ಎಂಬ ಚಿಂತೆಯಲ್ಲಿದ್ದಾರೆ.
Advertisement
ಲಾಕ್‌ಡೌನ್ ಜಾರಿಗೂ ಒಂಬತ್ತು ದಿನ ಮೊದಲೇ ಸ್ಥಗಿತಗೊಂಡ ಮಾಲ್, ಮಲ್ಟಿಪ್ಲೆಕ್ಸ್ ಹಾಗೂ ಚಿತ್ರಮಂದಿರಗಳ ಮಾಲಿಕರು, ಬಾಡಿಗೆದಾರರಿಗೆ ತೊಂದರೆಗೆ ಒಳಗಾಗಿದ್ದರೆ, ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಿಟ್ಟಿನಲ್ಲಿ ಲಾಕ್‌ಡೌನ್ ಅವಧಿ ನಂತರವೂ ಸೋಂಕು ಭೀತಿಯು ಅಡ್ಡಪರಿಣಾಮ ಬೀರುವ ಆತಂಕ ಈ ವಲಯವನ್ನು ಕಾಡುತ್ತಿದೆ. ಸರ್ಕಾರದ ಸೂಚನೆಯಂತೆ ಏಕ ಪರದೆ ಚಲನಚಿತ್ರ ಮಂದಿರಗಳು, ಮಲ್ಟಿಪ್ಲೆಕ್ಸ್‌ಗಳು ತಿಂಗಳಿಂದ ಸ್ಥಗಿತಗೊಂಡಿವೆ. ರಾಜ್ಯದಲ್ಲಿ 650 ಏಕಪರದೆ ಚಲನಚಿತ್ರ ಮಂದಿರಗಳಿದ್ದು, ಸುಮಾರು 13,000 ಮಂದಿ ಕಾರ್ಮಿಕರಿದ್ದಾರೆ. ಇದರಲ್ಲಿ ಬಹುಪಾಲು ಮಂದಿ ಕಾಯಂ ನೌಕರರು. ಸೋಂಕು ಭೀತಿತೀವ್ರವಾಗಿರುವುದರಿಂದ ಮುಂದೆ ನೌಕರರು ಸಿಗುತ್ತಾರೋ ಇಲ್ಲವೋ ಎಂಬ ಆತಂಕ ಮಾಲಿಕರಲ್ಲಿ ಮೂಡಿದೆ.
ಬಳಿಕ ಜನ ಚಿತ್ರಮಂದಿರಗಳತ್ತ ಮುಖ ಮಾಡುವರೇ ಎಂಬ ಅನುಮಾನವೂ ಈ ವಲಯವನ್ನು ಕಾಡುತ್ತಿದೆ. ಮಾಲ್‌ಗಳಲ್ಲಿ ಬಾಡಿಗೆದಾರರ ಪರದಾಟ: ಮಾಲ್
ಗಳು ತಿಂಗಳಿಂದ ಬಂದ್ ಆಗಿರುವುದರಿಂದ ಬಾಡಿಗೆದಾರರು (ರಿಟೇಲರ್‌ಗಳು) ತೊಂದರೆಗೆ ಸಿಲುಕುವಂತಾಗಿದೆ. ಮಾಲಿಕರೊಂದಿಗೆ ಒಡಂಬಡಿಕೆಯಂತೆ ಮಾಲ್ ಸಂಪೂರ್ಣ ಬಂದ್ ಆದರೆ ಮಾಸಿಕ ಬಾಡಿಗೆ ವಿನಾಯ್ತಿಗೆ ಅವಕಾಶವಿದೆ ಎನ್ನಲಾಗಿದೆ. ಅದರಂತೆ ಬಹುತೇಕ ಮಾಲ್‌ಗಳು ಬಾಡಿಗೆದಾರರಿಗೆ ವಿನಾಯ್ತಿ ನೀಡಬೇಕಿದ್ದು, ಎಷ್ಟರ ಮಟ್ಟಿಗೆ ವಿನಾಯ್ತಿ ನೀಡಲಿದ್ದಾರೆ ಎಂದು ಕಾದುನೋಡಬೇಕಿದೆ. ನಿಗದಿತ-ಬೇಡಿಕೆ ಶುಲ್ಕ ಪಾವತಿ ಹೊರೆ?: ಮಾಲ್ ಗಳಿಗೆ ವಿಧಿಸುವ ಮಾಸಿಕ ವಿದ್ಯುತ್, ನೀರಿನ ಬಿಲ್ ಮೊತ್ತದ ಜತೆಗೆ ನಿಗದಿತ ಶುಲ್ಕ ಇಲ್ಲವೇ ಬೇಡಿಕೆ ಶುಲ್ಕ
