ಕಲಬುರಗಿ: ನೆರೆ ರಾಜ್ಯಗಳಿಗೆ ಬಸ್ ಸಂಚರಿಸುವ ನಿಟ್ಟಿನಲ್ಲಿ ಮೊದಲನೇಯದಾಗಿ ಆಂಧ್ರ ಪ್ರದೇಶಕ್ಕೆ ಬಸ್ ಸಂಚಾರ ಶುರು ಮಾಡಲಾಗುತ್ತಿದೆ ಎಂದು ಉಪಮುಖ್ಯಮಂತ್ರಿಗಳಾಗಿರುವ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದರು.
ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಅಧ್ಯಕ್ಷರಾಗಿ ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆಯ ರಾಜ್ಯಗಳಿಗೆ ಬಸ್ ಸಂಚರಿಸುವ ಸಂಬಂಧಿಸಿದಂತೆ ಮಹಾರಾಷ್ಟ್ರ ಹೊರತುಪಡಿಸಿ ಎಲ್ಲ ನೆರೆಯ ರಾಜ್ಯಗಳಿಗೆ ಪತ್ರ ಬರೆಯಲಾಗಿದೆ. ಈಗ ನೆರೆಯ ಆಂಧ್ರಪ್ರದೇಶದ ಒಪ್ಪಿಗೆ ನೀಡಿದೆ. ಹೀಗಾಗಿ ಎರಡು ಮೂರು ದಿನದೊಳಗೆ ಬಸ್ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ನೆರೆಯ ರಾಜ್ಯಗಳಾದ ತಮಿಳುನಾಡು, ಪಾಂಡಿಚೇರಿ, ಕೇರಳ, ತೆಲಂಗಾಣಕ್ಕೆ ಪತ್ರ ಬರೆಯಲಾಗಿದೆ. ಈಗ ಆಂಧ್ರಪ್ರದೇಶ ತನ್ನ ಒಪ್ಪಿಗೆ ನೀಡಿದೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಬಸ್ ಸಂಚಾರ ಶುರು ಮಾಡಲಾಗುವುದು ಎಂದು ವಿವರಣೆ ನೀಡಿದರು.
ಇದನ್ನೂ ಓದಿ: ವೇತನ 30 ಸಾ.ರೂ.; ಆತ ನೀಡುತ್ತಿದ್ದುದು 1.5 ಲ.ರೂ.! ಇದು ಡ್ರಗ್ಸ್ ಆರೋಪಿ ರವಿಶಂಕರ್ ಕಥೆ
ದಿನಾಲು ಸಾರಿಗೆ ಸಂಸ್ಥೆಯಲ್ಲಿ ಒಂದು ಕೋಟಿ ಜನ ಸಂಚರಿಸುತ್ತಿದ್ದರು. ಆದರೆ ಅದರಲ್ಲಿ ಕೇವಲ 35 ರಿಂದ 40 ಪ್ರತಿಶತದಷ್ಟು ಮಾತ್ರ ಜನ ಪ್ರಯಾಣಿಸುತ್ತಿದ್ದಾರೆ. ಕೋವಿಡ್ ದಿಂದ ಹೆಚ್ಚಿಗೆ ನಷ್ಟ ಆಗಿದ್ದರೆ ಅದು ಸಾರಿಗೆ ಸಂಸ್ಥೆಯಾಗಿದೆ. ನಾಲ್ಕು ನಿಗಮಗಳಿಂದ 2760 ಕೋ ರೂ ನಷ್ಟವಾಗಿದೆ. ದಿನಾಲು ಅಂದಾಜು ಒಂದುವರೆ ಕೋ.ರೂ ನಷ್ಟವಾಗಿದೆ. ಈಗ ಸೋರಿಕೆ ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಎನ್ಇಕೆಆರ್ ಟಿಸಿ ಸಂಸ್ಥೆಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ರಾಜಕುಮಾರ ಪಾಟೀಲ್ ಅವರು ನಿಗಾ ವಹಿಸಲಿದ್ದಾರೆ. ಸಂಸ್ಥೆಯ ನೌಕರರು- ಸಿಬ್ಬಂದಿಯನ್ನು ಕಡ್ಡಾಯವಾಗಿ ರಜೆ ಕಳುಹಿಸಿಲ್ಲ ಎಂದು ವಿವರಣೆ ನೀಡಿದರು.
ಇದನ್ನೂ ಓದಿ: ಬೀದಿ ನಾಯಿ ಸಂಬರಗಿಯನ್ನು ಹಾಗೆ ಬಿಡಬೇಡಿ, ನಾನು ಸತ್ತರೂ ಅವನನ್ನು ಬಿಡುವುದಿಲ್ಲ: ಸಂಜನಾ
ವಿಧಾನಸಭಾ ಅಧಿವೇಶನ ಮುಂಚೆ ಸಂಪುಟ ವಿಸ್ತರೇ ಇಲ್ಲವೋ ಪುನರಾಚನೆ ಎಂಬುದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರವಾಗಿದೆ ಎಂದು ಇದೇ ಸಂದರ್ಭದಲ್ಲಿ ಸವದಿ ತಿಳಿಸಿದರು.
ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ, ಶಾಸಕರಾದ ಬಿ.ಜಿ.ಪಾಟೀಲ್, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಶಶೀಲ್ ನಮೋಶಿ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ ಸೇರಿದಂತೆ ಮುಂತಾದವರಿದ್ದರು