Advertisement
1928ರ ಆ.15ರಂದು ಜನಿಸಿದ ಇವರು 24 ಸಂಸ್ಥೆ ಗಳನ್ನು ಸ್ಥಾಪಿಸಿ 10 ಸಾವಿರಕ್ಕೂ ಹೆಚ್ಚು ಜನರಿಗೆ ಕಾಯಂ ಉದ್ಯೋಗ, ಅಷ್ಟೇ ಜನರಿಗೆ ಪರ್ಯಾಯ ಉದ್ಯೋಗ ನೀಡಿದ್ದಾರೆ. ಕೃಷಿ, ಜಲ, ಸೌರ, ಗಾಳಿ ವಿದ್ಯುತ್ ಉತ್ಪಾದನಾ ಘಟಕಗಳು, ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ಮುಡೇìಶ್ವರದ ಸರ್ವತೋಮುಖ ಅಭಿ ವೃದ್ಧಿ, ಅಣೆಕಟ್ಟು, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ಕೊಂಕಣ ರೈಲ್ವೆ ಕಾಮಗಾರಿ, ನೀರಾವರಿ ಯೋಜನೆ ಸಹಿತ ಹಲವು ಅಭಿವೃದ್ಧಿ ಯೋಜನೆಗಳನ್ನು ತಮ್ಮ ಆರ್.ಎನ್. ಶೆಟ್ಟಿ ಸಮೂಹ ಸಂಸ್ಥೆಗಳಿಂದ ಮಾಡಿಸಿ ದ್ದಾರೆ. ಶಿರಸಿಯಿಂದ ಗುತ್ತಿಗೆದಾರ ವೃತ್ತಿ ಆರಂಭಿಸಿದ ಆರ್‌ಎನ್‌ಎಸ್ ನೀಲೇಕಣಿಯಲ್ಲಿ ಮನೆ ಮಾಡಿದ್ದರು. ಆಧಾರ್ ಕಾರ್ಡ್‌ನ ಜನ್ಮದಾತ ನಂದನ ನೀಲೇಕಣಿ ಅವರ ತಂದೆ ಮತ್ತು ಆರ್‌ಎನ್‌ಎಸ್ ಒಟ್ಟಿಗೆ ಶಿರಸಿಯ ಲ್ಲಿದ್ದರು. ಆಗ ಆರ್‌ಎನ್‌ಎಸ್ ನಿರ್ಮಿಸಿದ ಸೇತುವೆ ಗಳು ಜಿಲ್ಲಾದ್ಯಂತ ಇದ್ದು ಇಂದಿಗೂ ಮುಕ್ಕಾಗಿಲ್ಲ. ಉತ್ತಮ ಗುಣಮಟ್ಟದ ಕೆಲಸ, ಸಮಾಜಕ್ಕೆ ಉಪಯುಕ್ತವಾಗುವ ಯೋಜನೆಗಳು ಶೆಟ್ಟರಿಗೆ ಕೀರ್ತಿ ತಂದವು. ಅವರ ಸಾಧನೆ ವಿವರಗಳು ಹೀಗಿದೆ.
