Advertisement

ಕೋವಿಡ್ ಎಫೆಕ್ಟ್: ಘಟಿಕೋತ್ಸವದಲ್ಲಿ ಪದವಿ ಸ್ವೀಕರಿಸಿದ ರೋಬೋಗಳು!

09:30 PM Apr 08, 2020 | Hari Prasad |

ಟೊಕಿಯೋ: ಜಪಾನ್‌ನ ಬ್ಯುಸಿನೆಸ್‌ ಬ್ರೇಕ್‌ ತ್ರೂ ವಿಶ್ವವಿದ್ಯಾಲಯದಲ್ಲಿ (ಬಿಬಿಟಿ) ಇತ್ತೀಚೆಗೆ ನಡೆದ ಘಟಿಕೋತ್ಸವ ವಿಶಿಷ್ಟವಾಗಿತ್ತು. ಕೋವಿಡ್ 19 ವೈರಸ್ ಭೀತಿಯಿಂದಾಗಿ ಘಟಿಕೋತ್ಸವದಲ್ಲಿ ಯಾವೊಬ್ಬ ವಿದ್ಯಾರ್ಥಿಯೂ ಪಾಲ್ಗೊಂಡಿರಲಿಲ್ಲ. ಅವರ ಬದಲು ರೋಬೋಗಳು, ವಿವಿಯ ಕುಲಾಧಿಪತಿಯಿಂದ ಪದವಿ ಪ್ರಮಾಣ ಪತ್ರವನ್ನು ಪಡೆದವು!

Advertisement

ಎಲ್ಲ ದೇಶಗಳಂತೆಯೇ ಜಪಾನ್‌ ಕೂಡ ಕೋವಿಡ್ 19 ವೈರಸ್ ಭೀತಿಯಲ್ಲಿದೆ. ಇಲ್ಲಿಯವರೆಗೆ ಜಪಾನ್ ದೇಶದಲ್ಲಿ 3,906 ಪ್ರಕರಣಗಳು ದಾಖಲಾಗಿವೆ ಹಾಗೂ ಈ ಮಾರಕ ವೈರಸ್ ಗೆ 54 ಜನರು ಮೃತಪಟ್ಟಿದ್ದಾರೆ. ಹಾಗಾಗಿ, ಇಡೀ ಜಪಾನ್‌ನಲ್ಲಿ ಲಾಕ್‌ ಡೌನ್‌ ಪರಿಸ್ಥಿತಿ ಇದೆ. ಇದೆಲ್ಲದರ ನಡುವೆಯೇ ಬಿಬಿಟಿಯ ಘಟಿಕೋತ್ಸವ ನಡೆದಿತ್ತು.

ಸಮಾರಂಭದಲ್ಲಿ, ಪದವಿ ಸ್ವೀಕರಿಸಲಿದ್ದ ಪ್ರತೀ ವಿದ್ಯಾರ್ಥಿಯೂ ಒಂದೊಂದು ರೋಬೋಗಳನ್ನು ತಮ್ಮ ಪರವಾಗಿ ಸಭಾಂಗಣದಲ್ಲಿ ಕೂರಿಸಿದ್ದರು. ಅವುಗಳ ಮುಖಕ್ಕೆ ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನದೇ ಆದ ಐಪ್ಯಾಡ್‌ಗಳನ್ನು ಜೋಡಿಸಿದ್ದರು.

ಆ ಐಪ್ಯಾಡ್‌ಗಳಲ್ಲಿ ವಿದ್ಯಾರ್ಥಿಗಳ ಮುಖ ಕಾಣಿಸುತ್ತಿತ್ತು. ವೇದಿಕೆಯ ಮೇಲೆ ವಿವಿ ಸಿಬ್ಬಂದಿ ಒಬ್ಬೊಬ್ಬ ವಿದ್ಯಾರ್ಥಿಯ ಹೆಸರನ್ನು ಕರೆದಾಗ ಆಯಾ ವಿದ್ಯಾರ್ಥಿಯ ರೋಬೋ ವೇದಿಕೆ ಮೇಲೇರಿ ಪದವಿ ಪ್ರಮಾಣ ಪತ್ರ ಸ್ವೀಕರಿಸಿ ಬರುತ್ತಿದ್ದವು. ವಿದ್ಯಾರ್ಥಿಗಳು ಮನೆಯಲ್ಲಿ ಕುಳಿತೇ ಈ ರೋಬೋಗಳನ್ನು ನಿಯಂತ್ರಿಸಿದ್ದು ವಿಶೇಷ !

Advertisement

Udayavani is now on Telegram. Click here to join our channel and stay updated with the latest news.

Next