Advertisement

“ಬಟರ್‌ಫ್ಲೈ’ಹೊಸ ಹಾಡು

05:48 AM Jan 23, 2019 | |

ರಮೇಶ್‌ ಅರವಿಂದ್‌ ನಿರ್ದೇಶನದ “ಬಟರ್‌ಫ್ಲೈ’ ಚಿತ್ರದ “ನಾಳೆ ನಮ್ಮ ಮನೆಲೊಂದು…’ ಎಂಬ ಸಾಲುಗಳಿಂದ ಶುರುವಾಗುವ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಹಾಡು ಇದೀಗ ನಿದಾನವಾಗಿ ಕೇಳುಗರನ್ನು ಸೆಳೆಯುತ್ತಿದ್ದು, ಚಿತ್ರದ ಹಾಡಿಗೆ ಸೋಷಿಯಲ್‌ ಮೀಡಿಯಾಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Advertisement

ಇನ್ನು ಈ ಹಾಡಿನಲ್ಲಿ ನಟಿ ಪಾರುಲ್‌ ಯಾದವ್‌ ಗೋಕರ್ಣದ ಹಿನ್ನಲೆಯ ವಧುವಾಗಿ ಮಿಂಚಿದ್ದಾರೆ. ಇನ್ನು ಈ ಹಾಡಿಗೆ ಜೆಸ್ಸಿ ಗಿಫ್ಟ್ ಹಾಗೂ ಅನನ್ಯ ಭಟ್‌ ಧ್ವನಿಯಾಗಿದ್ದು, ಯೋಗರಾಜ್‌ ಭಟ್‌ ಹಾಡಿಗೆ ಸಾಲುಗಳನ್ನು ಬರೆದಿದ್ದಾರೆ. ಈ ಹಾಡಿನೊಂದಿಗೆ ಮುಂಬೈ ಮೂಲದ ಹೆಸರಾಂತ ನೃತ್ಯ ನಿರ್ದೇಶಕ ಬಸ್ಕೋ-ಸೀಸರ್‌ ನೃತ್ಯ ಸಂಯೋಜಿಸಿದ್ದಾರೆ.

ಈ ಹಾಡಿಗೆ ದೇಸೀ ಉಪಕರಣಗಳನ್ನು ಬಳಸಿ ಅಮಿತ್‌ ತ್ರಿವೇದಿ ರಾಗ ಸಂಯೋಜನೆ ಮಾಡಿದ್ದಾರೆ. ಮನು ಕುಮಾರನ್‌ ನಿರ್ಮಾಣದ ಈ ಚಿತ್ರಕ್ಕೆ ಪಾರುಲ್‌ ಯಾದವ್‌ ಸಹ ನಿರ್ಮಾಪಕರಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next