Advertisement

ಹೊಟ್ಟೆ ಸಮಸ್ಯೆಗೆ ಮಜ್ಜಿಗೆಯೇ ಮದ್ದು!

03:38 PM May 18, 2021 | Team Udayavani |

ದೈನಂದಿನ ಜೀವನದಲ್ಲಿ ಸಣ್ಣಪ್ರಮಾಣದ ಆರೋಗ್ಯದ ತೊಂದರೆಗಳುಕಾಣಿಸಿಕೊಳ್ಳುವುದು ಸಹಜ. ಹೊರಗಿನಿಂದ ಊಟ- ತಿಂಡಿಗಳನ್ನು ತರಿಸಿಕೊಂಡು ತಿಂದಾಗ ಕೆಲವೊಮ್ಮೆ ಭೇದಿ ಆಗುವ ಸಾಧ್ಯತೆಗಳಿವೆ. ತೀವ್ರವಾದ ತೊಂದರೆಯಾದಾಗ ಆಸ್ಪತ್ರೆಗಳಿಗೆ ಹೋಗಬೇಕಾಗಿ ಬರಬಹುದು.

Advertisement

ಲಘುವಾಗಿ ಹೊಟ್ಟೆ ಕೆಟ್ಟಾಗ, ಅಥವಾ ಆಸ್ಪತ್ರೆ ತಲುಪುವವರೆಗೆ ರೋಗಿಗಳ ಉಪಚಾರವನ್ನು ಯಾವ ರೀತಿ ಮಾಡಬಹುದೆಂದು ತಿಳಿದುಕೊಂಡಿರುವುದು ಅವಶ್ಯ. ಭೇದಿ ಆಗುವಾಗ ದೇಹದಿಂದ ನೀರಿನ ಹಾಗೂಲವಣಗಳ ಅಂಶ ನಷ್ಟವಾಗುತ್ತದೆ. ಇದರಿಂದ ಉಂಟಾಗುವ ನಿರ್ಜಲೀಕರಣವನ್ನು ತಡೆಗಟ್ಟಲು ಇರುವ ಪ್ರಥಮ ಹಾಗೂ ಪ್ರಮುಖ ಮದ್ದು “ಓರಲ್‌ ರಿಹೈಡ್ರೇಶನ್‌ ಸೊಲ್ಯೂಷನ್‌”.

ಔಷಧಿ ಅಂಗಡಿಗಳಲ್ಲಿ ಹಲವು ತರಹದ ನೀರಿನಲ್ಲಿ ಕರಗಿಸಿ ಉಪಯೋಗಿಸುವ ಪುಡಿಗಳು ಹಾಗೂ ಟೆಟ್ರಾಪ್ಯಾಕ್‌ ಗಳಲ್ಲಿರುವ ದ್ರಾವಣಗಳು ಲಭ್ಯವಿದ್ದರೂ, ಮನೆಯಲ್ಲೇತಯಾರಿಸಬಹುದಾದ ದ್ರಾವಣ ಎಲ್ಲಕ್ಕಿಂತ ಶೀಘ್ರವಾಗಿ ಲಭ್ಯ. ಒಂದು ಲೋಟ ಕುಡಿಯುವ ನೀರಿಗೆ ಒಂದು ಚಮಚೆ ಸಕ್ಕರೆ, ಒಂದು ಚಿಟಿಕೆ ಉಪ್ಪು ಹಾಕಿ ಮಿಕ್ಸ್ ಮಾಡಿದರೆ ಮನೆಮದ್ದು ರೆಡಿ. ಇದನ್ನು ಆಗಾಗಕುಡಿಯುತ್ತಿರಬೇಕು. ಕುಡಿಯುವ ಪ್ರಮಾಣವು ರೋಗಿಯಾಗಿರುವ ವ್ಯಕ್ತಿಗೆ ಆಗುವ ದಾಹ, ಹೊರಹೋಗುವ ಮೂತ್ರದ ಪ್ರಮಾಣಹಾಗೂ ಎಷ್ಟು ಬಾರಿ ಭೇದಿ ಆಗಿದೆ ಎಂಬುದನ್ನು ಅವಲಂಬಿಸಿರುತ್ತದೆ.

ದಾಹವೆನಿಸಿದಾಗಲೆಲ್ಲಾ ಅದನ್ನು ನಿರ್ಲಕ್ಷಿಸದೆ ಸಾಕಷ್ಟು ಪ್ರಮಾಣದಲ್ಲಿ ಈನೀರನ್ನುಕುಡಿಯುತ್ತಿದ್ದರೆ, ದೇಹಕ್ಕಾಗುವಸುಸ್ತು ಮಾಯವಾಗುತ್ತದೆ. ನೆನಪು ಮಾಡಿಕೊಳ್ಳಿ: ನಾವುಚಿಕ್ಕವರಿದ್ದಾಗ ಹೊಟ್ಟೆಯ ತಾಪತ್ರಯಗಳಿಗೆಅಜ್ಜಿ, ಅಮ್ಮ ಹೇಳುತ್ತಿದ್ದ ಔಷಧಿಗಳು ನೀರು ಮಜ್ಜಿಗೆ ಹಾಗೂ ಮೊಸರನ್ನ. ಸ್ವಲ್ಪ ಉಪ್ಪು ಬೆರೆಸಿದನೀರು ಮಜ್ಜಿಗೆ ಮತ್ತು ಮೊಸರನ್ನ ಸೇವನೆಯಿಂದ ಹೊಟ್ಟೆಯ ಸೋಂಕು ತಡೆಯಲುಸಾಧ್ಯವಿದೆ. ಮಜ್ಜಿಗೆಯು ನೀರು ಮತ್ತು ಲವಣಗಳನ್ನು ನೀಡುವುದಲ್ಲದೆ, ಅದರಲ್ಲಿರುವ ಬ್ಯಾಕ್ಟೀರಿಯಾಗಳು (ಪ್ರೊಬಯಾಟಿಕ್‌ ಗಳು) ಸೋಂಕನ್ನು ನಿಯಂತ್ರಿಸುವಲ್ಲಿ ಸಹಕಾರಿ. ಚೆನ್ನಾಗಿ ಬೆಂದಿರುವ ಅನ್ನದ ಜೊತೆಗೆಕೆನೆ ಇಲ್ಲದ ಮೊಸರೂ ಸೋಂಕು ನಿಯಂತ್ರಿಸಲು ಉಪಯುಕ್ತ.

 

Advertisement

-ಡಾ.ಉಮಾಮಹೇಶ್ವರಿ. ಎನ್‌.

Advertisement

Udayavani is now on Telegram. Click here to join our channel and stay updated with the latest news.

Next