Advertisement

ಸಮ್ಮಿಲನ್ ಶೆಟ್ಟಿಯ ಚಿಟ್ಟೆಗಳ ಬಣ್ಣದ ಲೋಕ

03:38 PM Dec 27, 2022 | Team Udayavani |

ಮೂಡುಬಿದಿರೆ: ಇಲ್ಲಿಗೆ ಸಮೀಪದ ಬೆಳುವಾಯಿಯ ನಿವಾಸಿಯಾಗಿರುವ ಸಮ್ಮಿಲನ್ ಶೆಟ್ಟಿ ಅವರ ಬಣ್ಣಬಣ್ಣದ ಚಿಟ್ಟೆಗಳ ಲೋಕ ಕರಾವಳಿ ಪ್ರದೇಶದಲ್ಲಿ ಛಾಪನ್ನು ಮೂಡಿಸುತ್ತಿದೆ.

Advertisement

ಸಮ್ಮಿಲನ್ ಶೆಟ್ಟಿ ಅವರು ಆಳ್ವಾಸಿನ ಜಾಬೂರಿಯಲ್ಲೂ ಚಿಟ್ಟೆಗಳ ಬಣ್ಣದ ಲೋಕವನ್ನು ಪ್ರದರ್ಶಿಸಿದ್ದಾರೆ. ಇವರು ಚಿಟ್ಟೆಗಳ ಛಾಯಾಗ್ರಹಣಗಳನ್ನು ಪ್ರದರ್ಶಿಸುದಲ್ಲದೆ ಚಿಟ್ಟೆಗಳ ಬಗ್ಗೆ ಅದ್ಬುತ ಮಾಹಿತಿಗಳನ್ನು ಜನರಿಗೆ ನೀಡುತ್ತಾರೆ.

ಇವರು ಛಾಯಾಗ್ರಹಿಸಿರುವ ಚಿಟ್ಟೆಯಲ್ಲಿ ಭಾರತದ ಸುಂದರವಾದ ಬಣ್ಣದ ಚಿಟ್ಟೆ ಎಂದು ದಾಖಲೆಯಾಗಿರುವ ಹಸಿರು ಬಣ್ಣದ ಪ್ಯಾರಿಸ್ ಚಿಟ್ಟೆಯನ್ನು ನಾವು ನೋಡಬಹುದು.

ನಮ್ಮ ದಕ್ಷಿಣ ಕನ್ನಡದಲ್ಲಿ ರೆಡ್ ಪಿಯರೊಟ್ ಚಿಟ್ಟೆಗಳು ಸಾಮಾನ್ಯವಾಗಿದೆ. ಇದರ ಚಿತ್ರವನ್ನು ಸಹ ಇವರು ಪ್ರದರ್ಶಿಸುತ್ತಾರೆ. ಬ್ಲೂ ಮಾರ್ಮರ್ ಅನ್ನುವ ಬಣ್ಣದ ಚಿಟ್ಟೆ ಮಹಾರಾಷ್ಟ್ರ ರಾಜ್ಯದ ಚಿಟ್ಟೆಯಾಗಿದ್ದು, ಮಲಬಾರ್ ಪಿಕೊಕ್ ಕೇರಳ ರಾಜ್ಯದ ಬಣ್ಣದ ಚಿಟ್ಟೆಯಾಗಿದ್ದು ಸಮ್ಮಿಲನ್ ಶೆಟ್ಟಿ ಅವರು ಜನರ ಕಣ್ಣನ್ನು ಸೆಳೆಯುವ ರೀತಿಯಲ್ಲಿ ಛಾಯಾಗ್ರಹಣದಲ್ಲಿ ಈ ಚಿತ್ರವನ್ನು ಸೆರೆಹಿಡಿದಿದ್ದಾರೆ. ಇನ್ನೊಂದು ರೀತಿಯ ಚಿಟ್ಟೆ ಎಂದರೆ ಅಟೋಮ್ ಲೀಫ್ ಅಟೋ ಕಾಲದಲ್ಲಿ ಬರುವ ಎಲೆ ಹೇಗಿರುತ್ತೋ ಅದೇ ತರಹದ ಎಲೆಯ ರೀತಿಯ ಚಿಟ್ಟೆಯಾಗಿದೆ. ಅಟೋ ಲೀಫ್ ಮತ್ತು ಬ್ಲೂ ಒಕ್ಲೀಫ್ ಇವು ಎರಡು ಒಂದೇ ಆಗಿದೆ.