ಪಾವತಿ ಭರಿಸುವುದು ಹೊರೆಯಾಗಿ ಪರಿಣಮಿಸಿದೆ ಎಂದು ಮಾಲ್, ಮಲ್ಟಿಪ್ಲೆಕ್ಸ್‌ಗಳ ಮಾಲೀಕರು ಅಲವತ್ತುಕೊಳ್ಳುತ್ತಾರೆ. ಜಲಮಂಡಳಿಯು ನೀರಿನ
ಬಿಲ್ ಮೊತ್ತದ ಜತೆಗೆ ನಿರ್ವಹಣಾ ಶುಲ್ಕ ವಿಧಸುತ್ತಿದೆ. ಹಾಗೆಯೇ ಎಸ್ಕಾಂಗಳು ವಿದ್ಯುತ್ ಬಳಕೆ ಶುಲ್ಕದ ಜತೆಗೆ ಮಂಜೂರಾದ ಗುತ್ತಿಗೆ ಬೇಡಿಕೆಯ (ಸ್ಯಾಂಕ್ಷನ್
ಕಾಂಟ್ರಾಕ್ಟ್ ಡಿಮ್ಯಾಂಡ್) ಶೇ. 80ರಷ್ಟು ಮೊತ್ತವನ್ನು ಬೇಡಿಕೆ ಶುಲ್ಕದ ರೂಪದಲ್ಲಿ ಸಂಗ್ರಹಿಸುತ್ತಿದೆ. ಲಾಕ್ ಡೌನ್‌ನಿಂದಾಗಿ ಈ ಎರಡು ಶುಲ್ಕ ಮನ್ನಾ
ಮಾಡಬೇಕು. ಇಲ್ಲವೇ ಕಂತಿನಲ್ಲಿ ಪಾವತಿಸಲು ಅವಕಾಶ ನೀಡಬೇಕು ಎಂಬುದು ಕೆಲ ಮಾಲ್ ಮಾಲಿಕರ ಆಗ್ರಹ.
Related Articles
Advertisement
ಹೊಸ ಸಮಸ್ಯೆಗೆ ಹೊಸ ಪರಿಹಾರ ಅವಶ್ಯಕೋವಿಡ್-19 ಸೋಂಕಿನ ಭೀತಿ ಹೊಸ ಸಮಸ್ಯೆಯಾಗಿದ್ದು, ಹೊಸ ಪರಿಹಾರವನ್ನೇ ಕಂಡುಕೊಳ್ಳಬೇಕಿದೆ. ಚಿತ್ರೀಕರಣ ಸಂದರ್ಭದಲ್ಲಿ ನೂರಾರು ಮಂದಿ ಒಟ್ಟಿಗೆ ಇರುವುದು ಅನಿವಾರ್ಯ. ಹಾಗೆಯೇ ಚಿತ್ರಮಂದಿರಗಳಲ್ಲೂ ನೂರಾರು ಮಟ್ಟಿಗೆ ಒಟ್ಟಿಗೆ ಕುಳಿತು ಸಿನಿಮಾ ವೀಕ್ಷಿಸುತ್ತಾರೆ. ಹಾಗಾಗಿ ಲಾಕ್ ಡೌನ್ ಮುಗಿದರೂ ಕೆಲಕಾಲ ಸಾಮಾಜಿಕ ಅಂತರ ಪಾಲನೆ ಸವಾಲಾಗಬಹುದು. ಸದ್ಯದ ಪರಿಸ್ಥಿತಿಯಲ್ಲಿ ನಿರ್ಮಾಣ, ವಿತರಣೆ ಹಾಗೂ ಪ್ರದರ್ಶನ ವಿಭಾಗದವರು ಸಂಕಷ್ಟದಲ್ಲಿದ್ದು,
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೆರವಿಗೆ ಧಾವಿಸಬೇಕು ಎಂದು ಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮನವಿ ಮಾಡಿದರು. ದೀರ್ಘಾವಧಿ ಹೊಡೆತ
