Advertisement

ನಾಡಿನ ಅಸ್ಮಿತೆಯಾಗಿ ಬೆಳೆದಿದೆ ಕಸಾಪ; ಡಾ| ನಾಗರಾಜ ನಾಡಗೌಡ

05:51 PM May 15, 2023 | Team Udayavani |

ಇಳಕಲ್ಲ: ಕನ್ನಡ ಸಾಹಿತ್ಯ ಪರಿಷತ್‌ ಕನ್ನಡಿಗರ ಹಾಗೂ ಕನ್ನಡ ನಾಡಿನ ಅಸ್ಮಿತೆಯಾಗಿ ಬೆಳೆದಿದೆ. ಆದರೆ, ನಾಡು-ನುಡಿಗೆ ದಕ್ಕೆಯಾದಾಗ ಪ್ರತಿರೋಧದ ಶಕ್ತಿಯಾಗಬೇಕು ಎಂಬ ಕನ್ನಡಿಗರ ನಿರೀಕ್ಷೆ ಹುಸಿಗೊಳಿಸಿದೆ ಎಂದು ಮುಧೋಳದ ಆರ್‌ಎಂಜಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಡಾ| ನಾಗರಾಜ ನಾಡಗೌಡ ಹೇಳಿದರು.

Advertisement

ನಗರದ ಸ್ನೇಹರಂಗದ ಸಾಂಸ್ಕೃತಿಕ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಇಳಕಲ್ಲ ತಾಲೂಕು ಘಟಕವು ಆಯೋಜಿಸಿದ್ದ
ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಕನ್ನಡ ಅಸ್ಮಿತೆ- ಕನ್ನಡ ಸಾಹಿತ್‌ ಪರಿಷತ್‌ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ
ಅವರು ಮಾತನಾಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ವಿಭಿನ್ನ ಪ್ರಾಂತಗಳಲ್ಲಿ ಅನ್ಯ ಭಾಷಿಕ ಆಡಳಿತದಲ್ಲಿ ಹಂಚಿ ಹೋಗಿದ್ದ ಕನ್ನಡಿಗರಲ್ಲಿ ಏಕತೆಯ ಭಾವ ಮೂಡಿಸಿದ್ದು ಕನ್ನಡ ಸಾಹಿತ್ಯ ಪರಿಷತ್ತು. ಸ್ವಾತಂತ್ರೋತ್ತರ ಘಟದಲ್ಲಿ ಸಾಹಿತ್ಯ ಸಂಶೋಧನೆ, ನಿಘಂಟು ಹೀಗೆ ಕನ್ನಡ ಕಟ್ಟುವ ಅನೇಕ ಸೃಜನಶೀಲ ಹಾಗೂ ಸಂಶೋಧನಾತ್ಮಕ ಚಟುವಟಿಕೆ ಕೈಗೊಂಡು ಯಶಸ್ವಿಯಾಗಿದೆ. ವಾರ್ಷಿಕ ಸಮ್ಮೇಳನಗಳ
ಮೂಲಕ ದೊಡ್ಡ ಸಂಖ್ಯೆಯ ಕನ್ನಡಿಗರನ್ನು ಒಳಗೊಳ್ಳುವ ಕೆಲಸ ಮಾಡಿದ್ದು, ಕಸಾಪ ಕನ್ನಡಿಗರ ಪ್ರಾತಿನಿ ಧಿಕ ಸಂಸ್ಥೆಯಾಗಿ ಬೆಳದಿದೆ.

ಆದರೆ, ಕನ್ನಡ ಅಸ್ಮಿತೆಗೆ ಕನ್ನಡಿಗರ ಅಸ್ತಿತ್ವಕ್ಕೆ ದಕ್ಕೆಯಾದಾಗ ನಾಯಕತ್ವ ವಹಿಸಿಕೊಳ್ಳದೇ ಹಿಂಜರಿಯುತ್ತಿದೆ. ಹಿಂದೆ ಸೇರಿದಂತೆ
ಅನ್ಯ ಭಾಷೆಗಳ ಹೇರಿಕೆಗೆ ನಿರೀಕ್ಷಿತ ಪ್ರತಿರೋಧ ಒಡ್ಡುತ್ತಿಲ್ಲ. ಕನ್ನಡ ಕಟ್ಟುವ ಬೆಳೆಸುವ ವಿಷಯವಾಗಿ ಆಂದೋಲನ
ನಡೆಯಬೇಕಿದ್ದು, ಈ ಆಂದೋಲನವನ್ನು ಕಸಾಪ ಮುನ್ನಡೆಸಬೇಕು ಎಂಬುದು ಜನರ ಅಭಿಲಾಸೆಯಾಗಿದೆ ಎಂದರು.

ಕಸಾಪ ತಾಲೂಕು ಘಟಕದ ಅಧ್ಯಕ್ಷ ಮಹಾದೇವ ಕಂಬಾಗಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕ ಕೆ.ಎ. ಬನ್ನಟ್ಟಿ ಹಾಗೂ
ಸ್ನೇಹರಂಗದ ಅಧ್ಯಕ್ಷ ಬಸವರಾಜ ಮಠದ ಉಪಸ್ಥಿತರಿದ್ದರು.

Advertisement

ಕಸಾಪ ನಿಕಟಪೂರ್ವ ಅಧ್ಯಕ್ಷ ಸಂಗಣ್ಣ ಗದ್ದಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾಂತೇಶ ಗಜೇಂದ್ರಗಡ ನಿರೂಪಿಸಿದರು. ಉಮೇಶ ಶಿರೂರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next