ಇದನ್ನೂ ಓದಿ:ʼಪಠಾಣ್‌ʼಗೆ ಟಕ್ಕರ್‌ ಕೊಡುತ್ತಾʼ ಗಾಂಧಿ-ಗೋಡ್ಸೆ ಏಕ್ ಯುದ್ಧ್ʼ: ಮೋಷನ್‌ ರಿಲೀಸ್

Advertisement

ತುಂಬಾನೇ ಶಕ್ತಿಯುತವಾದ ಚಿಟ್ಟೆ ಎಂದರೆ ಕೋಮನ್ ನವಾಬ್ ಈ ಕೋಮನ್ ನವಾಬ್ ಚಿಟ್ಟೆ ಹೇಗೆ ಎಂದರೆ ಯಾವುದಾದರೂ ಇರುವೆ ಅದನ್ನು ಮುಟ್ಟಿದರೆ ಅಥವಾ ಬೇಟೆಯಾಡಲು ಬಂದರೆ ಅದು ಪ್ರಮಿಸೀಸ್ ನ ಹಿಡಿದಿಟ್ಟುಕೊಳ್ಳುತ್ತೆ ಚಿಟ್ಟೆ ಆವಾಗ ಇರುವೆಯ ಎತ್ತಿ ಕೆಳಗೆ ಬಡಿಯುತ್ತದೆ. ಹೀಗೆ ಆಗುವಾಗ ಇರುವೆ ಚಿಟ್ಟೆಯನ್ನು ಬಿಟ್ಟು ಹೋಗುವ ಸಂದರ್ಭ ಇರುತ್ತದೆ ಎಂದು ಸಮ್ಮಿಲನ್ ಶೆಟ್ಟಿ ಆವರು ಹೇಳುತ್ತಾರೆ.

ಇನ್ನೊಂದು ಜನರ ಕಣ್ಣನ್ನು ಬೆರಗು ಗೊಳಿಸುವ ಚಿಟ್ಟೆ ಯಾವುದೆಂದರೆ ಪೇಯಿಂಟೆಡ್ ಲೇಡಿ. ಇದು ಕಾಫಿ, ಕೇಸರಿ, ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಒಂದು ಬ್ರಷ್ ಹಿಡಿದುಕೊಂಡು ಚಿತ್ರ ಬಿಡಿಸಿದ ರೀತಿ ಕಾಣುವ ಇದಕ್ಕೆ ಪೆಯಿಂಟೆಡ್ ಲೇಡಿ ಅಂತ ಹೆಸರು ಬಂದಿದೆ ಎನ್ನಬಹುದು. ಇನ್ನೊಂದು ಅದ್ಭುತ ಚಿಟ್ಟೆ ಟೋನಿ ರಾಜ. ಈ ಟೋನಿ ರಾಜ ತನ್ನ ರೆಕ್ಕೆಯನ್ನು ಬಿಡಿಸುವಾಗ ರಾಜನ ಕಿರೀಟದಂತೆ ಕಾಣಿಸುತ್ತದೆ. ಹಾಗಾಗಿ ಈ ಹೆಸರಿನಿಂದ ಪ್ರಸಿದ್ದವಾಗಿದೆ. ದಕ್ಷಿಣ ಕನ್ನಡದಲ್ಲಿ ಐದು ರೀತಿಯ ವಿಭಿನ್ನ ಟೈಗರ್ ಕಾಣಸಿಗುತ್ತದೆ. ಬ್ಲೂ ಟೈಗರ್,ಡಾರ್ಕ್ ಟೈಗರ್, ಪ್ಲೈನ್, ಕ್ಲಾಸಿ ಅಥವಾ ಸ್ಕ್ರಿಪ್ಟ್ ಇದು ಐದು ತರಹದ ಟೈಗರ್ ಗಳನ್ನು ನೋಡಲು ಸಿಗುವ ಚಿಟ್ಟೆಯಾಗಿದೆ. ಇದರ ಚಿತ್ರವನ್ನು ಬಹಳ ಸುಂದರವಾಗಿ ಛಾಯಾಗ್ರಹಿಸಿದ್ದಾರೆ.

ಈ ತರಹದ ಇನ್ನಷ್ಟು ಅನೇಕ ರೀತಿಯ ಬಣ್ಣ- ಬಣ್ಣದ ಚಿಟ್ಟೆಗಳ ಲೋಕವನ್ನು ತೋರಿಸಿ ಜನರ ಮನದಲ್ಲಿ ಸಮ್ಮಿಲನ್ ಶೆಟ್ಟಿ ಅವರು ಹೊಸ ರೀತಿಯ ಚಿಟ್ಟೆಯ ಬೆರಗನ್ನು ಮೂಡಿಸುತ್ತಿದ್ದಾರೆ ಎನ್ನಬಹುದು.

ಸುಮನ ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next