ಥರು50-100 ಬುಟ್ಟಿಗಳನ್ನು ಒಮ್ಮೆಲೇ ಕೊಂಡರೆ ಆಗ ಒಂದು ಬುಟ್ಟಿಗೆ40 ರೂಪಾಯಿಗಳಂತೆ ನಾವು ಹೋಲ್‌ಸೇಲ್‌ನಲ್ಲಿ ಕೊಡ್ತೇವೆ. ಅವರು ಒಂದು ಬುಟ್ಟಿಗೆ 50-70 ರೂ. ತನಕ ಮಾರ್ತಾರೆ. “ಒಂದೇ ಬಾರಿ ಹೆಚ್ಚು ಬುಟ್ಟಿಗಳು ಮಾರಾಟ ಆದರೆ, ನಮ್ಮದೂ ಜೀವನ ನಡಿತೈತೆ. ಅವರಿಗೂ ನಾಲ್ಕುಕಾಸು ಸಿಗೆôತೆ..’ ಅಂತಾರೆ ಹರಿಕೃಷ್ಣ. ಇವರು ಒಂದು ಸೀಸನ್ ಗೆ ಗಂಡ-ಹೆಂಡತಿ ಸೇರಿ ಸುಮಾರು4 ರಿಂದ5 ಸಾವಿರ ಬುಟ್ಟಿ ಮಾರಿ, 8 ರಿಂದ 10 ಸಾವಿರ ರೂಪಾಯಿ ನಿವ್ವಳ ಲಾಭ ಗಳಿಸುತ್ತಾರೆ! ಒಟ್ಟಿನಲ್ಲಿ ಒಂದೇಉದ್ಯೋಗ ನೆಚ್ಚಿಕೊಂಡು ಸರಿಯಾದ ಆದಾಯವಿಲ್ಲದೆಪರದಾಡುವವರಿಗೆ, ಬುಟ್ಟಿಗಳನ್ನು ಹೆಣೆಯುತ್ತಲೇ ಬದುಕಲು ಕಲಿತ ಈ ಜನ ಮಾದರಿಯಾಗಿದ್ದಾರೆ.
ಅದನ್ನೂ ಮರೆತಿಲ್ಲ… : ಹಾಗಂತ ನಾವು ಸೋಫಾ ಮಾರಾಟದ ಕೆಲಸವನ್ನು ಸಂಪೂರ್ಣ ತ್ಯಜಿಸಿಲ್ಲ. ಆ ಬ್ಯುಸಿನೆಸ್ ಗೆ ಡಿಮ್ಯಾಂಡ್ ಶುರುವಾಗುವ ತನಕ ಬುಟ್ಟಿ ಹೆಣೆಯುತ್ತಲೇ ಬದುಕುತ್ತೇವೆ. ಮನೆಮನೆಗೆ ಹೋಗಿ ಬುಟ್ಟಿ ಮಾರಾಟ ಮಾಡುತ್ತೇವೆ. ವಾರದ ಸಂತೆಯಲ್ಲಿಯೂ ಬುಟ್ಟಿಗಳೊಂದಿಗೆ ಕೂರುತ್ತೇವೆ. ಒಂದು ವೇಳೆ ಬುಟ್ಟಿ ಹೆಣೆಯುವುದನ್ನೇನಾದರೂ ನಾವು ತ್ಯಜಿಸಿದ್ದರೆ, ಈ ಕೋವಿಡ್ ಕಾಲದಲ್ಲಿ ಉಪವಾಸ ಬೀಳಬೇಕಾಗುತ್ತಿತ್ತು. ಆದರೆ ಈ ಬುಟ್ಟಿ ಮಾರಾಟದ ಬ್ಯುಸಿನೆಸ್‌ನಿಂದ ನಮಗೆ ಅನ್ನ ಮತ್ತು ಹಣಎರಡೂ ಸಿಕ್ಕಿದೆ ಎನ್ನುತ್ತಾರೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯಲ್ಲಿ ಬುಟ್ಟಿ ಮಾರಾಟ ಮಾಡುತ್ತಿರುವ ಯಂಕಯ್ಯ.
ಚಿತ್ರ-ಲೇಖನ :
ಸ್ವರೂಪಾನಂದ ಎಂ. ಕೊಟ್ಟೂರು