Related Articles
Advertisement
ಶಿಕ್ಷಣ ಸಂಸ್ಥೆಗಳು: ಎಸ್ಸೆಸ್ಸೆಲ್ಸಿ ಓದಿದ ವಿದ್ಯಾರ್ಥಿಗಳಿಗೆ ವೃತ್ತಿ ತರಬೇತಿ ನೀಡಲು ಆರ್‌ಎನ್‌ಎಸ್ ಪಾಲಿಟೆಕ್ನಿಕ್ ಮುಡೇìಶ್ವರದಲ್ಲಿ ಆರಂಭವಾಯಿತು. ನಾಲ್ಕು ದಶಕ ದಲ್ಲಿ 15 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡಿದ್ದಾರೆ. ರೂರಲ್ ಪಾಲಿಟೆಕ್ನಿಕ್ ಎಂಬ ಯೋಜನೆಯನ್ವಯ ಹಳ್ಳಿಹಳ್ಳಿಗೆ ಹೋಗಿ ಮಹಿಳೆ ಯರನ್ನು, ಪುರುಷರನ್ನು ಸಂಘಟಿಸಿ ವೃತ್ತಿ ತರಬೇತಿ ನೀಡಿದ್ದಾರೆ. ವಯಸ್ಸು, ವಿದ್ಯಾರ್ಹತೆ ನಿರ್ಬಂಧ ಇಲ್ಲದೆ ಆಸಕ್ತರೆಲ್ಲರಿಗೆ ಹೊಲಿಗೆ, ಮೆಕ್ಯಾನಿಕ್, ಟೈಪಿಂಗ್, ಮೊಬೈಲ್ ರಿಪೇರಿ ಸಹಿತ 25ಕ್ಕೂ ಹೆಚ್ಚು ವೃತ್ತಿಗಳಿಗೆ ಉಚಿತ ತರಬೇತಿ ನೀಡಲಾಗಿದೆ. ಇಲ್ಲಿ ತರಬೇತಿ ಪಡೆದ ಶೇ.60 ಜನ ಸ್ವಂತ ಉದ್ಯೋಗ ಮಾಡುತ್ತಿದ್ದಾರೆ. 30 ಸಾವಿರ ಜನ ಈವರೆಗೆ ತರಬೇತಿ ಪಡೆದಿದ್ದಾರೆ. ಆರ್‌ಎನ್‌ಎಸ್ ನರ್ಸಿಂಗ್ ಕಾಲೇಜು, ಪಿಯು ಕಾಲೇಜು, ಪದವಿ ಕಾಲೇಜು, ವಿದ್ಯಾನಿಕೇತನ ಮೊದಲಾದ ಸಂಸ್ಥೆಗಳು ಮುಡೇìಶ್ವರದ ಯುವಕ ರಿಗೆ ವಿದ್ಯೆ ನೀಡಿವೆ. ಬೆಂಗಳೂರಿನಲ್ಲಿ ಆರ್‌ಎನ್‌ಎಸ್ ತಾಂತ್ರಿಕ ಮಹಾವಿದ್ಯಾಲಯ, ಪಿಯು ಕಾಲೇಜು, ಪ್ರಥಮ ದರ್ಜೆ ಕಾಲೇಜು, ಇಂಟರ್‌ನ್ಯಾಶನಲ್ ಸ್ಕೂಲ್, ಸ್ಕೂಲ್ ಆಫ್ ಆರ್ಕಿಟೆಕ್ಚರ್, ಶ್ರೀಮತಿ ಸುಧಾ ಆರ್.ಎನ್. ಶೆಟ್ಟಿ ಶಾಲೆ ತಲೆ ಎತ್ತಿದವು.
ಸಾರ್ವಜನಿಕ ಗೌರವ: 2009ರಲ್ಲಿ ಬೆಂಗಳೂರು ವಿವಿ ಗೌರವ ಡಾಕ್ಟರೇಟ್, ಎಫ್ಕೆಸಿಸಿಐನಿಂದ ವಿಶ್ವೇಶ್ವರಯ್ಯ ಮೆಮೋರಿಯಲ್ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕಾಸಿಯಾದಿಂದ ಕೈಗಾರಿಕಾ ರತ್ನ ಪ್ರಶಸ್ತಿ, ಕೆನರಾ ಕಾಲೇಜು ಸೊಸೈಟಿಯಿಂದ ಕೆನರಾ ರತ್ನ ಪುರಸ್ಕಾರ ಹಾಗೂ ವಿವಿಧ ಮಠಗಳು ಸಹಿತ ಧಾರ್ಮಿಕ ಕ್ಷೇತ್ರದ ಮುಖಂಡರು ಆರ್.ಎನ್. ಶೆಟ್ಟಿಯವರನ್ನು ಸನ್ಮಾನಿಸಿ ಕ್ಷೇತ್ರ ಗೌರವ ನೀಡಿದ್ದಾರೆ.
