Advertisement

ವ್ಯವಹಾರ ಶುದ್ಧಿಯಿಂದ ಶಾಂತಿ ಪ್ರಾಪ್ತಿ

12:25 PM Jul 18, 2017 | |

ಕಲಬುರಗಿ: ಜೀವನದಲ್ಲಿ ಆಹಾರ-ವ್ಯವಹಾರ ಶುದ್ಧತೆ ಕಠಿಣವಾಗಿ ಮೈಗೂಢಿಸಿಕೊಂಡರೆ ಸುಖ-ಶಾಂತಿ ಪ್ರಾಪ್ತಿಯಾಗುತ್ತವೆ ಎಂದು ಬ್ರಹ್ಮಕುಮಾರಿ ಪೂನಂ ಹೇಳಿದರು.

Advertisement

ನಗರದ ಹೊರ ವಲಯ ಸೇಡಂ ರಸ್ತೆಯ ಗೀತಾ ನಗರದಲ್ಲಿರುವ ಬ್ರಹ್ಮಕುಮಾರಿಯ ಅಮೃತ ಸರೋವರದಲ್ಲಿ ನಡೆಯುತ್ತಿರುವ ಆಲ್ವಿದಾ ತನಾವ್‌ ಶಿಬಿರ ಉದ್ದೇಶಿಸಿ ಅವರು ಉಪನ್ಯಾಸ ನೀಡಿದರು. ಬ್ರಹ್ಮಕುಮಾರ-ಕುಮಾರಿ ಜೀವನದಲ್ಲಿ ಪವಿತ್ರತೆ,
ಆಹಾರ ಶುದ್ಧಿ ಹಾಗೂ ವ್ಯವಹಾರ ಶುದ್ಧಿಯನ್ನು ಕಠಿಣವಾಗಿ ಅಳವಡಿಸಿಕೊಂಡಿರುವುದನ್ನು ನೋಡಬಹುದು ಎಂದರು.

ಯೋಗ ಇದೊಂದು ಬಹು ಚರ್ಚಿತ, ಬಹು ಜನ ಪ್ರಿಯ ಹಾಗೂ ಬಹು ವ್ಯಾಪಾರಿಕರಣವಾದ ವಿಷಯ. ಪ್ರಪಂಚದಲ್ಲಿ ವಿಶೇಷವಾಗಿ ಭಾರತದಲ್ಲಿ ಬಹಳಷ್ಟು ನಾಮ ಹಾಗೂ ವಿಧಗಳಿಂದ ಹೇಳಿಕೊಡವುದನ್ನು ನಾವು ನೋಡುತ್ತೇವೆ. ಅದರಲ್ಲಿ ಆಸನ, ಪ್ರಾಣಾಯಾಮ ಪ್ರಸಿದ್ಧವಾಗಿವೆ ಎಂದರು. ಇವುಗಳಿಂದ ಖಂಡಿತವಾಗಿ ಶಾರೀರಿಕ ರೋಗಗಳು  ಕಡಿಮೆಯಾಗುವವು. ಆದರೆ ಚಾರಿತ್ರಿಕ ಉನ್ನತಿ,
ಜೀವನದಲ್ಲಿ ಪ್ರವಿತ್ರತೆ, ಸುಖ, ಶಾಂತಿಗಳ ಪ್ರಾಪ್ತಿ ಇಲ್ಲದಾಗಿದೆ. ಇದಕ್ಕೆ ಜೀವನದಲ್ಲಿ ಪವಿತ್ರತೆ, ಆಹಾರ ಶುದ್ಧಿ , ವ್ಯವಹಾರ ಶುದ್ಧಿಯೇ ಪರಿಹಾರವಾಗಿದೆ ಎಂದು ಹೇಳಿದರು.

ಯೋಗ, ಸಕಾರಾತ್ಮಕ ಚಿಂತನದಿಂದ ಮಿದುಳಿನಲ್ಲಿ ಸ್ವಾಸ್ಥಪ್ರದ ಹಾರ್ಮೋನ್‌ಗಳು ಉತ್ಪತ್ತಿಯಾಗುತ್ತವೆ. ವೈದ್ಯಕಿಯ ತಂಡ ಈ ಕುರಿತು ಗಾಢವಾದ ಅಧ್ಯಯ ನಡೆಸಿ ಹೇಗೆ ಈ ರಾಜಯೋಗ ಹೃದಯ, ಅಧಿಕ ರಕ್ತಚಾಪ ಹಾಗೂ ಮಧುಮೇಹ ರೋಗ
ನಿಯಂತ್ರಣದಲ್ಲಿ ಉಪಯುಕ್ತವಾಗಿದೆ ಎಂಬುದನ್ನು ಜನಸಾಮಾನ್ಯರಿಗೆ ತಿಳಿಸಲು ಪ್ರಯತ್ನಿಸುತ್ತಿದ್ದಾರೆ. ರೋಗ ರುಜಿನಗಳಿಗೆ ಔಷಧೋಪಚಾರ ಬೇಕು ಜೊತೆಗೆ ರಾಜಯೋಗ ದವಾ, ದುವಾ ಎರಡು ಬೇಕು ಎಂದರು.

ಬ್ರಹ್ಮಾಕುಮಾರಿ ಸಂಸ್ಥೆಯ ರಾಷ್ಟ್ರೀಯ ಸಂಯೋಜಕರಾದ ರಾಜಯೋಗ ಪ್ರೇಮಣ್ಣ ಮಾತನಾಡಿ, ಜನ್ಮ ಜನ್ಮಾಂತರದ ಅಭ್ಯಾಸದಿಂದಾಗಿ ಬಹು ಸುಲಭವಾಗಿ ನಕರಾತ್ಮಕ ವಿಚಾರಕ್ಕೆ ಒಳಗಾಗುತ್ತೇವೆ. ಆದರೆ ರಾಜಯೋಗ ಸಕಾರಾತ್ಮಕ ವಿಚಾರಗಳನ್ನು ಹುಟ್ಟುಹಾಕುವುದನ್ನು ಕಲಿಸಿಕೊಡುತ್ತದೆ. ಇದರಿಂದ ಪ್ರಕೃತಿ ಮೇಲೆ ವಿಜಯ ಸಾಧಿಸಬಹುದು ಎಂದು ಹೇಳಿದರು.

Advertisement

ಶರಣಬಸವೇಶ್ವರ ಸಂಸ್ಥಾನದ ಲಿಂಜರಾಜ ಅಪ್ಪ, ಲೋಕ್‌ ಅದಾಲತ್‌ ಅಧ್ಯಕ್ಷ ಎಸ್‌. ಎಂ. ಪಾಟೀಲ, ಸಿವಿಲ್‌ ನ್ಯಾಯಾಧೀಧಿಶ ನವೀನ, ವ್ಯಾಪಾರಿಗಳಾದ ಹರಿಪ್ರಸಾದ ತೋಷಿ¡ವಾಲ, ಸತ್ಯನಾರಾಯಣ ಬಜಾಜ, ಯುವಜನ ಸೇವಾ ಇಲಾಖೆ ಅಧಿಕಾರಿ ನಾಗರಾಜ ಮಾಳಗೆ, ಪತ್ರಕರ್ತರಾದ ಹಣಮಂತರಾವ ಭೈರಾಮಡಗಿ, ದೇವಿಂದ್ರಪ್ಪ ಆವಂಟಿ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next