Advertisement
2,500 ಕಿ.ಮೀ. ದೂರದಲ್ಲಿರುವ ಚಂಡೀಗಢಕ್ಕೆ 5ರಿಂದ 6 ದಿನಗಳಲ್ಲಿ ಈ ಬಸ್‌ಗಳು ರೈಲಿನ ಮೂಲಕ ತಲುಪಲಿವೆ. ಈ ಹಿಂದೆ ಪ್ಯಾಸೆಂಜರ್ ಬಸ್‌ಗಳನ್ನು ದೊಡ್ಡ ದೊಡ್ಡ ಟ್ರಕ್‌ಗಳ ಮೂಲಕ ಸಾಗಣೆ ಮಾಡಲಾಗುತ್ತಿತ್ತು. ಇದರಿಂದ ಸಮಯದ ಜತೆಗೆ ಭಾರಿ ಪ್ರಮಾಣದ ಡೀಸೆಲ್ ಖರ್ಚಾಗುತ್ತಿತ್ತು. ವಾಯುಮಾಲಿನ್ಯ ಮತ್ತು ಸಂಚಾರದಟ್ಟಣೆ ಹೆಚ್ಚಿತ್ತು.
32 ರ್ಯಾಕ್‌ಗಳಲ್ಲಿ ಮೊದಲ ಹಂತದಲ್ಲಿ ಬಿಎಸ್-6 ಮಾದರಿಯ 32 ಪ್ರಯಾಣಿಕರ ಬಸ್‌ಗಳನ್ನು ಚಂಡೀಗಢಕ್ಕೆ ರೈಲಿನಲ್ಲಿ ಸಾಗಣೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ 64 ಬಸ್‌ಗಳನ್ನು ವಿವಿಧ ಹಂತಗಳಲ್ಲಿ ರೈಲಿನಲ್ಲೇ ಸಾಗಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಬ್ಯುಸಿನೆಸ್ ಡೆವಲಪ್‌ಮೆಂಟ್ ಯೂನಿಟ್ ತಂಡವು ಅಶೋಕ್ ಲೈಲ್ಯಾಂಡ್ ಹಾಗೂ ಐವಿಸಿ ಲಾಜಿಸ್ಟಿಕ್ಸ್ ಮತ್ತು ಹಿಮಾಚಲ ಪ್ರದೇಶ ರಸ್ತೆ ಸಾರಿಗೆ ನಿಗಮದೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಇದರ ನೆರವಿನಿಂದ ಸಾಗಣೆ ಸಾಧ್ಯವಾಗಿದೆ ಎಂದು ಬೆಂಗಳೂರು ವಿಭಾಗೀಯ ರೈಲ್ವೆ ತಿಳಿಸಿದೆ.
Related Articles
Advertisement