ರಾಜ್ಯದಲ್ಲಿ 650 ಏಕ ಪರದೆ ಚಿತ್ರಮಂದಿರಗಳಿದ್ದು, ಸುಮಾರು 13,000 ಮಂದಿ ನೌಕರರಿದ್ದಾರೆ. ಈ ನೌಕರರಿಗೆ ಯಾವುದೇ ರೀತಿಯ ಭದ್ರತೆ ಇಲ್ಲ. ಲಾಕ್‌ಡೌನ್ ಮುಂದುವರಿದರೆ ಕಾರ್ಮಿಕರಿಗೆ ಸಂಬಳದಲ್ಲಿ ಒಂದಿಷ್ಟು ಕಡಿತ ಮಾಡಿ, ನಂತರ ಚಿತ್ರಮಂದಿರಗಳು ಕಾರ್ಯಾರಂಭವಾದ ಬಳಿಕ ಬಾಕಿ ವೇತನ ಪಾವತಿಗೆ ಪ್ರಯತ್ನಿಸಬಹುದು. ಆದರೆ ಸೋಂಕಿನ ಭೀತಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವ್ಯವಸ್ಥೆ ಸವಾಲಾಗಿದ್ದು, ಮುಂದೆ ನೌಕರರ ಅಭಾವ ಸೃಷ್ಟಿಯಾಗುವ ಆತಂಕ ಮೂಡಿಸಿದೆ. ಜತೆಗೆ ಜನ ಚಿತ್ರಮಂದಿರಗಳಿಗೆ ಬರುತ್ತಾರೆಯೇ ಎಂಬ ಪ್ರಶ್ನೆಯೂ ಇದೆ. ಲಾಕ್ ಡೌನ್‌ನಿಂದ ದೀರ್ಘಾವಧಯಲ್ಲೂ ಸಾಕಷ್ಟು ಹೊಡೆತ ಬೀಳುವ ಆತಂಕವಿದೆ ಎಂದು ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ತಿಳಿಸುತ್ತಾರೆ. ಈಗಿನ ಪರಿಸ್ಥಿತಿಯಲ್ಲಿ ವಿದ್ಯುತ್, ನೀರು ಬಳಕೆಗೆ ವಿಧಿಸುವ ನಿಗದಿತ ಶುಲ್ಕ ಭರಿಸುವುದು ಕಷ್ಟ. ಹಾಗಾಗಿ, ಸರ್ಕಾರ ಲಾಕ್‌ಡೌನ್ ಅವಧಿಯಲ್ಲಿ ಮಾಲ್‌ಗಳ ವಿದ್ಯುತ್, ನೀರು ಬಳಕೆಗೆ ವಿಧಿಸುವ ನಿಗದಿತ ಶುಲ್ಕಕ್ಕೆ ವಿನಾಯ್ತಿ ನೀಡಬೇಕು. ಇಲ್ಲವೇ ಲಾಕ್‌ಡೌನ್ ಮುಗಿದ ಬಳಿಕ ಈ ಶುಲ್ಕವನ್ನು ಹತ್ತು ಕಂತುಗಳಲ್ಲಿ ಬಡ್ಡಿರಹಿತ ಪಾವತಿಗೆ ಅವಕಾಶ ನೀಡಬೇಕೆಂದು ಸರ್ಕಾರಕ್ಕೆ ಸಲಹೆ ನೀಡುತ್ತೇನೆ.
● ಉದಯ್ ಗರುಡಾಚಾರ್, ಗರುಡಾ ಮಾಲ್ ಸಮೂಹದ ಮುಖ್ಯಸ್ಥ ಮತ್ತು ಶಾಸಕ. ಎಂ. ಕೀರ್ತಿಪ್ರಸಾದ್