ಕೈಗಾರಿಕೆ, ಉದ್ಯೋಗ, ನಿರ್ಮಾಣ: ಆರ್‌ಎನ್‌ಎಸ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್, ನವೀನ್ ಸ್ಟ್ರಕ್ಚರಲ್ ಆ್ಯಂಡ್ ಎಂಜಿನಿಯರಿಂಗ್ ಕಂಪನಿ, ಅಪ್ಪರ್ ಭದ್ರಾ ಪ್ರೊಜೆಕ್ಟ್, ಶರಾವತಿ ಟೇಲರೀಸ್ ಡ್ಯಾಂ, ಸುಪಾ ಡ್ಯಾಂ, ವಾರಾಹಿ ಡ್ಯಾಂ, ನೃಪತುಂಗಾ ರೋಡ್, ಓಲ್ಡ್ ಏರ್‌ಪೋರ್ಟ್ ರೋಡ್, ಆರ್‌ಎನ್‌ಎಸ್ ವಿಂಡ್ ಪವರ್ ಗದಗ, ಆರ್‌ಎನ್‌ಎಸ್ ಸೋಲಾರ್ ಪವರ್, ಪಾವಗಡ, ಅಪ್ಪರ್ ಕೃಷ್ಣಾ ಪ್ರೊಜೆಕ್ಟ್, ಕೊಂಕಣ ರೈಲ್ವೆಯ 18 ಸುರಂಗಗಳು, ನಾರಾಯಣಪುರದಲ್ಲಿ 12 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ, ಪಣಜಿ- ಮಂಗಳೂರು, ಧಾರವಾಡ-ಬೆಳಗಾವಿ ಹೈವೇ, ಸರ್ವಧರ್ಮ ಪ್ರಾರ್ಥನಾ ಮಂದಿರ (ಆರ್‌ಎನ್‌ಎಸ್ ಹಾಸ್ಪಿಟಲ್ ಎದುರು), ಕೃಷಿ ಪ್ರಯೋಗಗಳು, ಹಣ್ಣಿನ ತೋಟಗಳು, ಶಂಕರ ಮಠ ಧಾರವಾಡ, ಆರ್‌ಎನ್‌ಎಸ್ ಸ್ಟೇಡಿಯಂ ಧಾರವಾಡ, ಆರ್‌ಎನ್‌ಎಸ್ ಪಾಲಿಟೆಕ್ನಿಕ್ ಶಿರಸಿ, ಇಡಗುಂಜಿಯಿಂದ ಮುಡೇì ಶ್ವರ ಕುಡಿಯುವ ನೀರಿನ ಯೋಜನೆಗಳನ್ನು ನಿರ್ಮಿ ಸಲಾಗಿದೆ. ಮುಡೇìಶ್ವರ ಸಿರಾಮಿಕ್ ಲಿಮಿಟೆಡ್ ನೆಲಹಾಸು ಹಂಚುಗಳನ್ನು ಉತ್ಪಾದಿಸುತ್ತಿದೆ. ಆರ್‌ಎನ್‌ಎಸ್ ಶಾಂತಿನಿಕೇತನ ಎಂಬ 500 ಮನೆಗಳ ಅಪಾರ್ಟ್‌ಮೆಂಟ್ ನಿರ್ಮಾಣ, ಪಂಚತಾರಾ ತಾಜ್ ಹೋಟೆಲ್-ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ನಿರ್ಮಾಣ, ನವೀನ್ ಹೋಟೆಲ್, ಮುಡೇìಶ್ವರದಲ್ಲಿ ಆರ್‌ಎನ್‌ಎಸ್ ರೆಸಿಡೆನ್ಸಿ, ಆರ್‌ಎನ್‌ಎಸ್ ಗಾಲ್ಫ್ ಕ್ಲಬ್, ಮಾರುತಿ ಕಾರುಗಳ ಮಾರಾಟದ ಏಜೆನ್ಸಿ ಪಡೆದುಕೊಂಡ ಆರ್‌ಎನ್‌ಎಸ್ ಮೋಟಾರ್ ಹುಬ್ಬಳ್ಳಿ, ಬೆಂಗಳೂರು, ಮುರ್ಡೇಶ್ವರದಲ್ಲಿ ಶಾಖೆ ಆರಂಭಿಸಿ ಹೆಸರು ಗಳಿಸಿದೆ.
