Advertisement
ಅದರಲ್ಲೂ ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ವಿವಿಧ ಸ್ಥಳಗಳಿಂದ ತಮ್ಮ ಊರುಗಳಿಗೆ ತೆರಳಲು ಬೆಳಗ್ಗೆ ಮಂಗಳೂರಿನ ಬಿಜೈನಲ್ಲಿ ರುವ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣಕ್ಕೆ ಆಗಮಿಸಿದ ಮಂದಿ ಅಲ್ಲಿಂದ ಮತಗಟ್ಟೆಗಳಿಗೆ ತೆರಳುವುದಕ್ಕೆ ನೇರ ಬಸ್ ಸೇವೆ ಸಿಗದೆ ತಾಸುಗಟ್ಟಲೆ ಕಾದು ನಿಂತು ಸಾರಿಗೆ ಸಂಸ್ಥೆಗೆ ಹಿಡಿಶಾಪ ಹಾಕುತ್ತಿದ್ದ ದೃಶ್ಯ ಕಾಣಿಸಿತು.
ಸಾಮಾನ್ಯವಾಗಿ ರಾತ್ರಿ 11 ಗಂಟೆಗೆ ಬೆಂಗಳೂರಿನಿಂದ ಹೊರಟ ಖಾಸಗಿ, ಸರಕಾರಿ ಬಸ್‌ಗಳು ಬೆಳಗ್ಗೆ ಸುಮಾರು 6.30ಗೆ ಮಂಗಳೂರು ತಲುಪುತ್ತವೆ. ಆದರೆ ಶುಕ್ರವಾರ ರಾತ್ರಿ ಪ್ರಯಾಣಿಕರು ಹೆಚ್ಚಿದ್ದ ಹಿನ್ನೆಲೆಯಲ್ಲಿ ಬೆಂಗಳೂರು ಸಿಟಿಯಿಂದ ತೆರಳುವಾಗಲೇ ರಾತ್ರಿ 12 ಗಂಟೆ ಕಳೆದಿತ್ತು, ಈ ಕಾರಣದಿಂದ ಅನೇಕ ಬಸ್‌ಗಳು ಬೆಳಗ್ಗೆ ಸುಮಾರು 9 ಗಂಟೆಯ ಬಳಿಕ ಮಂಗಳೂರಿಗೆ ತಲುಪಿದವು.
Related Articles
ಚುನಾವಣೆ ಶನಿವಾರ ಬಂದ ಕಾರಣ ದೂರದ ಊರುಗಳಿಂದ ಕರಾವಳಿ ಪ್ರದೇಶಕ್ಕೆ ಬಂದ ಹೆಚ್ಚಿನ ಮಂದಿ ರವಿವಾರ ಪುನಃ ತೆರಳುತ್ತಿದ್ದಾರೆ. ಬಸ್‌ಗಳಲ್ಲಿ ಮುಂಗಡ ಬುಕ್ಕಿಂಗ್ ಬಹುತೇಕ ಫುಲ್ ಆಗಿದೆ. ಖಾಸಗಿ ಬಸ್ ಮಾಲಕರು ಮಂಗಳೂರಿನಿಂದ ಬೆಂಗಳೂರಿಗೆ 2000 ರೂ. ನಿಗದಿ ಮಾಡಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ.
Advertisement
ಸುಮಾರು 180ಕ್ಕೂ ಹೆಚ್ಚಿನ ಕೆಎಸ್‌ಆರ್‌ಟಿಸಿ ಬಸ್‌ಗಳು ಚುನಾವಣಾ ಕಾರ್ಯ ನಿಮಿತ್ತ ವಿವಿಧ ಪ್ರದೇಶಗಳಿಗೆ ತೆರಳಿದ್ದವು. ರವಿವಾರ ಪ್ರಯಾಣಿಕರು ಹೆಚ್ಚಿರುವ ಹಿನ್ನೆಲೆಯಲ್ಲಿ ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ಬಸ್ ಕಾರ್ಯಾಚರಣೆ ನಡೆಸುತ್ತೇವೆ.– ದೀಪಕ್ ಕುಮಾರ್, ಕೆಎಸ್‌ಆರ್‌ಟಿಸಿ, ಮಂಗಳೂರು ವಿಭಾಗಾಧಿಕಾರಿ ಪ್ರಯಾಣಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆ ಉಂಟಾಗಬಾರದೆಂದು ಕ್ರಮ ಕೈಗೊಂಡಿದ್ದು, ಹೆಚ್ಚಿನ ಟ್ರಿಪ್ ಇರುವ ಪ್ರದೇಶಗಳಿಂದ ಕೆಲವು ಟ್ರಿಪ್ ಕಡಿತಗೊಳಿಸಿ ಬಸ್ ನಿಯೋಜಿಸಲಾಗಿದೆ. ಇದರಿಂದಾಗಿ ಪ್ರಯಾಣಿಕರಿಗೆ ತೊಂದರೆ ಉಂಟಾಗಲಿಲ್ಲ.
-ಅಜೀಜ್ ಪರ್ತಿಪಾಡಿ, ಖಾಸಗಿ ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