Advertisement

ದುಬಾರಿ ಪ್ರಯಾಣ ದರ: ಕೋರ್ಟ್‌ಗೆ ಅರ್ಜಿ

02:21 AM May 03, 2020 | Sriram |

ಬೆಂಗಳೂರು: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬೆಂಗಳೂರು ಸಹಿತ ಬೇರೆ ಬೇರೆ ಜಿಲ್ಲೆಗಳಲ್ಲಿ ಸಿಕ್ಕಿಕೊಂಡು ಅತಂತ್ರರಾಗಿದ್ದ ವಲಸೆ ಕಾರ್ಮಿಕರನ್ನು ಅವರ ಸ್ವಂತ ಊರುಗಳಿಗೆ ತೆರಳಲು ದುಬಾರಿ ಪ್ರಯಾಣ ದರ ನಿಗದಿಪಡಿಸಿರುವ ಸಾರಿಗೆ ಇಲಾಖೆಯ ಕ್ರಮವನ್ನು ಪ್ರಶ್ನಿಸಿ ತುಮಕೂರು ಮೂಲದ ವಕೀಲ ಎಲ್‌.ರಮೇಶ್‌ ನಾಯಕ್‌ ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಸಿದ್ದಾರೆ.

Advertisement

ಲಾಕ್‌ಡೌನ್‌ ಘೋಷಿಸಿದ ಪರಿಣಾಮ ಬೆಂಗಳೂರು ಸಹಿತ ರಾಜ್ಯದ ಇತರ ನಗರ ಪ್ರದೇಶಗಳಲ್ಲಿ ಉದ್ಯೋಗ ಅರಸಿ ಬಂದಿದ್ದ ವಲಸೆ ಕಾರ್ಮಿಕರು, ದಿನಗೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು ತಮ್ಮ ಸ್ವಂತ ಊರಿಗೆ ತೆರಳಲು ಸಾಧ್ಯವಾಗದೆ ಸಂಕಷ್ಟ ಎದುರಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಅವರಿಗೆ ಅವರ ಸ್ವಂತ ಊರುಗಳಿಗೆ ಸುರಕ್ಷಿತವಾಗಿ ಕಳುಹಿಸಿಕೊಡಲು ಸರಕಾರವೇ ವ್ಯವಸ್ಥೆ ಮಾಡಬೇಕು. ಆದರೆ ಕಾರ್ಮಿಕರಿಗೆ ಬಸ್‌ ವ್ಯವಸ್ಥೆ ಮಾಡಿರುವ ಸರಕಾರ ದುಬಾರಿ ಪ್ರಯಾಣ ದರ ನಿಗದಿಪಡಿಸಿದೆ. ಕೆಲಸ ಇಲ್ಲದೇ ಆದಾಯ ಕಾಣದ ವಲಸೆ ಕಾರ್ಮಿಕರು ಇಷ್ಟೊಂದು ದುಬಾರಿ ಪ್ರಯಾಣ ದರ ಪಾವತಿಸಲು ಸಾಧ್ಯವಿಲ್ಲ. ಸಾರಿಗೆ ಇಲಾಖೆಯ ಈ ಕ್ರಮ ಸಂವಿಧಾನ ಮತ್ತು ಕಾನೂನು ಬಾಹಿರ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next