ಬಡವರಿಗೆ ನೆರವಾದ ಆರೋಗ್ಯ ಶಿಬಿರಗಳು100 ಹಾಸಿಗೆಗಳ ಮುರ್ಡೇಶ್ವರ ಆಸ್ಪತ್ರೆ ಆರ್‌ಎನ್‌ಎಸ್ ಅವರ ಕೊಡುಗೆ. ಆರ್‌ಎನ್‌ಎಸ್ ಟ್ರಸ್ಟ್ ನಾಡಿನಾದ್ಯಂತ ದೇವಾಲಯ, ಆಸ್ಪತ್ರೆ ನಿರ್ಮಾಣ, ನೆರೆ ಹಾವಳಿ, ಬರಗಾಲ ಸಂದರ್ಭದಲ್ಲಿ ಬಹುಕೋಟಿ ನೆರವು ನೀಡಿದೆ. ನೂರಾರು ಉಚಿತ ಆರೋಗ್ಯ ಶಿಬಿರಗಳು ಬಡವರಿಗೆ ನೆರವಾಗಿವೆ. ಕೊರೊನಾ ಸಂಕಟ ಕಾಲದಲ್ಲಿ ಕೇಂದ್ರ ನಿಧಿ ಗೆ 3 ಕೋಟಿ ಮತ್ತು ರಾಜ್ಯ ನಿಧಿ ಗೆ 1 ಕೋಟಿ ಸೇರಿ 4 ಕೋಟಿ ರೂ. ಆರ್.ಎನ್. ಶೆಟ್ಟಿಯವರು ತಮ್ಮ ಟ್ರಸ್ಟ್ ಮುಖಾಂತರ ನೀಡಿದ್ದಾರೆ. ಕಾರ್ಮಿಕರು-ಸಿಬ್ಬಂದಿಯ ವಿವಾಹ, ಚಿಕಿತ್ಸೆಗೆ ನೆರವು ನೀಡಿದ್ದಾರೆ. ಬೆಂಗಳೂರಿನ ಬಂಟ್ ಸಂಘದ ಶಾಲೆಗೆ, ಹುಬ್ಬಳ್ಳಿ ಮತ್ತು ಕುಂದಾಪುರದ ಆರ್‌ಎನ್‌ಎಸ್ ಕಲ್ಯಾಣ ಮಂಟಪಗಳಿಗೆ ದೊಡ್ಡ ಮೊತ್ತದ ದಾನ ನೀಡಿದ್ದಾರೆ. ಪ್ರತಿವರ್ಷ 5 ಸಾವಿರ ಮಕ್ಕಳಿಗೆ ಶಿಷ್ಯವೇತನ, ಸಮವಸ್ತ್ರ, ಪಠ್ಯಪುಸ್ತಕ ನೀಡಲಾಗುತ್ತಿದೆ. ಡಾ| ಹೆಗ್ಗಡೆ ಸಂತಾಪ
ಆರ್.ಎನ್. ಶೆಟ್ಟಿ ಅವರ ನಿಧನ ವಾರ್ತೆ ತಿಳಿದು ವಿಷಾದವಾಯಿತು. ಅವರು ನಾನು ಮೆಚ್ಚಿದ ವ್ಯಕ್ತಿ. ವ್ಯವಹಾರ, ಧಾರ್ಮಿಕತೆ ಎಲ್ಲ ರಂಗದಲ್ಲಿಯೂ ಯಶಸ್ಸು ಪಡೆದು ಮಾದರಿ ಅನ್ನಿಸಿಕೊಂಡಿದ್ದರು. ಆದರ್ಶ ಜೀವನವನ್ನು ನಡೆಸಿದ ಶೆಟ್ಟಿಯವರ ಜೀವನ ಇತರರಿಗೆ ಮಾದರಿ.
ಡಾ| ಡಿ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗಣ್ಯರ ಸಂತಾಪ
ಆರ್.ಎನ್. ಶೆಟ್ಟಿ ಅವರ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ, ಡಿಸಿಎಂ ಗೋವಿಂದ ಕಾರಜೋಳ, ಸಚಿವ ಜಗದೀಶ್ ಶೆಟ್ಟರ್, ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಚಿವ ರಮಾನಾಥ ರೈ ಸಹಿತ ನಾಡಿನ ಗಣ್ಯರು ಕಂಬನಿ ಮಿಡಿದಿದ್ದಾರೆ. ಜೀಯು ಹೊನ್ನಾವರ